1. ಸುದ್ದಿಗಳು

ಅಕ್ಟೋಬರ್‌ 29,30ಕ್ಕೆ ಬೆಂಗಳೂರಿನಲ್ಲಿ ಕಾಫಿ ಸಂತೆ, ವಿಶೇಷತೆಗಳೇನು ಗೊತ್ತೆ ?

KJ Staff
KJ Staff
coffee

Coffee festival ಮಹಿಳೆಯರ ಕಾಫಿ ಅಲೈಯನ್ಸ್, ಇಂಡಿಯಾ ಚಾಪ್ಟರ್ (WCAI) ಸಹಯೋಗದಲ್ಲಿ ಬೆಂಗಳೂರಿನ ಜಯಮಾಲ ಪ್ಯಾಲೇಸ್‌ನಲ್ಲಿ ಅಕ್ಟೋಬರ್‌ 29 ಮತ್ತು ಅಕ್ಟೋಬರ್‌ 30ಕ್ಕೆ ಎರಡು ದಿನಗಳ ಕಾಲ ಕಾಫಿ ಸಂತೆ (ಕಾಫಿ ಮೇಳ) ನಡೆಯಲಿದೆ.

ಪಡಿತರ ಚೀಟಿದಾರರಿಗೆ ಇಲ್ಲಿದೆ ಸಿಹಿ ಸುದ್ದಿ, ಇನ್ಮುಂದೆ ನೀವು ಎಲ್ಲೆ ಇದ್ದರೂ ಈ ಸೌಲಭ್ಯ ಪಡೆಯಬಹುದು! ಏನದು ಗೊತ್ತೆ? 

ಇದು ಆರನೇ ಆವೃತ್ತಿಯ ಕಾಫಿ ಮೇಳವಾಗಿದ್ದು ಈ ಬಾರಿಯೂ ಮೇಳದಲ್ಲಿ ಹಲವು ವಿಶೇಷತೆಗಳು ಇರಲಿವೆ.  

ಕಾಫಿ ಮೇಳದಲ್ಲಿ ಹಲವು ಮಾದರಿಯ ಕಾಫಿ ಬೀಜಗಳು, ಹಲವು ವಿಧವಾದ ಬ್ರೂಗಳು, ಅಲ್ಲದೇ ಹಲವು ನೂತನ ಮಾದರಿ ಕಾಫಿ ವಸ್ತುಗಳ ಪ್ರದರ್ಶನಗಳು ನಡೆಯಲಿವೆ.

ಅಲ್ಲದೇ ಕಾಫಿ ಬೀಜದಿಂದ ತಯಾರಿಸಿದ ಪದಾರ್ಥಗಳ ಪ್ರದರ್ಶನವೂ ಸಹ ಇದೆ. ಕಾಫಿ ಉಪಕರಣಗಳ ಪ್ರದರ್ಶನಗಳು ಮತ್ತು ಸಾಮಗ್ರಿಗಳು, ಕಾಫಿಗೆ ಸಂಬಂಧಿತ ಮಾಹಿತಿ ಮತ್ತು ರಸಪ್ರಶ್ನೆ ಸ್ಪರ್ಧೆಗಳು ಸಹ ನಡೆಯಲಿವೆ ಎಂದು WCAI ಅಧ್ಯಕ್ಷೆ ಸುನಾಲಿನಿ ಮೆನನ್ ಮತ್ತು ಸದಸ್ಯೆ ಪೂರ್ಣಿಮಾ ಜೈರಾಜ್ ಶುಕ್ರವಾರ ಮಾಧ್ಯಮಗಳಿಗೆ ತಿಳಿಸಿದರು.

ಇದನ್ನೂ ಓದಿರಿ: 10ನೇ ತರಗತಿ ಪಾಸಾಗಿದ್ದರೇ ಸಾಕು KMF ನಲ್ಲಿವೆ ಉದ್ಯೋಗಾವಕಾಶ; ರೂ.97100 ಸಂಬಳ! 

Coffee festival ಪ್ರಮುಖ ಕಾಫಿ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಹಾಗೂ ಚಟುವಟಿಕೆಗಳನ್ನು ಮೇಳದಲ್ಲಿ ಪ್ರದರ್ಶಿಸಲಿವೆ. ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳು ಸಹ ನಡೆಯಲಿವೆ.  

Coffee festival ಈ ಮೇಳವು ವಾರಾಂತ್ಯದಲ್ಲಿ ಆಯೋಜನೆ ಮಾಡಿರುವುದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುವ ಸಾಧ್ಯತೆ ಇದೆ.  ಜನವರಿ 2019 ರಲ್ಲಿ ನಡೆದ ಮೇಳದಲ್ಲಿ 3 ಸಾವಿರಕ್ಕೂ ಹೆಚ್ಚು ಜನ ಈ ಮೇಳದಲ್ಲಿ ಭಾಗವಹಿಸಿದ್ದರು ಎಂದು ಮೇಳದ ಆಯೋಜಕರು ತಿಳಿಸಿದ್ದಾರೆ.  

 ರಾಜ್ಯದಲ್ಲಿ ನೈರುತ್ಯ ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ! 

2014ರಿಂದ ವಾರ್ಷಿಕವಾಗಿ ನಡೆಯುವ ಮೇಳವು WCAI ಯ ಮುಖ್ಯ ವಾರ್ಷಿಕ ನಿಧಿಸಂಗ್ರಹಣೆ ಕಾರ್ಯಕ್ರಮವಾಗಿದ್ದು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ರಕ್ಷಣೆ ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಕಾರ್ಯಕ್ರಮವಾಗಿದೆ.  

2014 ರಿಂದ ವಾರ್ಷಿಕವಾಗಿ ನಡೆಯುವ ಈ ಮೇಳವು ಭಾರತದಲ್ಲಿನ ಸಾಂಪ್ರದಾಯಿಕ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಮತ್ತು ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ನಡೆಯುತ್ತಿರುವ ಯೋಜನೆಗಳನ್ನು ಬೆಂಬಲಿಸಲು WCAI ಯ ಮುಖ್ಯ ವಾರ್ಷಿಕ ನಿಧಿಸಂಗ್ರಹಣೆ ಕಾರ್ಯಕ್ರಮವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

coffee

ಈ ಯೋಜನೆಗಳು ಮಹಿಳಾ ಕಾಫಿ ತೋಟದ ಕಾರ್ಮಿಕರು ಮತ್ತು ಅವರ ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸಲು ಮತ್ತು ಅವರ ಮಾನಸಿಕ ಮತ್ತು ದೈಹಿಕ ಅಗತ್ಯಗಳಿಗಾಗಿ ಹಿರಿಯ ಆರೈಕೆ ಬೆಂಬಲವನ್ನು ಒದಗಿಸಲುವ ಉದ್ದೇಶದಿಂದ ನಡೆಸಲಾಗುತ್ತಿದೆ.  

ಈ ಕಾರ್ಯಕ್ರಮದ ಮೂಲಕ, ಡಬ್ಲ್ಯುಸಿಎಐ ನಿರ್ಗತಿಕ ಮಹಿಳಾ ಕಾಫಿ ತೋಟದ ಕಾರ್ಮಿಕರು ಮತ್ತು ಅವರ ಹೆಣ್ಣು ಮಕ್ಕಳಿಗಾಗಿ ಕಾರ್ಯಕ್ರಮಗಳನ್ನು ಬೆಂಬಲಿಸುವ ಅಗತ್ಯತೆಯ ಅರಿವನ್ನು ಮೂಡಿಸುತ್ತದೆ. 

ಈ ಯೋಜನೆಗಳು ಮಹಿಳಾ ಕಾಫಿ ತೋಟದ ಕಾರ್ಮಿಕರು, ಅವರ ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸಲು ಮತ್ತು ಅವರ ಮಾನಸಿಕ ಮತ್ತು ದೈಹಿಕ ಅಗತ್ಯಗಳಿಗಾಗಿ ಹಿರಿಯ ಆರೈಕೆ ಬೆಂಬಲವನ್ನು ಒದಗಿಸಲು ಆಯೋಜನೆ ಮಾಡಲಾಗುತ್ತಿದೆ.

ವುಮೆನ್ ಸ್ಟಾರ್ಸ್ ಬ್ರೂವರ್ ಸ್ಕಿಲ್ಸ್ ಚಾಂಪಿಯನ್‌ಶಿಪ್‌ನಲ್ಲಿ, ಮಹಿಳಾ ಸ್ಪರ್ಧಿಗಳು ವಿವಿಧ ಹೋಮ್ ಬ್ರೂಯಿಂಗ್ ಉಪಕರಣಗಳಲ್ಲಿ ಆರೊಮ್ಯಾಟಿಕ್ ಕಪ್ ಕಾಫಿಯನ್ನು ತಯಾರಿಸುವಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸುತ್ತಾರೆ.  

ಚಿನ್ನ, ಬೆಳ್ಳಿ ದರ ಯಥಾಸ್ಥಿತಿ, ಎಷ್ಟಿದೆ ಚಿನ್ನ, ಬೆಳ್ಳಿ ದರ ?

coffee
Published On: 26 October 2022, 03:54 PM English Summary: Coffee festival in Bangalore on October 29, 30, do you know the specials?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.