1. ಸುದ್ದಿಗಳು

BBMP Khata ಬೆಂಗಳೂರಿನಲ್ಲಿ ನಡೆಯಲಿದೆ ಅತೀ ದೊಡ್ಡ ಖಾತಾ ಆಂದೋಲನ: ಮಿಸ್‌ ಮಾಡಲೇ ಬೇಡಿ!

Hitesh
Hitesh

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ಇಲಾಖೆ ವತಿಯಿಂದ ಬಹುದೊಡ್ಡ ಖಾತಾ ಆಂದೋಲನವನ್ನು ಹಮ್ಮಿಕೊಂಡಿದೆ.

ಈ ಕುರಿತು ಬಿಬಿಎಂಪಿಯ ವಿಶೇಷ ಆಯುಕ್ತ(ಕಂದಾಯ)ರಾದ ಡಾ. ಆರ್.ಎಲ್ ದೀಪಕ್ ಅವರು ವಿವರಣೆ ನೀಡಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಸ್ವತ್ತುಗಳನ್ನು ನಗರ ಪಾಲಿಕೆ ವಹಿಗಳಲ್ಲಿ ದಾಖಲಿಸಿಕೊಂಡು ಆಸ್ತಿತೆರಿಗೆ ವ್ಯಾಪ್ತಿಗೆ ಒಳಪಡಿಸಲು

ಹಾಗೂ ಈ ಸಂಬಂಧ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲು ಫೆಬ್ರವರಿ 27ರಿಂದ ಖಾತಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕೇಂದ್ರದಿಂದ ಕರ್ನಾಟಕಕ್ಕೆ ಪ್ರತಿ ವರ್ಷ ಸಾವಿರಾರು ಕೋಟಿ ಹೂಡಿಕೆ: ಮೋದಿ

ಪಾಲಿಕೆಯ ಎಲ್ಲಾ ವಲಯಗಳಲ್ಲಿರುವ ಸಹಾಯಕ ಕಂದಾಯ ಅಧಿಕಾರಿಗಳ(ARO) ಕಚೇರಿಗಳಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಲಾಗುತ್ತಿದ್ದು,

ಈ ಹೆಲ್ಪ್ ಡೆಸ್ಕ್‌ಗಳು ಬೆಳಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ. 

ಸ್ವತ್ತಿನ ಮಾಲೀಕರಿಗೆ ಹೊಸದಾಗಿ ಖಾತೆ ನೊಂದಾಯಿಸಿಕೊಳ್ಳುವ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು.

ಖಾತಾ ಆಂದೋಲನ ಕಾರ್ಯಕ್ರಮದ ಮೂಲಕ ಪಾಲಿಕೆ ವ್ಯಾಪ್ತಿಯಲ್ಲಿನ ಸ್ವತ್ತಿನ ಮಾಲೀಕರು ಸಂಬಂಧಪಟ್ಟ

ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗಳನ್ನು ಸಂಪರ್ಕಿಸಿ ಸ್ವತ್ತಿನ ದಾಖಲೆಗಳನ್ನು ಸಲ್ಲಿಸುವ ಮೂಲಕ ಅರ್ಜಿ ಸಲ್ಲಿಸಬಹುದು.

PM Kissan ಪಿ.ಎಂ ಕಿಸಾನ್‌ 13ನೇ ಕಂತಿನ ಹಣ ಇನ್ನು ಕೆಲವೇ ಗಂಟೆಗಳಲ್ಲಿ ನಿಮ್ಮ ಖಾತೆಗೆ! ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಪರಿಶೀಲಿಸಿ

ಖಾತೆ ನೊಂದಾವಣೆ ಕುರಿತ ಅರ್ಜಿಗಳನ್ನು ಪರಿಶೀಲಿಸಿ ಸ್ವತ್ತುಗಳ ವಿವರಗಳನ್ನು ನಿಯಮಾನುಸಾರ ಕಾಲಮಿತಿಯಲ್ಲಿ ನೊಂದಾಯಿಸಿಕೊಂಡು ಆಸ್ತಿತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.  

ಖಾತಾ ಆಂದೋಲನ ಕಾರ್ಯದ ಮೇಲ್ವಿಚಾರಣೆಗೆ ವಲಯ ಉಪ ಆಯುಕ್ತರುಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಗಳ ದೂರವಾಣಿ ಸಂಖ್ಯೆ ಹಾಗೂ ಕಚೇರಿ ವಿಳಾಸ ಪಡೆಯಲು ಪಾಲಿಕೆಯ ಜಾಲತಾಣ https://bbmp.gov.in/ ಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬುಹುದು.

ಖಾತಾ ಎಂದರೇನು ?

ಖಾತಾ ಎಂದರೆ ನಿಮ್ಮ ಸ್ವತ್ತಿನ ಕಂದಾಯ ನಿರ್ಧಾರಣೆಗಾಗಿ ನೀಡಲಾಗುವ ಒಂದು ದಾಖಲೆ ಇದರಲ್ಲಿ ಸತ್ತಿನ ಸ್ಥಳ, ಆಳತೆ, ಬಂಡಿ, ಕಟ್ಟಡ ಹಾಗೂ ಇತರ ವಿವರಗಳನ್ನು ದಾಖಲಿಸಿ, ಸತ್ತಿನ

ಕಂದಾಯ ಪಾವತಿಗೆ ಜವನಾರಾಗಿರುವ ವ್ಯಕ್ತಿಯನ್ನು ಗುರುತಿಸುವುದು.

ಖಾತೆಯು ಸ್ವತ್ತಿನ ಮಾಲೀಕತ್ವವನ್ನು ನಿರೂಪಿಸುವುದಿಲ್ಲ.

ಖಾತೆಗೆ ಯಾರು ಅರ್ಜಿ ಸಲ್ಲಿಸಬಹುದು ? 

ಬಿಎಂಪಿ ವ್ಯಾಪ್ತಿಯಲ್ಲಿರುವ ಸ್ವತ್ತುಗಳ ವಿವರಗಳನ್ನು ನಗರ ಪಾಲಿಕೆಯಲ್ಲಿ ದಾಖಲಿಸಿಕೊಳ್ಳದೇ ಇರುವ ಸ್ವತ್ತಿನ ಮಾಲೀಕರು / ಅನುಭವದಾರರು ಖಾತೆಯನ್ನು ಪಡೆಯಲು

ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಯ ಕಚೇರಿಯನ್ನು ಸಂಪರ್ಕಿಸಬಹುದು.

ರಾಷ್ಟ್ರ ರಾಜಧಾನಿಯಲ್ಲಿ ಮೊಳಗಿತು ಕನ್ನಡದ ಡಿಂಡಿಮ!

 ಖಾತೆಯನ್ನು ಪಡೆಯಲು ಎಲ್ಲಿ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು?

ಸಹಾಯಕ ಕಂದಾಯ ಅಧಿಕಾರಿಗಳ ದೂರವಾಣಿ ಸಂಖ್ಯೆ ಕಚೇರಿ ವಿಳಾಸ ಮತ್ತು ಸದರಿ ಉಪವಿಭಾಗ ವ್ಯಾಪ್ತಿಗೆ ಒಳಪಡುವ ವಾರ್ಡ್‌ಗಳ ವಿವರಗಳುಳ ಮಾಹಿತಿಯನ್ನು

QR Code ಸೈನ್ ಮಾಡುವ ಮೂಲಕ ಅಥವಾ ಬಿಬಿಎಂಪಿ ವೆಬ್‌ಸೈಟ್: www.bbmp.gov.inನಲ್ಲಿ ಪಡೆಯಬಹುದು.

ಖಾತೆ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯಲು ಪ್ರತಿಯೊಂದು ಸಹಾಯಕ ಕಂದಾಯ ಅಧಿಕಾರಿಯ

ಕಛೇರಿಯಲ್ಲಿ ರಚಿಸಲಾಗಿರುವ ಹೆಲ್ಪ್ ಡೆಸ್ಕ್ ಅನ್ನು ಸಂಪರ್ಕಿಸಬಹುದಾಗಿದೆ (ಕೆಲಸದ ದಿನಗಳಂದು ಬೆಳಗ್ಗೆ 11 ಗಂಟೆಯಿಂದ

ಸಂಜೆ 4.00 ಗಂಟೆಯವರೆಗೆ).  

ಬಿಬಿಎಂಪಿ ಸಹಾಯವಾಣಿ

ಸಾರ್ವಜನಿಕರು ದೂರವಾಣಿ ಸಂಖ್ಯೆ 1533 ಅಥವಾ 080-2222 1188 ಗೆ ಕರೆ ಮಾಡಬಹುದಾಗಿದೆ. ಸಂಬಂಧಪಟ್ಟ ಉಪವಿಭಾಗ ಕಚೇರಿ ಮತ್ತು ಅಧಿಕಾರಿಯ ವಿವರಗಳನ್ನು ಪಡೆಯಬಹುದು.

ಸಾರ್ವಜನಿಕರು ಖಾತೆ ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದ ದೂರುಗಳಿಗಾಗಿ ನೋಡಲ್ ಅಧಿಕಾರಿಯಾಗಿರುವ ವಲಯ ಉಪ ಆಯುಕ್ತರಗಳನ್ನು ಸಂಪರ್ಕಿಸಬಹುದು.

ಯಾವುದೇ ಅರ್ಜಿಯ ಬಗೆಗಿನ ದೂರುಗಳನ್ನು dcrev@bbmp.gov.inಗೆ ಮೇಲ್ ಮಾಡಬಹುದು.  

7th pay commission 7ನೇ ವೇತನ ಆಯೋಗ ಅನುಷ್ಠಾನಕ್ಕೆ ಆಗ್ರಹಿಸಿ ಸರ್ಕಾರಿ ನೌಕರರಿಂದ ಮಾ. 1ರಿಂದ ಕೆಲಸಕ್ಕೆ ಗೈರು!

Published On: 26 February 2023, 12:27 PM English Summary: Biggest Khata movement to be held in Bangalore: Don't miss it!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.