ರಾಜ್ಯ ಸರ್ಕಾರವು ಐದು ಪ್ರಮುಖ ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ಕೆಲವು ಯೋಜನೆಯಲ್ಲಿ ಪಡಿತರ
ಚೀಟಿಯನ್ನು ಮಾನದಂಡವಾಗಿ ಮಾಡಿದೆ. ಹೀಗಾಗಿ, ಈಗ ಪಡಿತರ ಚೀಟಿ ಬೇಡಿಕೆಯೂ ಹೆಚ್ಚಿದೆ.
ಆಗಿದ್ದರೆ ಕರ್ನಾಟಕ ಪಡಿತರ ಚೀಟಿ ಪಡೆಯಲು ಯಾರೆಲ್ಲ ಅರ್ಹರು ಮತ್ತು ಅದನ್ನು ಅಪ್ಲೈ ಮಾಡುವುದು ಹೇಗೆ ಎನ್ನುವ ವಿಧಾನ ಇಲ್ಲಿದೆ.
ಕರ್ನಾಟಕದಲ್ಲಿ ಹೊಸ ಪಡಿತರ ಚೀಟಿಯನ್ನು ಪಡೆಯಲು ಕೆಲವು ನಿರ್ದಿಷ್ಟ ನಿಯಮಗಳಿವೆ.
ಮೊದಲನೆಯದಾಗಿ ಪಡಿತರ ಚೀಟಿ ಪಡೆಯಲು ಇಚ್ಛಿಸುವವರು ಕರ್ನಾಟಕದಲ್ಲಿ ಖಾಯಂ ನಿವಾಸಿಯಾಗಿರಬೇಕು.
ಅಲ್ಲದೇ ಈಗಾಗಲೇ ರಾಜ್ಯದಲ್ಲಿ ಪಡಿತರ ಚೀಟಿ ಇಲ್ಲದವರು ಸಹ ಇದಕ್ಕೆ ಅರ್ಹರು.
ನೂತನ ದಂಪತಿಗಳು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು.
ದಿನಾಂಕ ಮುಗಿದ ತಾತ್ಕಾಲಿಕ ಪಡಿತರ ಚೀಟಿ ಹೊಂದಿರುವ ನಾಗರಿಕರು
ಕರ್ನಾಟಕದಲ್ಲಿ ಹೊಸ ಪಡಿತರ ಚೀಟಿ ಪಡೆಯಲು ಆ ನಿರ್ದಿಷ್ಟ ಮನೆಯವರ ಆದಾಯ ಮತ್ತು
ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
Ration Card ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ, ಮತ್ತೊಮ್ಮೆ ಕಾರ್ಡ್ ಅಪ್ಲೈ ಮಾಡುವುದೇಗೆ ?
ಯಾವೆಲ್ಲ ಐಡಿಗಳು ಬೇಕಾಗುತ್ತವೆ ?
ಇನ್ನು ಪಡಿತರ ಚೀಟಿಯನ್ನು ಪಡೆಯುವುದಕ್ಕೆ ಮತದಾರರ ಗುರುತಿನ ಚೀಟಿ, ಚಲನಾ ಪರವಾನಗಿ
(ಡ್ರೈವಿಂಗ್ ಲೈಸೆನ್ಸ್ )ಆಧಾರ್ ಕಾರ್ಡ್ (ಸ್ಕ್ಯಾನ್ ಮಾಡಿದ ಪ್ರತಿ) ನಂತಹ ವಾಸಸ್ಥಳದ ಪುರಾವೆಗಳು ಅವಶ್ಯವಾಗಿದೆ.
ವಯಸ್ಸಿನ ಆಧಾರದ ಪ್ರಮಾಣಪತ್ರ (ಸ್ಕ್ಯಾನ್ ಮಾಡಿದ ಪ್ರತಿ)
ಕುಟುಂಬದ ಆದಾಯ ಪ್ರಮಾಣ ಪತ್ರ (ಸ್ಕ್ಯಾನ್ ಪ್ರತಿ)
ಅರ್ಜಿದಾರರ ಇತ್ತೀಚಿನ ಪಾಸ್‌ಪೋರ್ಟ್ ಭಾವಚಿತ್ರ
ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಐಡಿ
ವಾರ್ಡ್ ಕೌನ್ಸಿಲರ್ ಹಾಗೂ ಪ್ರಧಾನ್ ನೀಡಿದ ಸ್ವಯಂ ಘೋಷಣೆ ಮತ್ತು ಪ್ರಮಾಣಪತ್ರ
ಬಾಡಿಗೆ ಒಪ್ಪಂದ (ಐಚ್ಛಿಕ ಅಥವಾ ಅನ್ವಯಿಸಿದರೆ)
ಈ ನಿರ್ದಿಷ್ಟ ದಾಖಲೆಗಳು ಇಲ್ಲದಿದ್ದರೆ ಪಡಿತರ ಚೀಟಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ರಾಜ್ಯ ಸರ್ಕಾರವು ಈಗಾಗಲೇ ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಪ್ರಮುಖ ಗ್ಯಾರಂಟಿಗಳ ಜಾರಿಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳೊತ್ತಿದೆ.
ಈ ನಡುವೆ ಭಾನುವಾರ ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಯೋಜನೆಯಾದ ಶಕ್ತಿ ಯೋಜನೆಗೆ ಮುಖ್ಯಮಂತ್ರಿ
ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಕುಟುಂಬದ ಪ್ರತಿಯೊಬ್ಬರಿಗೆ 10 ಕೆ.ಜಿ ಅಕ್ಕಿ ಹಾಗೂ ಗೃಹ ಲಕ್ಷ್ಮೀ ಯೋಜನೆಯ
ಅಡಿ 2000 ಸಾವಿರ ರೂಪಾಯಿ ನೀಡುವ ಯೋಜನೆಗೆ ರಾಜ್ಯ ಸರ್ಕಾರವು ಪಡಿತರ ಚೀಟಿಯನ್ನು
ಕಡ್ಡಾಯ ಮಾಡಿರುವುದರಿಂದ ಪಡಿತರ ಚೀಟಿಗೆ ರಾಜ್ಯದಲ್ಲಿ ಬೇಡಿಕೆ ಹೆಚ್ಚಳವಾಗಿದೆ.
Ration Card ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ, ಮತ್ತೊಮ್ಮೆ ಕಾರ್ಡ್ ಅಪ್ಲೈ ಮಾಡುವುದೇಗೆ ?
Share your comments