ದೇಶದ ಕೆಲವು ಭಾಗಗಳಲ್ಲಿ ಕಾಣಿಸಿಕೊಂಡಿರುವ ಪೂರ್ಣ ಪ್ರಮಾಣದ ವಿದ್ಯುತ್ ಬಿಕ್ಕಟ್ಟನ್ನು ತಪ್ಪಿಸುವ ನಿಟ್ಟಿನಲ್ಲಿ. ಹಾಗೂ ವಿದ್ಯುತ್ ಸ್ಥಾವರಗಳಲ್ಲಿ ಖಾಲಿಯಾಗುತ್ತಿರುವ ದಾಸ್ತಾನುಗಳನ್ನು ಮರುಪೂರಣಗೊಳಿಸಲು, ಕಲ್ಲಿದ್ದಲು ಸಾಗಣೆ ಟ್ರೈನ್‌ಗಳು ಶೀಘ್ರವಾಗಿ ತಲುಪಲು ಸಾಧ್ಯವಾಗುವಂತೆ ಮಾಡಲು ಭಾರತೀಯ ರೈಲ್ವೇ 650 ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಲು ಯೋಜಿಸಿದೆ.
ಕಲ್ಲಿದ್ದಲು ರೇಕ್ಸ್‌ಗಳಿಗೆ (ಕ್ಯಾರಿಯರ್) ಮುಕ್ತ ಹಳಿಗಳ ಆದ್ಯತೆ ನೀಡಲು 500 ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲು ಟ್ರಿಪ್‌ಗಳು ಮತ್ತು 148 ಪ್ರಯಾಣಿಕರ ರೈಲು ಪ್ರಯಾಣಗಳು ಸೇರಿದಂತೆ 657 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗುವುದು ಎಂದು ರೈಲ್ವೆಯ ಮೂಲಗಳು ತಿಳಿಸಿವೆ. ಮುಂದಿನ ಎರಡು ತಿಂಗಳಲ್ಲಿ ಕಲ್ಲಿದ್ದಲು ರೇಕ್ಸ್ ಮಾರ್ಗವನ್ನು ಹೆಚ್ಚಿಸಲು ರೈಲ್ವೆ ಯೋಜಿಸಿದೆ.
PMAGY: ಬುಡಕಟ್ಟು ಹಳ್ಳಿಗಳ ಸುಧಾರಣೆಗೆ ಗುರಿ
“ರೈತರಿಗೆ ಒಳ್ಳೆಯದಾಗುವುದಾದರೇ ನಾನು ಗಲ್ಲಿಗೇರಲು ಕೂಡ ಸಿದ್ದ” ಸಿಎಂ ಬೊಮ್ಮಾಯಿ!
"ಈ ಕ್ರಮವು ತಾತ್ಕಾಲಿಕವಾಗಿದೆ ಮತ್ತು ಪರಿಸ್ಥಿತಿ ಸಹಜವಾದ ತಕ್ಷಣ ಪ್ರಯಾಣಿಕರ ಸೇವೆಗಳನ್ನು ಪುನಃಸ್ಥಾಪಿಸಲಾಗುತ್ತದೆ" ಎಂದು ಭಾರತೀಯ ರೈಲ್ವೆಯ ಕಾರ್ಯನಿರ್ವಾಹಕ ನಿರ್ದೇಶಕ ಗೌರವ್ ಕೃಷ್ಣ ಬನ್ಸಾಲ್ ಹೇಳಿದ್ದಾರೆ ಎಂದು ಬ್ಲೂಮ್‌ಬರ್ಗ್ ಉಲ್ಲೇಖಿಸಿದೆ .
ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲನ್ನು ತರಿಸಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ಕಲ್ಲಿದ್ದಲು ಕೊರತೆಯಿಂದ ಇಡೀ ದೇಶವು ವಿದ್ಯುತ್ ಸಮಸ್ಯೆಗಳನ್ನು ಎದುರಿಸುತ್ತಿದೆ ಮತ್ತು ಯಾವುದೇ ಬ್ಯಾಕ್‌ಅಪ್ ಇಲ್ಲ, ಬಿಕ್ಕಟ್ಟನ್ನು ನಿಭಾಯಿಸಲು ಕೇಂದ್ರವು ಹೆಚ್ಚಿನ ಕಲ್ಲಿದ್ದಲು ನೀಡುವುದು ಉತ್ತಮ ಪರಿಹಾರವಾಗಿದೆ ಎಂದು ದೆಹಲಿಯ ವಿದ್ಯುತ್ ಸಚಿವ ಸತ್ಯೇಂದ್ರ ಜೈನ್ ಶುಕ್ರವಾರ ಹೇಳಿದ್ದಾರೆ. ವಿದ್ಯುತ್ ಸಂಗ್ರಹಿಸಲು ಸಾಧ್ಯವಿಲ್ಲ ಮತ್ತು ಮುಂದಿನ 21 ದಿನಗಳವರೆಗೆ ದೆಹಲಿಯಲ್ಲಿ ಸಾಕಷ್ಟು ಕಲ್ಲಿದ್ದಲು ಇಲ್ಲ ಎಂದು ಅವರು ಹೇಳಿದರು.
ಏಪ್ರಿಲ್ ಕೊನೆಯ15 ದಿನಗಳಲ್ಲಿ ಈ ಬೆಳೆಗಳನ್ನು ಬೆಳೆಸಿ, ಬಂಪರ್ ಇಳುವರಿ ಪಡೆಯಿರಿ
Green Peas: ʻಹಸಿರು ಬಟಾಣೆʼ ಸೇವನೆಯ ಅದ್ಭುತ ಪ್ರಯೋಜನಗಳೇನು..? ಇಲ್ಲಿದೆ ಮಾಹಿತಿ
ಗೂಡ್ಸ್ ರೈಲುಗಳಲ್ಲಿ ನಿತ್ಯ 400ಕ್ಕೂ ಹೆಚ್ಚು ಕಲ್ಲಿದ್ದಲು ರೇಕ್ ಸಾಗಣೆ ಮಾಡಲಾಗ್ತಿದ್ದು, ಕಲ್ಲಿದ್ದಲು ಸಾಗಣೆಗೆ ಅನುಕೂಲವಾಗಲೆಂದು ರೈಲು ಸಂಚಾರ ರದ್ದುಗೊಳಿಸಲಾಗಿದೆ. ಥರ್ಮಲ್ ಪವರ್ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ ನಿವಾರಣೆಗೆ ಈ ಕ್ರಮ. ಸುಡುವ ಬೇಸಿಗೆಯು ಕಲ್ಲಿದ್ದಲಿನ ಬೇಡಿಕೆಯನ್ನು ಹೆಚ್ಚಿಸುತ್ತಿದೆ. ದೇಶದ 70% ರಷ್ಟು ವಿದ್ಯುತ್ ಉತ್ಪಾದನೆಯ ಮೂಲ ಕಲ್ಲಿದ್ದಲು. ಈಗಾಗಲೇ ಕಲ್ಲಿದ್ದಲು ಕೊರತೆಯಿಂದ ಭಾರತದ ಹಲವಾರು ಭಾಗಗಳು ದೀರ್ಘಾವಧಿಯ ಕತ್ತಲನ್ನು ಎದುರಿಸುತ್ತಿವೆ. ಹೀಗಾಗಿ ಪ್ಯಾಸೆಂಜರ್ ರೈಲುಗಳ ಮಾರ್ಗಗಳಲ್ಲಿ ಕಲ್ಲಿದ್ದಲು ದಾಸ್ತಾನು ಹೊತ್ತ ರೈಲುಗಳ ಸುಗಮ ಸಂಚಾರಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡುವಂತೆ ಹೈಕೋರ್ಟ್ ಸೂಚನೆ
ಕರ್ನಾಟಕದಲ್ಲಿ ಕೇಜ್ರಿವಾಲ್ ಅಲೆ! ಇಲ್ಲೂ ಸೃಷ್ಟಿಸಲಿದ್ದಾರಾ ಆಮ್ ಆದ್ಮಿ ಪಾರ್ಟಿಯ ನೆಲೆ ?
Share your comments