ವಿಮಾನದಲ್ಲಿ ಪ್ರಯಾಣಿಸುವುದು ಸಾಮಾನ್ಯಜನರಿಗೆ ಕನಸಿನ ಮಾತು ಎಂದು ಹೇಳಲಾಗುತ್ತಿತ್ತು. ಆದರೆ ಈಗ ಉಡಾನ್ ಯೋಜನೆಯಡಿಯಲ್ಲಿ ಸಾಮಾನ್ಯ ಜನರು ವಿಮಾನದಲ್ಲಿ ಪ್ರಯಾಣಿಸಬಹುದು.
ಹೌದು, ‘ಉಡಾನ್’ ಯೋಜನೆಯಡಿ ಮೈಸೂರು–ಬೆಳಗಾವಿ ನಡುವೆ ವಿಮಾನದಲ್ಲಿ ಬಸ್ ಟಿಕೆಟ್‌ಗಿಂತ ಕಡಿಮೆ ದರದಲ್ಲಿ ಹಾಗೂ ಕಡಿಮೆ ಸಮಯದಲ್ಲಿ ಪ್ರಯಾಣ ಬೆಳೆಸಬಹುದು.
ಟ್ರೂ ಜೆಟ್ ವಿಮಾನಯಾನ ಸಂಸ್ಥೆಯು ಕಡಿಮೆ ದರದಲ್ಲಿ ಪ್ರಯಾಣಿಸುವ ಸೌಲಭ್ಯ ಒದಗಿಸಿದೆ. 921 ದರದಲ್ಲಿ (ಜೊತೆಗೆ ತೆರಿಗೆ) ಈ ಸೇವೆ ಒದಗಿಸಲಿದೆ. ಸಂಸ್ಥೆಯ ಪ್ರಕಟಣೆ ಪ್ರಕಾರ ಜ.15ರವರೆಗೆ ಟಿಕೆಟ್ ಕಾಯ್ದಿರಿಸಿ ಜ.9ರಿಂದ ಅ.30ರವರೆಗೆ ಈ ದರದಲ್ಲಿ ಪ್ರಯಾಣಿಸಬಹುದಾಗಿದೆ. ಅಲ್ಲದೇ, ಈ ಅವಧಿಯಲ್ಲಿ ಮೈಸೂರು–ಚೆನ್ನೈ ನಡುವೆ ಕೂಡ 921 ದರ ಇರಲಿದೆ. ಇನ್ನೇಕೆ ತಡ, ಯಾವುದಾದರೂ ಕೆಲಸವಿದ್ದರೆ ಈಗಲೇ ಬುಕ್ ಮಾಡಿ ಒಂದ್ಸಲ ವಿಮಾನದಲ್ಲಿ ಪ್ರಯಾಣಿಸಿ.
ಮೈಸೂರಿನಿಂದ ಬೆಳಗಾವಿಗೆ 1 ಗಂಟೆ 35 ನಿಮಿಷದಲ್ಲಿ ಪ್ರಯಾಣಿಸಬಹುದಾಗಿದೆ. ಈ ಎರಡೂ ನಗರಗಳ ನಡುವೆ ಐಷಾರಾಮಿ ಬಸ್‌ಗಳ ದರ ಸಾವಿರ ರೂಪಾಯಿವರೆಗೆ ಇದೆ. ಅಲ್ಲದೇ, ಬಸ್ಸಿನಲ್ಲಿ ಸುಮಾರು 12 ಗಂಟೆ ತೆಗೆದುಕೊಳ್ಳುತ್ತದೆ.
ಮೈಸೂರಿನಿಂದ ಸಂಜೆ 5 ಗಂಟೆಗೆ ಹೊರಡುವ (ಸಂಖ್ಯೆ 544) ವಿಮಾನವು ಸಂಜೆ 6.35ಕ್ಕೆ ಬೆಳಗಾವಿ ತಲುಪಲಿದೆ. ಬೆಳಗಾವಿಯಿಂದ ಸಂಜೆ 7 ಗಂಟೆಗೆ ಹೊರಟು, ರಾತ್ರಿ 8.10ಕ್ಕೆ ಮೈಸೂರು ತಲುಪಲಿದೆ. ಮೈಸೂರಿನಿಂದ ರಾತ್ರಿ 8.30ಕ್ಕೆ ಹೊರಟು (ಸಂಖ್ಯೆ 538), ಚೆನ್ನೈಗೆ 9.50ಕ್ಕೆ ತಲುಪಲಿದೆ. ಚೆನ್ನೈನಿಂದ ಮಧ್ಯಾಹ್ನ 3.25ಕ್ಕೆ ಹೊರಟು ಸಂಜೆ 4.40ಕ್ಕೆ ಮೈಸೂರು ತಲುಪುತ್ತದೆ.
Share your comments