1. ಸುದ್ದಿಗಳು

ಕೇರಳದಲ್ಲಿ ಹಕ್ಕಿ ಜ್ವರ: ಸೋಂಕು ತಡೆಗೆ ಮಾರ್ಗಸೂಚಿ ಪ್ರಕಟ

Hitesh
Hitesh
Bird flu in Kerala

ಕೇರಳದಲ್ಲಿ ಮತ್ತೆ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಮನುಷ್ಯರಿಗೆ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಅವರು ಎಚ್ಚರಿಕೆ ನೀಡಿದ್ದಾರೆ.

ಚಿನ್ನದ ದರದಲ್ಲಿ ಮತ್ತೆ ಏರಿಕೆ, ಎಷ್ಟಿದೆ ಇಂದಿನ ಚಿನ್ನದ ದರ ?

ಈಗಾಗಲೇ ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳವಂತೆ ಎಲ್ಲಾ ಜಿಲ್ಲೆಗಳಿಗೂ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಪ್ರತಿಯೊಬ್ಬರೂ ಆರೋಗ್ಯ ಇಲಾಖೆ ಹೊರಡಿಸಿದ ನಿರ್ದೇಶನಗಳನ್ನು ಅನುಸರಿಸಬೇಕು. ಸೋಂಕು ಕಾಣಿಸಿಕೊಂಡ ಪ್ರದೇಶಗಳಲ್ಲಿ ಜನರಲ್ಲಿ ಜ್ವರ ಮತ್ತು ಇತರ ರೋಗಲಕ್ಷಣಗಳನ್ನು ಆರೋಗ್ಯ ಇಲಾಖೆ ಮೇಲ್ವಿಚಾರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ತೀವ್ರವಾದ ಬೆನ್ನು ನೋವು, ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಶೀತ ಮತ್ತು ಕಫದಲ್ಲಿ ರಕ್ತ ಕಾಣಿಸಿಕೊಳ್ಳುವುದು ಸೋಂಕಿನ ಪ್ರಮುಖ ಲಕ್ಷಣಗಳಾಗಿವೆ. ಈ ರೋಗ ಲಕ್ಷಣ ಹಾಗೂ ಉಸಿರಾಟದ ತೊಂದರೆಗಳಿದ್ದರೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರ ಮತ್ತು ವೈದ್ಯರನ್ನು ಭೇಟಿ ಮಾಡಬೇಕು. ಸೋಂಕಿತ ಮತ್ತು ಆರೋಗ್ಯಕರ ಪಕ್ಷಿಗಳೊಂದಿಗೆ ಸಂಪರ್ಕಕ್ಕೆ ಬರುವವರು ಕೈಗವಸು, ಮುಖಗವಸು ಹಾಕಿಕೊಳ್ಳುವುದು ಮತ್ತು ಆಗಾಗ್ಗೆ ಕೈಗಳನ್ನು ತೊಳೆಯುವಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.  

ಇನ್ನು ಶನಿವಾರ ಕೊಟ್ಟಾಯಂ ಜಿಲ್ಲೆಯ ಚೆಂಪು ಪಂಚಾಯತ್‌ ವಾರ್ಡ್‌ ಒಂದರಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ. ಇಲ್ಲಿನ ಬಾತುಕೋಳಿಗಳು, ಕೋಳಿಗಳು  ಸೇರಿದಂತೆ 1,317 ಪಕ್ಷಿಗಳನ್ನು ಕೊಲ್ಲಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Aadhaar Card| ಆಧಾರ್ ಕಾರ್ಡ್ ನವೀಕರಣ: UIDAI ಟೋಲ್ ಫ್ರೀ ಸಂಖ್ಯೆ ಪರಿಚಯ 

ವರ್ಷದ ಮೊದಲ ಜಲ್ಲಿಕಟ್ಟುಗೆ ಚಾಲನೆ

ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯಲ್ಲಿ ಹೋರಿ ಕಟ್ಟಿ ಹಾಕುವ ವರ್ಷದ ಮೊದಲ ಜಲ್ಲಿಕಟ್ಟು ಸ್ಪರ್ಧೆಗೆ  ಭಾನುವಾರ ಚಾಲನೆ ನೀಡಲಾಯಿತು.

ಸಚಿವರಾದ ಶಿವ ವಿ ಮೆಯ್ಯನಾಥನ್ ಮತ್ತು ಎಸ್ ರೇಗುಪತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಸ್ಪರ್ಧಾಳುಗಳನ್ನು ಪ್ರೋತ್ಸಾಹಿಸಿದರು.

ಪುದುಕ್ಕೊಟ್ಟೈನ ತಚ್ಚಂಕುರಿಚಿ ಗ್ರಾಮದಲ್ಲಿ ಸಾವಿರಾರು ಜನ ಉತ್ಸಾಹದಿಂದ ವರ್ಷದ ಮೊದಲ ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸಿದ್ದರು. ಅಲ್ಲದೇ 300 ಕ್ಕೂ ಹೆಚ್ಚು ಹೋರಿಗಳನ್ನು ಒಂದರ ನಂತರ ಒಂದರಂತೆ ಕ್ರೀಡಾ ಅಖಾಡಕ್ಕೆ ಇಳಿಸಲಾಗಿತ್ತು. 350 ಮಂದಿ ಓಡುತ್ತಿರುವ ಹೋರಿ ಹಿಡಿಯಲು ಪೈಪೋಟಿ ನಡೆಸಿದ್ದು, ರೋಚಕವಾಗಿತ್ತು.  

ದೆಹಲಿಯ ಪೆರೇಡ್‌: ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ!   

ಗೆಲ್ಲುವ ಹೋರಿಗಳು ಮತ್ತು ಅದನ್ನು ಪಳಗಿಸುವವರಿಗೆ ಮೋಟಾರ್‌ಸೈಕಲ್,  ಕುಕ್ಕರ್‌ ಸೇರಿದಂತೆ ಹಲವು ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿದೆ. ಕ್ರೀಡೆಗೆ ಅನುಮತಿ ನೀಡುವ ಮುನ್ನ ಅಧಿಕಾರಿಗಳು ಭದ್ರತೆ ಮತ್ತು ಸುರಕ್ಷತಾ ಅಂಶಗಳು ಸೇರಿದಂತೆ ವ್ಯವಸ್ಥೆಯನ್ನು ಪರಿಶೀಲಿಸಲಾಗಿದೆ.  

Pm Kisan| ಪಿ.ಎಂ ಕಿಸಾನ್‌ ಅಪ್ಡೇಟ್‌: 13ನೇ ಕಂತಿಗಾಗಿ ಕಾಯುತ್ತಿರುವ ಕೋಟಿಗಟ್ಟಲೆ ರೈತರಿಗೆ ಮಹತ್ವದ ಮಾಹಿತಿ  

jallikattu

ಇನ್ನು ತಮಿಳುನಾಡಿನ ಜನಪ್ರಿಯವಾದ ದೇಸಿ ಕ್ರೀಡೆ ಜಲ್ಲಿಕಟ್ಟನ್ನು ಹಿಂಸೆಯ ಕಾರಣದಿಂದ ಸುಪ್ರೀಂಕೋರ್ಟ್‌ ಕೆಲಕಾಲ ನಿಷೇಧಿಸಿತ್ತು. ತಮಿಳುನಾಡು ಸರ್ಕಾರ ಕಾನೂನು ಸಮರ ಮತ್ತು ಪ್ರತಿಭಟನೆಗಳ ಬಳಿಕ ಮತ್ತೆ ಅವಕಾಶ ನೀಡಲಾಗಿದೆ.  

ಪ್ರತಿ ವರ್ಷವೂ ಸಂಭ್ರಮದಿಂದ ಕ್ರೀಡೆಯನ್ನು ನಡೆಸಲಾಗುತ್ತಿದೆ.  ತಮಿಳುನಾಡು ಸರ್ಕಾರ ಸುರಕ್ಷತೆ ದೃಷ್ಟಿಯಿಂದ ಇತ್ತೀಚೆಗೆ ಜಲ್ಲಿಕಟ್ಟು ಕಾರ್ಯಕ್ರಮಗಳಿಗೆ ಸುದೀರ್ಘ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.

ದೆಹಲಿಯ ಪೆರೇಡ್‌: ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ!    

Published On: 09 January 2023, 11:06 AM English Summary: Bird flu in Kerala: Guidelines for prevention of infection published

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.