1. ಸುದ್ದಿಗಳು

Cyber Crime: ಆನ್ಲೈನ್ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡವರ ಸಲುವಾಗಿ ಕೇಂದ್ರ ಸರ್ಕಾರ “1930 Helpline” ಆರಂಭ! ನೀವು ದುಡ್ಡು ಕಳೆದುಕೊಂಡಿದ್ದರೇ ಈಗಲೇ ಕರೆ ಮಾಡಿ

Kalmesh T
Kalmesh T
Central Government to Prevent Online Fraud “1930 Helpline

ಜನಸಾಮಾನ್ಯರಲ್ಲಿ ವಿವಿಧ ರೀತಿ ಆಮೀಷ ತೋರಿಸಿ ಆನ್ಲೈನ್ ಮೂಲಕ ಹಣವನ್ನು ಕದಿಯುತ್ತಿರುವ ವಂಚಕರನ್ನು ಪತ್ತೆ ಹಚ್ಚಿ ಅವರನ್ನು ನಿಗ್ರಹಿಸುವ ನಿಟ್ಟಿನಲ್ಲಿ ಕೇಂದ್ರವು ಹೊಸ ಸಹಾಯವಾಣಿಯನ್ನು ಆರಂಭಿಸಿದೆ.

ಈಗಾಗಲೇ ಸಾಕಷ್ಟು ಜನ ಆನ್ಲೈನ್ನಲ್ಲಿ ಅಪರಿಚಿತರ ಮೇಲ್, ಸಂದೇಶ,  ಅಥವಾ ಲಿಂಕ್ಗಳನ್ನು ಕ್ಲಿಕ್ ಮಾಡುವ ಮೂಲಕ ಹಣ ಕಳೆದುಕೊಂಡಿರುವ ಘಟನೆಗಳು ವರದಿಯಾಗಿದೆ. ಇಂಥಹ ಆನ್ಲೈನ್ ವಂಚನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ “1930 Helpline” ಸಹಾಯವಾಣಿ ಆರಂಭಿಸಿದೆ.   

ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಭರ್ಜರಿ ಕೊಡುಗೆ: ಕಾಲೇಜು ಪ್ರವೇಶಕ್ಕೆ 25,000 ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ₹8 ಲಕ್ಷ ನೀಡಲಿದೆ ಸರ್ಕಾರ!

ಜನಸಾಮಾನ್ಯರಲ್ಲಿ ವಿವಿಧ ರೀತಿ ಆಮೀಷ ತೋರಿಸಿ ಆನ್ಲೈನ್ ಮೂಲಕ ಹಣವನ್ನು ಕದಿಯುತ್ತಿರುವ ವಂಚಕರನ್ನು ಪತ್ತೆ ಹಚ್ಚಿ ಅವರನ್ನು ನಿಗ್ರಹಿಸುವ ನಿಟ್ಟಿನಲ್ಲಿ ಕೇಂದ್ರವು ಹೊಸ ಸಹಾಯವಾಣಿಯನ್ನು ಆರಂಭಿಸಿದೆ.

ಆನ್‌ಲೈನ್ ವಂಚನೆಯ ಘಟನೆಗಳು ವೇಗವಾಗಿ ಹೆಚ್ಚುತ್ತಿರುವ ಇಂತಹ ಸಮಯದಲ್ಲಿ ವೇಗವಾಗಿ ಜನರ ಹಣವನ್ನು ರಕ್ಷಿಸಲು ಈ ಸಹಾಯವಾಣಿಯನ್ನು ಆರಂಭಿಸಲಾಗಿದ್ದು, 1930 ಸಂಖ್ಯೆಗೆ ಡಯಲ್ ಮಾಡುವ ಮೂಲಕ ಯಾವುದೇ ಸೈಬರ್ ಅಪರಾಧವನ್ನು ತಕ್ಷಣ ವರದಿ ಮಾಡಬಹುದಾಗಿದೆ.

ಡಿಜಿಟಲ್‌ ಜಗತ್ತಿನಲ್ಲಿ ಹಣಕಾಸಿನ ವ್ಯವಹಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಪರಿಚಿತರ ಮೋಸದ ಜಾಲಕ್ಕೆ ಬಿದ್ದು ತಮ್ಮ ಬ್ಯಾಂಕ್‌ ಖಾತೆಗಳಿಂದ ದುಡ್ಡು ಕಳೆದುಕೊಳ್ಳುವ ಜನರ ಸಂಖ್ಯೆಯೂ ಕಡಿಮೆಯಿಲ್ಲ.

ಗೋಧಿ ರಫ್ತು ನಿರ್ಬಂಧ ಆಹಾರದ ಬೆಲೆ ನಿಯಂತ್ರಿಸುತ್ತದೆ: ಭಾರತ ಸರ್ಕಾರ!

IMD: ರೈತಮಿತ್ರರಿಗೆ ಹವಾಮಾನ ಇಲಾಖೆಯಿಂದ ಶುಭ ಸುದ್ದಿ; ವಾಡಿಕೆಗಿಂತ ಮೊದಲೆ ರಾಜ್ಯದಲ್ಲಿ ಮುಂಗಾರು ಮಳೆ!

ಹಾಗಾಗಿ ಜನಸಾಮಾನ್ಯರು  ಯಾವುದೇ ಅಪರಿಚಿತರಿಗೆ , ಆನ್‌ಲೈನ್‌ನಲ್ಲಿ ನಿಮ್ಮ ಇ-ಮೇಲ್‌ ಪಾಸ್‌ ವರ್ಡ್‌, ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಪಿನ್‌, ಆಧಾರ್‌ ನಂಬರ್‌, ಪಾನ್‌ ನಂಬರ್‌ ಕೊಡಬಾರದು.

ಬ್ಯಾಂಕು, ವಿಮಾ ಸಂಸ್ಥೆ, ಕಂಪನಿಗಳು ಹೊಂದಿದ ಅಧಿಕೃತ ಆಪ್‌, ವೆಬ್‌ಸೈಟ್‌ ಹೊರತಾದ ಹಣಕಾಸಿನ ವ್ಯವಹಾರದಲ್ಲಿ ಎಚ್ಚರ ಅಗತ್ಯ. ನಿಮ್ಮ ಬ್ಯಾಂಕ್‌ ಖಾತೆಯ KYC ಮಾಹಿತಿ ಅಪ್ಡೇಟ್‌ ಹೆಸರಲ್ಲಿ ಕಳುಹಿಸುವ ಯಾವುದೇ ಲಿಂಕ್‌ಗಳನ್ನು ಒತ್ತಬೇಡಿ.

1930 ಸಂಖ್ಯೆಗೆ ದೂರು ದಾಖಲಿಸಿದ ತಕ್ಷಣವೇ ಆರಂಭದಲ್ಲಿ ವಂಚನೆ ಹಣಕಾಸಿನ ವಹಿವಾಟಿನ ಪ್ರಾಥಮಿಕ ವಿವರಗಳನ್ನು ಕೇಳಲಾಗುತ್ತದೆ. ನಂತರ ಕದ್ದ ಹಣವು ಎಲ್ಲಿಗೆ ವಹಿವಾಟು ಆಗಿದ್ದರೂ ಅದನ್ನು ರಕ್ಷಿಸಲು ಕಾರ್ಯವಿಧಾನವನ್ನು ಪ್ರಾರಂಭಿಸಲಾಗುತ್ತದೆ. ಇದಾದ ನಂತರ ಅಪರಾಧದ ಪ್ರಕಾರ ಪೊಲೀಸರು ಮುಂದಿನ ಕ್ರಮವನ್ನು ಕೈಗೊಳ್ಳಲಿದ್ದಾರೆ.

3ನೇ ಮಗುವಿಗೆ ಜನ್ಮ ನೀಡಿದರೆ 11 ಲಕ್ಷ ರೂಪಾಯಿ ಬೋನಸ್ ನೀಡತ್ತೆ ಈ ಕಂಪನಿ.. ಜೊತೆಗೆ 1 ವರ್ಷ ರಜೆ! ಏನಿದು Policy?

ರೈತರಿಗೆ ಸಿಹಿ ಸುದ್ದಿ: ಮಾರುಕಟ್ಟೆಯಲ್ಲಿ ಗೋಧಿಗೆ ಬಂಪರ್ ಬೆಲೆ: ರೈತರ ಮುಖದಲ್ಲಿ ನಗೆ!

ಸಂಶಯಾಸ್ಪದ ಆನ್‌ಲೈನ್ ವಹಿವಾಟಿನಲ್ಲಿ ಮೊದಲ ಕೆಲವು ಗಂಟೆಗಳಲ್ಲಿ ಜನರು ಕಳೆದುಕೊಂಡಿರುವ ಹಣವನ್ನು ಮರುಪಡೆಯುವ ಸಾಧ್ಯತೆಗಳು ಅತ್ಯಧಿಕವಾಗಿದೆ. ಸಂತ್ರಸ್ತರು ತಕ್ಷಣ ಪ್ರಕರಣ ದಾಖಲಿಸಿದರೆ ಸೈಬರ್ ಅಪರಾಧಿಗಳ ಪತ್ತೆಗೆ ಹೆಚ್ಚಿನ ಅವಕಾಶಗಳಿವೆ.

ಇದರಿಂದಾಗಿ 1930 ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಲಾಗಿದ್ದು, ಇಲ್ಲಿ ದೂರು ಸಲ್ಲಿಸಿದರೆ ವಂಚನೆ ನಡೆದಂತಹ ಪರಿಸ್ಥಿತಿಯಲ್ಲಿ ಹಣವನ್ನು ಕಳೆದುಕೊಂಡವರ ಮತ್ತು ಹಣ ತಲುಪಿರುವ ಖಾತೆಯ ಮಾಹಿತಿಯನ್ನು ಪಡೆದು ಎರಡನ್ನೂ ಸಂಪೂರ್ಣವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.

ಕ್ರೆಡಿಟ್ ಮಾಡಿದ ಖಾತೆಯಿಂದ ಹಣವನ್ನು ಹಿಂಪಡೆಯದಿದ್ದರೆ ಆ ದೂರಿನ ತಕ್ಷಣವೇ ಅದನ್ನು ತಕ್ಷಣವೇ ಫ್ರೀಜ್ ಮಾಡಲಾಗುತ್ತದೆ. ಅಂದರೆ ಆ ಹಣವನ್ನು ಯಾರೂ ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ಹಣಕಾಸಿನ ವಂಚನೆಗೆ ಬ್ರೇಕ್ ಬೀಳಲಿದೆ.

ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!

ಮೇ ತಿಂಗಳಲ್ಲಿ ಬಿತ್ತನೆ ಮಾಡಬೇಕಾದ ಬೆಳೆಗಳು! ಇದರಿಂದ ರೈತರಿಗಾಗಲಿದೆ ಹೆಚ್ಚಿನ ಲಾಭ

ಇನ್ನು ಇನ್ಶೂರೆನ್ಸ್ ಪಾಲಿಸಿ ಆಯಕ್ಟಿವೇಟ್ ನೆಪದಲ್ಲಿ ವಂಚನೆ, ಒಎಲ್‌ಎಕ್ಸ್‌ ಸಹಿತ ಸಾಮಾಜಿಕ ಜಾಲ ತಾಣದಲ್ಲಿ ಸಾಮಗ್ರಿ ಮಾರಿ ಗಳಿಸಬೇಕಾದ ದುಡ್ಡಿನ ಬದಲು ಖಾತೆಯಿಂದ ದುಡ್ಡು ಕಳೆದುಕೊಂಡ ಪ್ರಸಂಗಗಳು ಅದೆಷ್ಟೋ. ಯುಪಿಐ ರಿಕ್ವೆಸ್ಟ್‌ಗೆ ಅನುಗುಣವಾಗಿ ಪಿನ್‌ ಸಂಖ್ಯೆ ನಮೂದಿಸಿದರೆ ನಿಮ್ಮ ಖಾತೆಯಿಂದ ಹಣ ಕಳೆದುಕೊಳ್ಳೋದು ಗ್ಯಾರಂಟಿ.

ಎಟಿಎಂನಲ್ಲಿ ಕಾರ್ಡ್‌ ಇಲ್ಲದೆ (ಕಾರ್ಡ್‌ ಲೆಸ್‌, ಒಟಿಪಿ) ಹಣ ಪಡೆವ ವ್ಯವಸ್ಥೆ ಬಂದಿದೆ. ಗ್ರಾಹಕರಿಗೆ ಆನ್‌ಲೈನ್‌ ವಂಚನೆಯಾದಾಗ ಕಾರ್ಡ್‌/ಖಾತೆ ಬ್ಲಾಕ್‌ ನಿಟ್ಟಿನಲ್ಲಿ ಕಸ್ಟಮರ್ ಸರ್ವೀಸ್ ಸಂಖ್ಯೆಯನ್ನು ಗೂಗಲ್‌ನಲ್ಲಿ ಹುಡುಕಬೇಡಿ, ಅದೂ ಕೂಡ ಹ್ಯಾಕರ್‌ಗಳಿಗೆ ಲಿಂಕ್‌ ಆಗುವ ಸಾಧ್ಯತೆಯಿದೆ.

ಎಟಿಎಂ/ ಪಾಸ್‌ ಬುಕ್‌ನಲ್ಲಿರುವ ಕಸ್ಟಮರ್ ಕೇರ್‌ ಸಂಖ್ಯೆ ಸಂಪರ್ಕಿಸಿ. ಯಾವಾಗಲೂ ಅಧಿಕೃತ ಕಚೇರಿಗಳಿಗೆ ಭೇಟಿ ನೀಡಿಯೇ ಮಾಹಿತಿಯನ್ನು ಪರಿಶೀಲಿಸಿ.

Published On: 15 May 2022, 03:22 PM English Summary: Central Government to Prevent Online Fraud “1930 Helpline

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.