1. ಸುದ್ದಿಗಳು

ಗೃಹ ಬಳಕೆಯ ನೈಸರ್ಗಿಕ ಅನಿಲದ ಪರಿಷ್ಕೃತ ದರ ಮಾರ್ಗಸೂಚಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

Kalmesh T
Kalmesh T
Cabinet approves revised domestic gas pricing guidelines

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ನೈಸರ್ಗಿಕ ಅನಿಲದ ಪರಿಷ್ಕೃತ ದರ ಮಾರ್ಗಸೂಚಿಗೆ ಅನುಮೋದನೆ ನೀಡಿದೆ.

ಈ ರೈತರಿಗಷ್ಟೇ ದೊರೆಯಲಿದೆ ಪಿಎಂ ಕಿಸಾನ್‌ 14ನೇ ಕಂತಿನ ಹಣ! ಯಾರಿಗೆ ಗೊತ್ತೆ?

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ(ONGC) ಮತ್ತು ಆಯಿಲ್ ಇಂಡಿಯಾ ನಿಯಮಿತ(OIL)ದ ಸೂಚಿತ(ನಾಮಿನೇಟೆಡ್) ತೈಲ ಬಾವಿಗಳಲ್ಲಿ, ಹೊಸ ಪರಿಶೋಧನೆ ಪರವಾನಗಿ ನೀತಿಯ ತೈಲ ಬ್ಲಾಕ್ ಗಳು(ಎನ್ಇಎಲ್ ಪಿ), ಎನ್ಇಎಲ್ ಪಿಪೂರ್ವ(ಪ್ರೀ)-ಬ್ಲಾಕ್ ಗಳಲ್ಲಿ ನೀಡಲಾಗಿರುವ ತೈಲ ಉತ್ಪಾದನೆ ಹಂಚಿಕೆಯ ಗುತ್ತಿಗೆಗೆ ಕೇಂದ್ರ ಸರ್ಕಾರ, ದರ ಪರಿಷ್ಕರಣೆ ನಡೆಸಿ, ಅನುಮೋದನೆ ನೀಡಿದೆ.

ಅಂತಹ ನೈಸರ್ಗಿಕ ಅನಿಲದ ಬೆಲೆಯು ಭಾರತೀಯ ಕಚ್ಚಾ ತೈಲ ಪ್ರಮಾಣದ ಮಾಸಿಕ ಸರಾಸರಿಯ 10% ಆಗಿರುತ್ತದೆ. ಮಾಸಿಕ ಆಧಾರದಲ್ಲಿ ನೈಸರ್ಗಿಕ ಅನಿಲ ಬೆಲೆ ಸೂಚಿಸಲಾಗುತ್ತದೆ ಅಥವಾ ಪರಿಷ್ಕರಿಸಲಾಗುತ್ತದೆ.

ಒಎನ್ ಜಿಸಿ ಮತ್ತು ಒಐಎಲ್ ಕಂಪನಿಗಳು ತಮ್ಮ ಸೂಚಿತ (ನಾಮಿನೇಟೆಡ್) ಘಟಕಗಳಲ್ಲಿ (ಬ್ಲಾಕ್) ಉತ್ಪಾದಿಸುವ ಅನಿಲಕ್ಕೆ ಆಡಳಿತಾತ್ಮಕ ದರ ವ್ಯವಸ್ಥೆ(ಎಪಿಎಂ) ಅನ್ವಯವಾಗುತ್ತದೆ.

ಒಎನ್ ಜಿಸಿ ಮತ್ತು ಒಐಎಲ್ ನ ಸೂಚಿತ ತೈಲ ಬಾವಿಗಳು ಅಥವಾ ಹೊಸ ಬಾವಿಗಳಲ್ಲಿ ಉತ್ಪತ್ತಿಯಾಗುವ ಅನಿಲಕ್ಕೆ ಆಡಳಿತಾತ್ಮಕ ದರ ವ್ಯವಸ್ಥೆಯ ಬೆಲೆಗಿಂತ 20% ಪ್ರೀಮಿಯಂ ಅಥವಾ ಕಂತಿಗೆ ಅನುಮತಿ ನೀಡಲಾಗುತ್ತದೆ. ವಿವರವಾದ ಅಧಿಸೂಚನೆಯನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ.

ದೇಶೀಯ ಅನಿಲ ಗ್ರಾಹಕರಿಗೆ ಸ್ಥಿರವಾದ ಬೆಲೆ ವ್ಯವಸ್ಥೆ ಖಚಿತಪಡಿಸುವ ಉದ್ದೇಶವನ್ನು ಹೊಸ ಮಾರ್ಗಸೂಚಿ ಹೊಂದಿದೆ. ಜತೆಗೆ, ತೈಲ ಉತ್ಪಾದನೆ ಹೆಚ್ಚಿಸಲು ಪ್ರೋತ್ಸಾಹ ನೀಡುವ ಜತೆಗೆ, ಮಾರುಕಟ್ಟೆಯ ಪ್ರತಿಕೂಲ ಏರಿಳಿತದಿಂದ ಉತ್ಪಾದಕರಿಗೆ ಸಾಕಷ್ಟು ರಕ್ಷಣೆ ನೀಡುತ್ತದೆ.

ಭಾರತದ ಪ್ರಾಥಮಿಕ ಇಂಧನ ಬಳಕೆ ವಲಯದಲ್ಲಿ ನೈಸರ್ಗಿಕ ಅನಿಲ ಬಳಕೆಯ ಪಾಲನ್ನು ಪ್ರಸ್ತುತ ಇರುವ 6.5% ಪ್ರಮಾಣವನ್ನು 2030ರ ವೇಳೆಗೆ 15%ಗೆ ಹೆಚ್ಚಿಸಲು ಸರ್ಕಾರ ಗುರಿ ಹಾಕಿಕೊಂಡಿದೆ.

ಕೇಂದ್ರ ಸರ್ಕಾರದ ಹಲವು ಸುಧಾರಣೆಗಳು ನೈಸರ್ಗಿಕ ಅನಿಲ ಬಳಕೆ ವಿಸ್ತರಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ, ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಕಡಿತಗೊಳಿಸಿ, ನಿವ್ವಳ ಶೂನ್ಯ ಗುರಿ ಸಾಧಿಸಲು ಸಹಾಯ ಮಾಡುತ್ತದೆ.

ನಗರ ಅನಿಲ ವಿತರಣಾ ವಲಯಕ್ಕೆ ದೇಶೀಯ ಅನಿಲ ಹಂಚಿಕೆಯನ್ನು ಗಣನೀಯವಾಗಿ ಹೆಚ್ಚಿಸುವ ಮೂಲಕ ಭಾರತದಲ್ಲಿ ಅನಿಲ ಬೆಲೆಗಳ ಮೇಲೆ ಅಂತಾರಾಷ್ಟ್ರೀಯ ಅನಿಲ ಬೆಲೆಗಳ ಹೆಚ್ಚಳದ ಪರಿಣಾಮವನ್ನು ಕಡಿಮೆ ಮಾಡುವ ಮೂಲಕ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಭಾರತ ಸರ್ಕಾರವು ಕೈಗೊಂಡ ಸುಧಾರಣೆಗಳ ವಿವಿಧ ಉಪಕ್ರಮಗಳ ಮುಂದುವರಿಕೆ ಇದಾಗಿದೆ.

ಈ ಸುಧಾರಣೆಗಳ ಫಲವಾಗಿ  ಗೃಹಗಳಿಗೆ ಪೈಪ್ ಮೂಲಕ ಪೂರೈಸುವ ನೈಸರ್ಗಿಕ ಅನಿಲ(ಪಿಎನ್ ಜಿ) ಮತ್ತು ಸಾಂದ್ರೀಕೃತ ನೈಸರ್ಗಿಕ ಅನಿಲ(ಸಿಎನ್ ಜಿ)ದ ಸಾಗಣೆ ವೆಚ್ಚದಲ್ಲಿ  ಗಮನಾರ್ಹ ಇಳಿಕೆ ಆಗಲಿದೆ. ಇಳಿಕೆಯಾದ ಬೆಲೆಗಳಿಂದ ರಸಗೊಬ್ಬರ ಸಬ್ಸಿಡಿ ಹೊರೆಯನ್ನು ಕಡಿಮೆ ಮಾಡುತ್ತದೆ.

ಜತೆಗೆ ದೇಶೀಯ ವಿದ್ಯುತ್ ವಲಯಕ್ಕೆ ಸಹಾಯ ಮಾಡುತ್ತದೆ. ಹೊಸ ಬಾವಿಗಳಲ್ಲಿ ಉತ್ಪಾದಿಸುವ ಅನಿಲದ ಬೆಲೆ ಪರಿಷ್ಕರಣೆ ಜತೆಗೆ  20% ಪ್ರೀಮಿಯಂ(ಕಂತು) ಒದಗಿಸುವ ಈ ಸುಧಾರಣೆಯು ಒಎನ್ ಜಿಸಿ ಮತ್ತು ಒಐಎಲ್ ಕಂಪನಿಗಳಲ್ಲಿ ಹೆಚ್ಚುವರಿ ದೀರ್ಘಾವಧಿ ಹೂಡಿಕೆಗಳನ್ನು ಮಾಡಲು ಪ್ರೇರೇಪಿಸುತ್ತದೆ.

ಇದು ನೈಸರ್ಗಿಕ ಅನಿಲದ ಹೆಚ್ಚಿನ ಉತ್ಪಾದನೆ ಮತ್ತು ಉರವಲು(ಫಾಸಿಲ್) ಇಂಧನಗಳ ಅವಲಂಬನೆ ಮತ್ತು ಆಮದು ಕಡಿತಕ್ಕೆ ಕಾರಣವಾಗುತ್ತದೆ. ಪರಿಷ್ಕೃತ ಬೆಲೆ ಮಾರ್ಗಸೂಚಿಗಳು ಅನಿಲ ಆಧಾರಿತ ಆರ್ಥಿಕತೆಯ ಬೆಳವಣಿಗೆಯ ಮೂಲಕ ಇಂಗಾಲ ಹೊರಸೂಸುವಿಕೆಯ ಹೆಜ್ಜೆಗುರುತು ಕಡಿಮೆ ಮಾಡಲು ಉತ್ತೇಜಿಸುತ್ತದೆ.

ಕೇಂದ್ರ ಸರ್ಕಾರ 2014ರಲ್ಲಿ ಅನುಮೋದಿಸಿದ ಹೊಸ ದೇಶೀಯ ಅನಿಲ ಬೆಲೆ ಮಾರ್ಗಸೂಚಿ 2014ರ ಪ್ರಕಾರ, ಪ್ರಸ್ತುತ ಗೃಹ ಬಳಕೆಯ ಅನಿಲ ದರಗಳನ್ನು ನಿರ್ಧರಿಸಲಾಗುತ್ತಿದೆ. 2014ರ ಬೆಲೆ ಮಾರ್ಗಸೂಚಿಯಂತೆ, 6 ತಿಂಗಳ ಅವಧಿಗೆ ಗೃಹ ಬಳಕೆಯ ಅನಿಲ ಬೆಲೆಗಳನ್ನು ಘೋಷಿಸಲಾಗುತ್ತದೆ.

4 ಅನಿಲ ವ್ಯಾಪಾರ ಘಟಕಗಳಾದ ಹೆನ್ರಿ ಹಬ್, ಅಲ್ಬೆನಾ, ನ್ಯಾಷನಲ್ ಬ್ಯಾಲೆನ್ಸಿಂಗ್ ಪಾಯಿಂಟ್ (ಯುಕೆ) ಮತ್ತು ರಷ್ಯಾ ಇವುಗಳು 12 ತಿಂಗಳ ಅವಧಿಗೆ ನಿಶ್ಚಯಿಸುವ ತ್ರೈಮಾಸಿಕ ಅವಧಿಯ ಆಧಾರದಲ್ಲಿ ದರ ನಿಗದಿಪಡಿಸಲಾಗುತ್ತದೆ.
4 ಅನಿಲ ವ್ಯಾಪರ ಘಟಕಗಳನ್ನು ಆಧರಿಸಿದ ಹಿಂದಿನ ಮಾರ್ಗಸೂಚಿಗಳು ಗಮನಾರ್ಹ ಸಮಯದ ವಿಳಂಬ ಮತ್ತು ಹೆಚ್ಚಿನ ಚಂಚಲತೆ ಹೊಂದಿದ್ದರಿಂದ, ತರ್ಕಬದ್ಧವಾದ ಸುಧಾರಣೆಯನ್ನು ತರಲಾಗಿದೆ.

ಪರಿಷ್ಕೃತ ಮಾರ್ಗಸೂಚಿ ಅನ್ವಯ, ಅನಿಲ ಬೆಲೆಗಳನ್ನು ಕಚ್ಚಾ ತೈಲ ಉತ್ಪಾದನೆ ಮತ್ತು ದಾಸ್ತಾನಿಗೆ ಸಂಪರ್ಕ ಕಲ್ಪಿಸಲಾಗಿದೆ. ಇದು ಈಗ ಹೆಚ್ಚಿನ ಉದ್ಯಮ ಒಪ್ಪಂದಗಳಲ್ಲಿ ಅನುಸರಿಸುತ್ತಿರುವ ಅಭ್ಯಾಸವಾಗಿದೆ. ಇದು ನಮ್ಮ ಅನಿಲ ಬಳಕೆಯ ವ್ಯವಸ್ಥೆಗೆ ಹೆಚ್ಚು ಪ್ರಸ್ತುತವಾಗಿದೆ.

ನೈಜ ಸಮಯದ ಆಧಾರದಲ್ಲಿ ಜಾಗತಿಕ ವ್ಯಾಪಾರ ಮಾರುಕಟ್ಟೆಗಳಲ್ಲಿ ವ್ಯಾಪಕ ನಗದು ಹರಿವು(ದ್ರವ್ಯತೆ) ಹೊಂದಿದೆ. ಈಗ ಅನುಮೋದಿಸಲಾದ ಬದಲಾವಣೆಗಳೊಂದಿಗೆ, ಹಿಂದಿನ ತಿಂಗಳಿನಿಂದ ಅಂದರೆ ಮಾರ್ಚ್ ನಿಂದ ಅನ್ವಯವಾಗುವಂತೆ, ಭಾರತೀಯ ಕಚ್ಚಾ ತೈಲಬೆಲೆ ದತ್ತಾಂಶವು ಆಡಳಿತಾತ್ಮಕ ದರ ವ್ಯವಸ್ಥೆಯ ಅನಿಲ ದರ ನಿರ್ಣಯಕ್ಕೆ ಆಧಾರವಾಗಿದೆ.

Published On: 08 April 2023, 08:39 PM English Summary: Cabinet approves revised domestic gas pricing guidelines

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.