1. ಸುದ್ದಿಗಳು

ಹತ್ತಿ ಬೆಳೆದ ರೈತರಿಗೆ ಸಂತಸದ ಸುದ್ದಿ- 30 ಎಂಎಂ ಗುಣಮಟ್ಟದ ಹತ್ತಿಗೆ 5825 ರೂಪಾಯಿ

ಹುಬ್ಬಳ್ಳಿ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಭಾರತೀಯ ಹತ್ತಿ ನಿಯಮಿತ ವತಿಯಿಂದ (ಸಿಸಿಐ)ಲಕ್ಷ್ಮೇಶ್ವರದ ಎಪಿಎಂಸಿ ಯಾರ್ಡ್‍ನ ಹತ್ತಿರದ ಬಿಸಿಎನ್ ಕಾಟನ್ ಇಂಡಸ್ಟ್ರೀಜ್ ಹಾಗೂ ಮಾಲತೇಶ ಕಾಟನ್ ಅಗ್ರೋ ಇಂಡಸ್ಟ್ರೀಜ್‍ನಲ್ಲಿ ನವೆಂಬರ್ 25 ರಿಂದ ಹತ್ತಿ ಖರೀದಿ ಆರಂಭಿಸಲಾಗುವುದು ಎಂದು ಸಿಸಿಐನ ಅಧಿಕಾರಿ ಶಕ್ತಿವೇಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹತ್ತಿಯ ಗುಣಮಟ್ಟವು 30 ಎಂಎಂ ಹತ್ತಿಗೆ 5825, 29 ಎಂಎಂಗೆ 5775 ಹಾಗೂ 28 ಎಂಎಂ ಹತ್ತಿಗೆ 5725 ದರದಂತೆ ಖರೀದಿಸಲಾಗುವುದು ಎಂದು ಹೇಳಿದ ಅವರು ರೈತರು ಖಾತೆ ಉತಾರ. ಬ್ಯಾಂಕ್ ಪಾಸ್ ಬುಕ್, ಆಧಾರ ಕಾರ್ಡ ಮತ್ತು ಬೆಳೆ ದೃಢೀಕರಣ ಪತ್ರಗಳನ್ನು ಮೂರು ಪ್ರತಿಗಳಲ್ಲಿ ತರಬೇಕು.

 ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು  ರೈತರು ತಾವು ಬೆಳೆದ ಹತ್ತಿಯನ್ನು ಮಾರಾಟ ಮಾಡಿ ಹೆಚ್ಚಿನ ಲಾಭಗಳಿಸಬೇಕು ಎಂದು ಅವರು ಹೇಳಿದರು.

Published On: 23 November 2020, 10:13 PM English Summary: BT Cotton purchase start from 25th november

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.