1. ಸುದ್ದಿಗಳು

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌..DA ಬಳಿಕ ಹೆಚ್ಚಾಗಲಿವೆ ಈ 3 ಭತ್ಯೆಗಳು..!

Maltesh
Maltesh
ಸಾಂದರ್ಭಿಕ ಚಿತ್ರ

ಸರ್ಕಾರ ಡಿಎಯನ್ನು ಶೇ.3ರಿಂದ ಶೇ.34ಕ್ಕೆ ಹೆಚ್ಚಿಸಿದೆ. ಈಗ ಮಾಧ್ಯಮಗಳ ವರದಿಗಳ ಪ್ರಕಾರ, ಈ ತಿಂಗಳ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಮತ್ತೊಂದು ಸಿಹಿಸುದ್ದಿಯನ್ನು ನೀಡಬಹುದು.

ಮೋದಿ ಸರ್ಕಾರವು ಇತ್ತೀಚೆಗೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು (ಡಿಎ) ಹೆಚ್ಚಿಸಿದೆ, ನಂತರ HRA ನಲ್ಲಿ ಹೆಚ್ಚಳದ ಬಗ್ಗೆ ವರದಿಗಳಿವೆ. ಸರ್ಕಾರ ಡಿಎಯನ್ನು ಶೇ.3ರಿಂದ ಶೇ.34ಕ್ಕೆ ಹೆಚ್ಚಿಸಿದೆ. ಈಗ ಮಾಧ್ಯಮಗಳ ವರದಿ ಪ್ರಕಾರ, ಈ ತಿಂಗಳ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಬಹುದು.  ಹೌದು DA ನಂತರ, ಸರ್ಕಾರವು ಮನೆ ಬಾಡಿಗೆ ಭತ್ಯೆ (HRA) ನಂತಹ ಇತರ ಭತ್ಯೆಗಳನ್ನು ಹೆಚ್ಚಿಸಬಹುದು ಎನ್ನಲಾಗ್ತಿದೆ ಅದು ಈ ತಿಂಗಳ ಅಂತ್ಯದಲ್ಲಿ.!

ಜುಲೈ 2021 ರಲ್ಲಿ HRA ಅನ್ನು ಹೆಚ್ಚಿಸಲಾಗಿದೆ

ಕಳೆದ ವರ್ಷ ಜುಲೈನಲ್ಲಿ HRA ನಲ್ಲಿ ಕೊನೆಯ ಏರಿಕೆ ಕಂಡುಬಂದಿದೆ. ಆಗ ಡಿಎ ಶೇ.25ರ ಗಡಿ ದಾಟಿತ್ತು. ಆಗ ಸರ್ಕಾರ ಡಿಎಯನ್ನು ಶೇ.28ಕ್ಕೆ ಹೆಚ್ಚಿಸಿತ್ತು. ಈಗ ಸರ್ಕಾರ ಡಿಎ ಹೆಚ್ಚಿಸಿರುವುದರಿಂದ ಎಚ್‌ಆರ್‌ಎ ಕೂಡ ಏರಿಕೆಯಾಗಬಹುದು. ಎಚ್‌ಆರ್‌ಎ ಹೆಚ್ಚಿಸಿದರೆ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಏರಿಕೆಯಾಗಬಹುದು.

ರೈಲ್ವೆ ನೇಮಕಾತಿ: 147 ಹುದ್ದೆಗಳ ಭರ್ತಿ!

LIC BIG Scheme! Invest ₹ 29 ಪಡೆಯಿರಿ ₹4 ಲಕ್ಷ!

HRA ಹೆಚ್ಚಳ ಸಾಧ್ಯ

ತುಟ್ಟಿಭತ್ಯೆ ಹೆಚ್ಚಳದ ಬಳಿಕ ಮನೆ ಬಾಡಿಗೆ ಭತ್ಯೆ ಹೆಚ್ಚಳಕ್ಕೆ ದಾರಿ ಸುಗಮವಾಗಿದೆ ಎನ್ನುತ್ತಾರೆ ತಜ್ಞರು. ಎಚ್‌ಆರ್‌ಎ ಹೆಚ್ಚಿಸಲು ಸರ್ಕಾರ ನಿರ್ಧರಿಸಿದರೆ 50 ಲಕ್ಷ ಕೇಂದ್ರ ನೌಕರರು ಇದರ ಲಾಭ ಪಡೆಯಲಿದ್ದಾರೆ.

ಮಹತ್ವದ ಸುದ್ದಿ: ರೇಷನ್‌ ಬದಲು ಹಣ ನೀಡಲು ಚಿಂತನೆ..ಶೀಘ್ರದಲ್ಲೇ ಜಾರಿ ಸಾಧ್ಯತೆ..!

ಜೋರಾಗಿದೆ Hydroponic Farmingಗೆ ಬೇಡಿಕೆ..ಇಲ್ಲಿವೆ ಟಾಪ್‌ 5 ತರಕಾರಿಗಳು

ನಗರ ಭತ್ಯೆ ಮತ್ತು ಟಿಎ ಕೂಡ ಹೆಚ್ಚಾಗಲಿದೆ!

ತುಟ್ಟಿಭತ್ಯೆಯೊಂದಿಗೆ ಸರ್ಕಾರವು ಮನೆ ಬಾಡಿಗೆ ಭತ್ಯೆಯನ್ನು ಕೂಡ ಹೆಚ್ಚಿಸಿದರೆ, ಅದು ನಗರ ಭತ್ಯೆ ಮತ್ತು ಪ್ರಯಾಣ ಭತ್ಯೆಯ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಡಿಎ ಹೆಚ್ಚಳದೊಂದಿಗೆ, ಈ ಎರಡೂ ಭತ್ಯೆಗಳನ್ನು ಹೆಚ್ಚಿಸುವ ನಿರೀಕ್ಷೆ ಹೆಚ್ಚಾಗತೊಡಗಿದೆ.

ಟಿಎ ಮತ್ತು ಸಿಎ ಹೆಚ್ಚಳ

ತುಟ್ಟಿಭತ್ಯೆಯನ್ನು ಹೆಚ್ಚಿಸಿದ ನಂತರ ಈಗ ನೌಕರರ ಪ್ರಯಾಣ ಭತ್ಯೆ ಮತ್ತು ನಗರ ಭತ್ಯೆಯಲ್ಲಿ ಹೆಚ್ಚಳವಾಗಲಿದೆ. ಡಿಎ ಹೆಚ್ಚಳದ ನಂತರ, ಟಿಎ ಮತ್ತು ಸಿಎ ಹೆಚ್ಚಳಕ್ಕೆ ದಾರಿ ಕೂಡ ಸುಗಮವಾಗಲಿದೆ.

ಎಲೆಕ್ಟ್ರಿಕ್ ವಾಹನ ಖರೀದಿಗೆ ಈ ಬ್ಯಾಂಕ್ ನೀಡಲಿದೆ ಉತ್ತಮವಾದ ಸಬ್ಸಿಡಿ!

“ರೈತರೊಂದಿಗೆ ಚೆಲ್ಲಾಟವಾಡಿದರೆ ಅಧಿಕಾರದಿಂದ ಕೆಳಗಿಳಿಸುತ್ತೇವೆ”- ಪ್ರಧಾನಿ ಮೋದಿಗೆ ಕೆಸಿಆರ್ ಎಚ್ಚರಿಕೆ!

HRA ಎಷ್ಟು ಹೆಚ್ಚಾಗುತ್ತದೆ?

ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರಿ ನೌಕರರ HRA ಶೀಘ್ರದಲ್ಲೇ 3% ಕ್ಕೆ ಹೆಚ್ಚಾಗಬಹುದು. X ವರ್ಗದ ನಗರಗಳಲ್ಲಿನ ಉದ್ಯೋಗಿಗಳು ತಮ್ಮ HRA ನಲ್ಲಿ 3% ಹೆಚ್ಚಳವನ್ನು ಕಾಣಬಹುದು, ಆದರೆ Y ವರ್ಗದ ನಗರಗಳು ತಮ್ಮ ಭತ್ಯೆಗಳಲ್ಲಿ 2% ಹೆಚ್ಚಳವನ್ನು ಕಾಣಬಹುದು. ಇದಲ್ಲದೆ, Z ವರ್ಗದ ನಗರಗಳಲ್ಲಿನ ಉದ್ಯೋಗಿಗಳ HRA 1% ವರೆಗೆ ಹೆಚ್ಚಾಗಬಹುದು.

Published On: 27 April 2022, 10:44 AM English Summary: Central hikes HRA Nd other 3 Allowances ?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.