1. ಸುದ್ದಿಗಳು

ಸರ್ಕಾರದಿಂದ ಬಂದ ಹಣ ನಿಮ್ಮ ಅಕೌಂಟ್ ಗೆ ಜಮಾ ಆಗ್ತಿಲ್ಲವೇ? ಹಾಗಾದ್ರೆ ಎಲ್ಲಿ ಹೋಯ್ತು? ಇಲ್ಲಿದೆ ಮಾಹಿತಿ

 ಆತ್ಮೀಯ ರೈತರೇ ಸರ್ಕಾರದಿಂದ ಎಷ್ಟೇ ಹಣ ಬಿಡುಗಡೆಯಾದರೂ ನಿಮ್ಮ ಖಾತೆಗೆ ಜಮಾ ಆಗುತ್ತಿಲ್ಲವೇ? ನೀವು ಹಾಗೂ ನಿಮ್ಮ ಮನೆಯ ಪಕ್ಕದ ರೈತರು ಇಬ್ಬರೂ ಒಟ್ಟಿಗೆ ಅರ್ಜಿ ಸಲ್ಲಿಸಿದ್ದರು ಅವರ ಖಾತೆಗೆ ಬಂದಿದೆ ಆದರೆ ನಿಮ್ಮ ಖಾತೆಗೆ ಬಂದಿಲ್ಲವಾ? ಹಾಗಾದರೆ ಸರಕಾರದಿಂದ ಬಂದ ಹಣ ಎಲ್ಲಿ ಹೋಯಿತು?

 ನಾವು ಸರ್ಕಾರದ ಹಲವಾರು ಯೋಜನೆಗಳಲ್ಲಿ ಅರ್ಜಿಯನ್ನು ಸಲ್ಲಿಸಿ, ಹಲವಾರು ತಿಂಗಳುಗಳಾದರೂ ನಮ್ಮ ಖಾತೆಗೆ ಹಣ ಜಮೆಯಾಗಿರುವುದಿಲ್ಲ ಹಾಗಾದ್ರೆ ಅ ಹಣ ಎಲ್ಲಿಹೋಯ್ತು ಅಂತ ಯೋಚಿಸ್ತಿದ್ದೀರಾ, ಆತ್ಮೀಯ ರೈತರೇ ಅ ಹಣ ಎಲ್ಲಿಯೂ ಹೋಗಿರಲ್ಲ ಅದು ನಿಮ್ಮ ಹೆಸರಿಗೆ ಜಮಾ ಆಗಿರುತ್ತದೆ.

ಈಗ ಸರ್ಕಾರ ಯಾವುದೇ ಯೋಜನೆಯಡಿಯಲ್ಲಿ ರೈತರಿಗೆ ಹಣ ಜಮೆ ಮಾಡುವಾಗ direct benefit transfer ಮೂಲಕ ಮಾಡುತ್ತದೆ, ಹಾಗಾದ್ರೆ direct benefit transfer ಅಂದರೆ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿ ಕೊನೆಯ ಬಾರಿ ಎಲ್ಲಿ ಅಕೌಂಟ್ open ಮಾಡಿರುತ್ತೀರೋ ಅಲ್ಲಿ ಬರುತ್ತೆ ಅಥವಾ ನೀವು ಅಕೌಂಟ್ ತೆರೆಯುವಾಗ ಒಂದು ಆಯ್ಕೆಯನ್ನು ಕೇಳುತ್ತೆ do you want to receive dbt to this account ಅಂತ ನೀವು ಅದಕ್ಕೇನಾದರೂ ok ಅಂತ ಕೊಟ್ಟಿದ್ದಾರೆ ಅದೇ ಅಕೌಂಟ್ ಗೆ ಜಮಾ ಆಗುತ್ತೆ.

ಹಾಗಾಗಿ  ಹಲವಾರು ಬಾರಿ ಕಂಪ್ಯೂಟರ್ನಲ್ಲಿ ಚೆಕ್ ಮಾಡಿಸಿದರೆ ಜಮೆ ಆಗಿದೆ  ಅಂತ ತೋರಿಸುತ್ತೆ ಆದರೆ ಜಮೆ ಆಗಿರುವುದಿಲ್ಲ ಅದಕ್ಕೆ ಕಾರಣ dbt, ಹಾಗಾಗಿ ನಿಮಗೆ ಯಾವುದೇ ಯೋಜನೆಯ ಹಣ ಬಂದಿಲ್ಲವೆಂದರೆ ಅವಾಗ ನೀವು ನಿಮ್ಮ ಎಲ್ಲ ಅಕೌಂಟ್ ಗಳನ್ನೊಮ್ಮೆ ಚೆಕ್ ಮಾಡ್ಸಿ.

ನಿಮಗೆ ಹಲವಾರು ಬಾರಿ ಗೊತ್ತಿಲ್ಲದೇ ನಿಮ್ಮ ಮಕ್ಕಳಾಗಲಿ ಅಥವಾ ಯಾರಾದರೂ ಕ್ಯಾಶ್ಬ್ಯಾಕ್ ಆಫರ್ಗಾಗಿ jiopayments bank, airtel payments bank, ಹಾಗೂ ಇನ್ನಿತರ ಆನ್ಲೈನ್ ಬ್ಯಾಂಕ್ ಅಕೌಂಟ್ ಗಳನ್ನು ನಿಮ್ಮ ಆಧಾರ್ ಸಂಖ್ಯೆಯಿಂದ ನಿರ್ಮಿಸಿದ್ದರೆ ಆಗ ನಿಮ್ಮ ಸರ್ಕಾರದಿಂದ ಬರುವ ಯೋಜನೆಯ ಹಣವು ಆನ್ಲೈನ್ ಬ್ಯಾಂಕ್ ಗಳಿಗೆ ಕೂಡ ಹೋಗುವ ಅವಕಾಶಗಳಿವೆ.

ಉದಾಹರಣೆ :ನಮ್ಮ ಮನೆಯ ಹತ್ತಿರ ಒಬ್ಬರು ಸರ್ಕಾರಕ್ಕೆ ಬೆಂಬಲ ಯೋಜನೆಯಡಿಯಲ್ಲಿ ಕಡಲೆಯನ್ನು ನೀಡಿದ್ದರು, ಎಲ್ಲರ ಹಣ ಜಮಾ ಆದರೂ ಅವರ ಹಣ ಜಮಾ ಆಗಿರಲಿಲ್ಲ ಹಾಗಾಗಿ ಅವರಿಗೆ ಅಲಿದು ಅಲಿದು ಸಾಕಾಗಿ ಕೊನೆಗೆ ಅವರು ಚೆಕ್ಜ್ ಮಾಡಿಸಿದಾಗ airtel payments bank ಗೆ ಜಮಾ ಆಗಿತ್ತು, ಅವರ ಮಗ ಅವರ ಆಧಾರ್ ಬಳಸಿ airtel payments ಬ್ಯಾಂಕ್ ಅಕೌಂಟ್ ಮಾಡಿದ್ದು ಅವರಿಗೆ ಗೊತ್ತಿರಲಿಲ್ಲ.

ಹಾಗಾಗಿ ನಿಮಗೆ ಸರ್ಕಾರದಿಂದ ಯಾವುದೇ ಹಣ ಸ್ಯಾಂಕ್ಷನ್ ಅಗಿಯು ನಿಮ್ಮ ಅಕೌಂಟ್ ಗೆ ಜಮಾ ಆಗದೆ ಇದ್ದಾಗ ನೀವು ನಿಮ್ಮ ಎಲ್ಲ ಅಕೌಂಟ್ಗಳನ್ನು ಚೆಕ್ ಮಾಡಿಸಿ ಹಣ ಎಲ್ಲಿಯೂ ಹೋಗಿರಲ್ಲ ನಿಮ್ಮ ಅಕೌಂಟ್ ಗಳಿಗೆ direct benefit transfer ಮೂಲಕ ಜಮಾ ಆಗಿರುತ್ತದೆ.

Published On: 23 November 2020, 06:02 PM English Summary: government money schemes

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.