1. ಸುದ್ದಿಗಳು

13 ಕೋಟಿ ರೈತರಿಗೆ ಸಿಹಿಸುದ್ದಿ: ₹2516 ಕೋಟಿ ಬಜೆಟ್ ಹಂಚಿಕೆ, 63,000 ಕೃಷಿ ಪತ್ತಿನ ಸಹಕಾರ ಸಂಘಗಳ ಕಂಪ್ಯೂಟರೀಕರಣ!

Kalmesh T
Kalmesh T
Cabinet approves Computerization of Primary Agriculture Credit Societies

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಕಂಪ್ಯೂಟರೀಕರಣಕ್ಕೆ ಸಂಪುಟದ ಅನುಮೋದನೆ ದೊರೆತಿದ್ದು, ಒಟ್ಟಾರೆ 2516 ಕೋಟಿ ರೂ. ಬಜೆಟ್ ಹಂಚಿಕೆಯೊಂದಿಗೆ ಕಾರ್ಯಾಚರಣೆಯಲ್ಲಿರುವ 63,000 ಪಿಎಸಿಎಸ್ ಗಳ ಕಂಪ್ಯೂಟರೀಕರಣಕ್ಕೆ ಸರ್ಕಾರ ಮುಂದಾಗಿದೆ.

ಇದನ್ನೂ ಓದಿರಿ: #ಇಂದು-ನಾಳೆ ಕರ್ನಾಟಕದಲ್ಲಿ ಗುಡುಗು ಸಹಿತ ಭಾರೀ ಮಳೆ ಎಚ್ಚರಿಕೆ..! 

ಇದರಿಂದ ಸುಮಾರು 13 ಕೋಟಿ ರೈತರಿಗೆ ಪ್ರಯೋಜನವಾಗಲಿದ್ದು, ಇವರಲ್ಲಿ ಹೆಚ್ಚಿನವರು ಸಣ್ಣ ಮತ್ತು ಅತಿಸಣ್ಣ ರೈತರಾಗಿದ್ದಾರೆ.

ಇದು ಪಾರದರ್ಶಕತೆ, ದಕ್ಷತೆ, ವಿಶ್ವಾಸಾರ್ಹತೆಯನ್ನು ಹೆಚ್ಚಿಸಲಿದ್ದು, ಪಂಚಾಯತ್ ಮಟ್ಟದಲ್ಲಿ ನೋಡಲ್ ವಿತರಣಾ ಸೇವಾ ಕೇಂದ್ರವಾಗಲು ಪಿಎಸಿಎಸ್ ಗೆ ಸಹಾಯ ಮಾಡುತ್ತದೆ.

ದತ್ತಾಂಶ ಸಂಗ್ರಹಣೆ, ಸೈಬರ್ ಭದ್ರತೆ, ಯಂತ್ರಾಂಶ, ಅಸ್ತಿತ್ವದಲ್ಲಿರುವ ದಾಖಲೆಗಳ ಡಿಜಿಟಲೀಕರಣ, ನಿರ್ವಹಣೆ ಮತ್ತು ತರಬೇತಿಯೊಂದಿಗೆ ಕ್ಲೌಡ್ ಆಧಾರಿತ ಏಕೀಕೃತ ತಂತ್ರಾಂಶ ಪ್ರಮುಖ ಅಂಶಗಳಾಗಿವೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಕಂಪ್ಯೂಟರೀಕರಣಕ್ಕೆ ತನ್ನ ಅನುಮೋದನೆ ನೀಡಿದೆ.

ಇದು PACSನ ದಕ್ಷತೆಯನ್ನು ಹೆಚ್ಚಿಸುವ, ಅವುಗಳ ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರುವ ಉದ್ದೇಶವನ್ನು ಹೊಂದಿದೆ.

ರೈತರಿಗೆ ಗುಡ್‌ನ್ಯೂಸ್‌; ಶೀಘ್ರದಲ್ಲೇ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್‌ ಸ್ಥಾಪನೆ!

ತಮ್ಮ ವ್ಯವಹಾರವನ್ನು ವೈವಿಧ್ಯಮಯಗೊಳಿಸಲು ಮತ್ತು ಬಹು ಚಟುವಟಿಕೆಗಳು / ಸೇವೆಗಳನ್ನು ಕೈಗೊಳ್ಳಲು ಪಿಎಸಿಎಸ್ ಗೆ ಅನುಕೂಲ ಮಾಡಿಕೊಡಲಾಗುತ್ತದೆ.

ಈ ಯೋಜನೆಯು 5 ವರ್ಷಗಳ ಅವಧಿಯಲ್ಲಿ ಕಾರ್ಯಾಚರಣೆಯಲ್ಲಿರುವ ಸುಮಾರು 63,000 PACS ಗಳ ಕಂಪ್ಯೂಟರೀಕರಣ ಮಾಡಲು ಉದ್ದೇಶಿಸಿದೆ.

ಒಟ್ಟು 2516 ಕೋಟಿ ರೂ.ಗಳ ಬಜೆಟ್ ಹಂಚಿಕೆಯಲ್ಲಿ ಭಾರತ ಸರ್ಕಾರದ ಪಾಲು 1528 ಕೋಟಿ ರೂ.ಗಳಾಗಿರುತ್ತದೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು (ಪಿಎಸಿಎಸ್) ದೇಶದ ಮೂರು ಹಂತದ ಅಲ್ಪಾವಧಿ ಸಹಕಾರಿ ಸಾಲ (ಎಸ್.ಟಿ.ಸಿ.ಸಿ.)ದಲ್ಲಿ ಅತ್ಯಂತ ಕೆಳಹಂತದಲ್ಲಿದ್ದು, ಸುಮಾರು 13 ಕೋಟಿ ರೈತರನ್ನು ಸದಸ್ಯರನ್ನಾಗಿ ಹೊಂದಿದೆ.

ನಕಲಿ ಬೀಜ, ರಸಗೊಬ್ಬರ ಮಾರಾಟಗಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸಚಿವ ಬಿ.ಸಿ. ಪಾಟೀಲ್‌ ಖಡಕ್‌ ಸೂಚನೆ

ಇದು ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಗೆ ನಿರ್ಣಾಯಕವಾಗಿದೆ. ದೇಶದ ಎಲ್ಲಾ ಘಟಕಗಳು ನೀಡುವ ಕೆಸಿಸಿ ಸಾಲಗಳಲ್ಲಿ PACS ಪಾಲು ಶೇ.41 (3.01 ಕೋಟಿ ರೈತರು)ರಷ್ಟಿದೆ ಮತ್ತು ಪಿಎಸಿಎಸ್ ಮೂಲಕ ಈ ಕೆಸಿಸಿ ಸಾಲಗಳಲ್ಲಿ (2.95 ಕೋಟಿ ರೈತರು) ಶೇ.95 ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಂದಿದೆ.

ಇತರ ಎರಡು ಹಂತಗಳಾದ ರಾಜ್ಯ ಸಹಕಾರಿ ಬ್ಯಾಂಕುಗಳು (ಎಸ್ಟಿಸಿಬಿಗಳು) ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು (ಡಿಸಿಸಿಬಿಗಳು) ಈಗಾಗಲೇ ನಬಾರ್ಡ್ ನಿಂದ ಸ್ವಯಂಚಾಲಿತಗೊಂಡಿದ್ದು, ಸಾಮಾನ್ಯ ಬ್ಯಾಂಕಿಂಗ್ ತಂತ್ರಾಂಶ (ಸಿಬಿಎಸ್) ಗೆ ಬಂದಿವೆ.

ಆದಾಗ್ಯೂ, ಹೆಚ್ಚಿನ ಪಿಎಸಿಎಸ್ ಗಳು ಇಲ್ಲಿಯವರೆಗೆ ಕಂಪ್ಯೂಟರೀಕರಣಗೊಂಡಿಲ್ಲ ಮತ್ತು ಇನ್ನೂ ಹಸ್ತಚಾಲಿತವಾಗಿ ಕಾರ್ಯನಿರ್ವಹಿಸುತ್ತಿವೆ, ಇದರ ಪರಿಣಾಮವಾಗಿ ಅದಕ್ಷತೆ ಮತ್ತು ವಿಶ್ವಾಸದ ಕೊರತೆ ಉಂಟಾಗುತ್ತದೆ. ಕೆಲವು ರಾಜ್ಯಗಳಲ್ಲಿ, ಏಕಾಂಗಿಯಾಗಿ ಮತ್ತು ಪಿಎಸಿಎಸ್ ನ ಭಾಗಶಃ ಕಂಪ್ಯೂಟರೀಕರಣವನ್ನು ಮಾಡಲಾಗಿದೆ.

ನಬಾರ್ಡ್‌ ನೇಮಕಾತಿ: ಪದವೀಧರರಿಗೆ ಇಲ್ಲಿದೆ ಉತ್ತಮ ಅವಕಾಶ; ತಿಂಗಳಿಗೆ 1,45,000 ಸಂಬಳ!

ಈ ತಂತ್ರಾಂಶವು ರಾಜ್ಯಗಳ ಅಗತ್ಯಗಳಿಗೆ ಅನುಗುಣವಾಗಿ ಹೊಂದಿಕೊಳ್ಳುವಂತಹ (ಕಸ್ಟಮೈಸೇಶನ್) ನಮ್ಯತೆಯನ್ನು ಹೊಂದಿರುವ ಸ್ಥಳೀಯ ಭಾಷೆಯಲ್ಲಿರುತ್ತದೆ.

ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಯೋಜನಾ ನಿರ್ವಹಣಾ ಘಟಕಗಳನ್ನು (ಪಿಎಂಯು) ಸ್ಥಾಪಿಸಲಾಗುತ್ತದೆ. ಸುಮಾರು 200 ಪಿಎಸಿಎಸ್.ಗಳ ಗುಚ್ಛದಲ್ಲಿ ಜಿಲ್ಲಾ ಮಟ್ಟದ ಬೆಂಬಲವನ್ನು ಸಹ ಒದಗಿಸಲಾಗುತ್ತದೆ.

ಪಿಎಸಿಎಸ್ ನ ಕಂಪ್ಯೂಟರೀಕರಣ ಪೂರ್ಣಗೊಂಡಿರುವ ರಾಜ್ಯಗಳ ಸಂದರ್ಭದಲ್ಲಿ, ಸಾಮಾನ್ಯ ತಂತ್ರಾಂಶದೊಂದಿಗೆ ಸಂಯೋಜಿಸಲು/ಅಳವಡಿಸಿಕೊಳ್ಳಲು ಅವರು ಒಪ್ಪಿದರೆ, ಅವರ ಯಂತ್ರಾಂಶ ಅಗತ್ಯ ನಿರ್ದಿಷ್ಟತೆಗಳನ್ನು ಪೂರೈಸುತ್ತದೆ.

ತಂತ್ರಾಂಶವನ್ನು 2017 ರ ಫೆಬ್ರವರಿ 1 ರ ನಂತರ ಅನುಸ್ಥಾಪಿಸಿದ್ದರೆ, ಪ್ರತಿ ಪಿಎಸಿಎಸ್ ಗೆ ರೂ. 50,000/- ಗಳನ್ನು ಮರುಪಾವತಿಸಲಾಗುತ್ತದೆ.

Published On: 30 June 2022, 11:54 AM English Summary: Cabinet approves Computerization of Primary Agriculture Credit Societies

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.