1. ಸುದ್ದಿಗಳು

ಡ್ರ್ಯಾಗನ್ ಫ್ರೂಟ್‌ ಕೃಷಿ 50,000 ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧಾರ: ರೈತರಿಗೆ ಸಬ್ಸಿಡಿ ನೀಡಲು ಚಿಂತನೆ!

Kalmesh T
Kalmesh T
Central government decision to increase Dragon Fruit Cultivation

ಡ್ರಾಗನ್‌ ಹಣ್ಣನ್ನು ಬೆಳೆಯುವುದಕ್ಕೆ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ . ಅದರಲ್ಲೂ ಈ ಎರಡು ರಾಜ್ಯಗಳು ಸೂಪರ್‌ ಹಣ್ಣು ಎಂದು ಪ್ರಸಿದ್ಧಿ ಪಡೆದಿರುವ ಡ್ರಾಗನ್‌ ಫ್ರೂಟ್‌ ನ್ನು ಜಾಸ್ತಿ ಬೆಳೆಯುವಂತೆ ತಮ್ಮ ರಾಜ್ಯದ ರೈತರಿಗೆ ಪ್ರೋತ್ಸಾಹ ಧನ ನೀಡುತ್ತಿವೆ.

ಇದನ್ನೂ ಓದಿರಿ: ಭರ್ಜರಿ ಸಹಾಯಧನಕ್ಕೆ ಅರ್ಜಿ ಆಹ್ವಾನ: 1 ಲಕ್ಷ ನೇರ ಸಾಲ, ದ್ವಿಚಕ್ರ ವಾಹನಕ್ಕೆ 50,000, ಸರಕು ಸಾಗಣೆ ವಾಹನಕ್ಕೆ 3.50 ಲಕ್ಷ..

ಇದೇ ಕೆಲಸವನ್ನು ಕೇಂದ್ರವು ಮಾಡಲು ಹೊರಟಿದೆ. ದೇಶದ ಯಾವುದೇ ರಾಜ್ಯದ ರೈತನು ಈ ಹಣ್ಣನ್ನು ಬೆಳೆಯುವುದಕ್ಕೆ ನಿರ್ಧರಿಸಿದರೆ, ಆ ರೈತನಿಗೆ ಕೇಂದ್ರ ಸರ್ಕಾರವು ಪ್ರೋತ್ಸಾಹವನ್ನು ನೀಡುತ್ತದೆ.

ಈ ಹಣ್ಣಿನಲ್ಲಿರುವ ಪೌಷ್ಠಿಕಾಂಶದ ಮೌಲ್ಯಗಳಿಂದಾಗಿ ಹಣ್ಣಿನ ವೆಚ್ಚದ ಪರಿಣಾಮ ಮತ್ತು ಈ ಹಣ್ಣಿಗೆ ಇರುವ ಜಾಗತಿಕ ಬೇಡಿಕೆಯನ್ನು ಪರಿಗಣಿಸಿ, ಡ್ರ್ಯಾಗನ್‌ ಫ್ರೂಟ್‌ ನ(Dragon Fruit) ಕೃಷಿಯನ್ನು ಭಾರತದಲ್ಲಿ ವಿಸ್ತರಿಸಬಹುದು ಎಂದು ಕೇಂದ್ರವು ಯೋಚಿಸಿದೆ.

ಪ್ರಸ್ತುತವಾಗಿ, ಈ ವಿದೇಶಿ ಹಣ್ಣನ್ನು ಭಾರತದಲ್ಲಿ 3,000 ಹೆಕ್ಟೇರ್‌ಗಳಲ್ಲಿ ಬೆಳೆಸಲಾಗುತ್ತದೆ. ಐದು ವರ್ಷಗಳಲ್ಲಿ ಈ ಹಣ್ಣಿನ ಕೃಷಿಯನ್ನು 50,000 ಹೆಕ್ಟೇರ್‌ಗಳಿಗೆ ಹೆಚ್ಚಿಸುವ ಯೋಜನೆಯನ್ನು ಪ್ರಸ್ತುತ ಕೇಂದ್ರ ಸಾಕಾರಗೊಳಿಸಲು ನಿರ್ಧರಿಸಿದೆ.

PM SVANidhi Scheme: ಬಡವರಿಗೆ ವ್ಯಾಪಾರ ಮಾಡಲು ಸರ್ಕಾರವೇ ನೀಡಲಿದೆ ಸಾಲ ಮತ್ತು ಸಬ್ಸಿಡಿ! ಅರ್ಜಿ ಸಲ್ಲಿಕೆ ಹೇಗೆ ಗೊತ್ತೆ?

ಗುಜರಾತ್ ಸರ್ಕಾರವು ಇತ್ತೀಚೆಗೆ ಡ್ರ್ಯಾಗನ್ ಫ್ರೂಟ್ ಅನ್ನು ಕಮಲಮ್ (ಕಮಲ) ಎಂದು ಮರುನಾಮಕರಣ ಮಾಡಿತು ಮತ್ತು ಅದನ್ನು ಬೆಳೆಸುವ ರೈತರಿಗೆ ಪ್ರೋತ್ಸಾಹವನ್ನು ಘೋಷಿಸಿತು.

ಈ ಹಣ್ಣಿನ ತಳಿಯನ್ನು ನೆಡಲು ಸಿದ್ಧರಾಗಿರುವ ರೈತರಿಗೆ ಹರಿಯಾಣ ಸರ್ಕಾರವು ಅನುದಾನವನ್ನು ನೀಡುತ್ತಿದೆ. ಇದರಲ್ಲಿ ಕಡಿಮೆ ಕ್ಯಾಲೋರಿಗಳು ಮತ್ತು ಹೆಚ್ಚಿನ ಪೋಷಕಾಂಶಗಳಾದ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಸತುವಿನಂಶಗಳು ಇರುವುದರಿಂದ ಈ ಹಣ್ಣು ಡಯಾಬಿಟಿಸ್‌ ರೋಗಿಗಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ರೈತರಿಗೆ ಉತ್ತಮ ಗುಣಮಟ್ಟದ ನಾಟಿ ಸಾಮಗ್ರಿಗಳನ್ನು ಒದಗಿಸಲು ಕೇಂದ್ರವು ರಾಜ್ಯಗಳಿಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಸಮಾವೇಶದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್ (MIDH) ಅಡಿಯಲ್ಲಿ ರಾಜ್ಯಗಳು ಮತ್ತು ರೈತರಿಗೆ ನಿರ್ದಿಷ್ಟ ಗುರಿ ಆಧಾರಿತ ಸಹಾಯವನ್ನು ಕೇಂದ್ರವು ಒದಗಿಸಬಹುದು ಎಂದು ಹೇಳಿದರು.

ರೈತರೆಲ್ಲ ಓದಲೇಬೇಕಾದ ಸುದ್ದಿ: SBI ಸಮೀಕ್ಷೆ ಪ್ರಕಾರ 2022-23ನೇ ಹಣಕಾಸು ವರ್ಷದಲ್ಲಿ ರೈತರ ಆದಾಯ ದುಪ್ಪಟ್ಟು!

ಕಡಿಮೆ ನೀರು ಹಾಗೂ ಒಣ ಭೂಮಿಯಲ್ಲಿಯೂ ಬೆಳೆಯಬಹುದಾದ ಹಣ್ಣು

ಆಹಾರ ಸಂಸ್ಕರಣಾ ಸಚಿವಾಲಯದ ಸಹಾಯದಿಂದ ಸಂಸ್ಕರಣಾ ಮೂಲಸೌಕರ್ಯವನ್ನು ಸಹ ಅಭಿವೃದ್ಧಿಪಡಿಸಬಹುದು. ಇದರ ಕೃಷಿಯಿಂದ ರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗಲಿದೆಎಂದು ಹೇಳಿದರು.

ಅಧಿಕಾರಿಗಳು ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಪ್ರಕಾರ, ಈ ಹಣ್ಣಿನ ಸಸ್ಯಕ್ಕೆ ಹೆಚ್ಚಿನ ನೀರಿನ ಅಗತ್ಯವಿಲ್ಲ ಮತ್ತು ಇದನ್ನು ಒಣ ಭೂಮಿಯಲ್ಲಿಯೂ ಸಹ ಬೆಳೆಸಬಹುದು.

ಇದೀಗ ಡ್ರ್ಯಾಗನ್ ಹಣ್ಣು ಕೆಜಿಗೆ ₹400 ದರದಲ್ಲಿ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ₹100ಕ್ಕೆ ಸಿಗುವಂತೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತೋಟಗಾರಿಕಾ ಆಯುಕ್ತ ಪ್ರಭಾತ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.

ಗುಡ್‌ನ್ಯೂಸ್‌: ರೈತರ ಬೆಳೆಹಾನಿಗೆ ಹೆಚ್ಚುವರಿ ದರ ನೀಡಲು ಬೊಮ್ಮಾಯಿ ಸರ್ಕಾರ ನಿರ್ಧಾರ! ಎಷ್ಟು ಗೊತ್ತೆ?

ಭಾರತವು ಈಗ ಸುಮಾರು 15,491 ಟನ್‌ಗಳಷ್ಟು ಡ್ರ್ಯಾಗನ್ ಹಣ್ಣುಗಳನ್ನು ಆಮದು ಮಾಡಿಕೊಳ್ಳುತ್ತಿದೆ.

40,000 ಹೆಕ್ಟೇರ್‌ಗಳಲ್ಲಿ ಹಣ್ಣುಗಳನ್ನು ಬೆಳೆಯುವ ಚೀನಾ ಮತ್ತು 60,000 ಹೆಕ್ಟೇರ್‌ಗಳಲ್ಲಿ ಹಣ್ಣುಗಳನ್ನು ಬೆಳೆಯುವ ವಿಯೆಟ್ನಾಂನ ಉತ್ಪಾದನೆಯನ್ನು ಸರಿಗಟ್ಟುವ ಸಾಮರ್ಥ್ಯವನ್ನು ಹೊಂದಿದೆ ಎಂದು ಡಾ ಕರುಣಾಕರನ್ ಹೇಳಿದರು.

“ಇದಕ್ಕೆ ಆರಂಭಿಕ ಹೂಡಿಕೆ ಹೆಚ್ಚು. ಆದರೆ ಇದು ಒಂದು ವರ್ಷದೊಳಗೆ ಉತ್ತಮ ಆದಾಯವನ್ನು ತಂದು ಕೊಡುತ್ತದೆ.

ಈ ಹಣ್ಣುಗಳ ಕೆಂಪು ಮತ್ತು ಗುಲಾಬಿ ತಳಿಗಳು ಉತ್ತಮ ಇಳುವರಿ ನೀಡುತ್ತವೆಎಂದು ಡಾ.ಕರುಣಾಕರನ್ ಸಮಾವೇಶದಲ್ಲಿ ಹೇಳಿದರು.

Published On: 18 July 2022, 05:27 PM English Summary: Central government decision to increase Dragon Fruit Cultivation

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.