ಭಾರತದ ಈ ರಾಜ್ಯದಲ್ಲಿ ತಂದಿರುವ ಹೊಸದೊಂದು ಕಾನೂನಿನ ಬಗ್ಗೆ ಎಲ್ಲರಲ್ಲೂ ಅಚ್ಚರಿ ಶುರುವಾಗಿದೆ.
ಭಾರತದ ಈಶಾನ್ಯ ರಾಜ್ಯವೊಂದು ಮದ್ಯಸೇವನೆ ಮಾಡುವ ಪೊಲೀಸರಿಗೆ ಶಾಕ್ ನೀಡಿದೆ.
ಹೌದು ಪೊಲೀಸರ ಮೇಲೆ ತೆಗೆದುಕೊಂಡಿರುವ ಕ್ರಮ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಈಶಾನ್ಯ ಭಾರತದ ಅಸ್ಸಾಂನ 300 ಪೊಲೀಸ್ ಅಧಿಕಾರಿಗಳಿಗೆ ಕರ್ತವ್ಯಕ್ಕೆ ರಾಜೀನಾಮೆ ನೀಡಲು ಸೂಚಿಸಲಾಗಿದೆ.
ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅತಿಯಾದ ಮದ್ಯಪಾನವು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಹೀಗಾಗಿ, ಈ ರೀತಿ ಮದ್ಯಸೇವನೆಗೆ ಈಡಾಗಿರುವವರು ಶೀಘ್ರ ನಿವೃತ್ತರಾಗುವುದು ಉತ್ತಮ ಎಂದಿದ್ದಾರೆ.
ಶರ್ಮಾ ಈ ಹಿಂದೆಯೂ ಅಸ್ಸಾಂನಲ್ಲಿ ಈ ವಿಷಯ ಚರ್ಚೆ ಆಗಿತ್ತು.
ಪೊಲೀಸರು ಮದ್ಯ ಸೇವನೆ ಮಾಡಿ, ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ವರದಿ ಆಗುತ್ತಿತ್ತು.
ಅಸ್ಸಾಂನ ಹಲವಾರು ಅಧಿಕಾರಿಗಳನ್ನು ಕರ್ತವ್ಯದ ವೇಳೆ ಕುಡಿದು ಅಸಭ್ಯ ವರ್ತನೆ
ಮಾಡಿದ್ದಕ್ಕಾಗಿ ಅಮಾನತು ಮಾಡಲಾಗಿದ್ದು, ಸಹ ಮಾಧ್ಯಮಗಳಲ್ಲಿ ವರದಿ ಆಗಿತ್ತು.
ಅಸ್ಸಾಂನ ಪೊಲೀಸರು ಮದ್ಯಸೇವನೆ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಹೊಸ ನಿಯಮವನ್ನು ಜಾರಿ ಮಾಡಲು ಮುಂದಾಗಿದೆ ಎನ್ನಲಾಗಿದೆ.
ಇದು ಹಳೆಯ ನಿಯಮವಾಗಿದ್ದು, ನಾವು ಇದನ್ನು ಮೊದಲು ಜಾರಿಗೆ ತಂದಿಲ್ಲ ಎಂದು ಅಸ್ಸಾಂನ ಮುಖ್ಯಮಂತ್ರಿ ತಿಳಿಸಿದ್ದಾರೆ.
ಅಲ್ಲದೇ ತಮ್ಮ ಅಧಿಕಾರಿಗಳು ಫಿಟ್ ಆಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಅವರು ಪೊಲೀಸ್ ಮುಖ್ಯಸ್ಥರಿಗೆ ಸೂಚನೆ ನೀಡಿದರು.
ಸೇವೆಯಲ್ಲಿ ವ್ಯತ್ಯಯ
ಮದ್ಯಪ್ರಿಯ ಪೊಲೀಸರಿಂದ ಅಸ್ಸಾಂನ ಕಾನೂನು ಸುವ್ಯವಸ್ಥೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದ್ದು, ಅದನ್ನು ಅಸ್ಸಾಂನಿನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಅಲ್ಲದೇ ಪೊಲೀಸರು ಮದ್ಯ ಸೇವನೆ ಮಾಡಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿಯೂ, ತೊಂದರೆ ಆಗುತ್ತಿರುವುದಾಗಿಯೂ ಸಾರ್ವಜನಿಕರಿಂದ
ನಿರಂತರವಾಗಿ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಅಲ್ಲಿನ ಸರ್ಕಾರ ಮುಂದಾಗಿದೆ.
ಈ ರೀತಿ ನಿಯಮ ಉಲ್ಲಂಘನೆ ಮಾಡುವವರಿಗೆ ವಿಆರ್‌ಎಸ್ ನೀಡಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ.
ಅತಿಯಾದ ಮದ್ಯವ್ಯಸನಿಗಳಿಗೆ ಅಸ್ಸಾಂ ಸರ್ಕಾರವು ಸ್ವಯಂ ನಿವೃತ್ತಿ ಯೋಜನೆ ಪರಿಚಯಸಿಸುತ್ತಿದೆ.
ವಿಮಾನ ಪ್ರಯಾಣ; ಭಾರತದಲ್ಲಿ ಹೊಸ ದಾಖಲೆ ಸೃಷ್ಟಿ, ಒಂದೇ ದಿನ ಪ್ರಯಾಣಿಸಿದ್ರಾ ಇಷ್ಟು ಜನ!
(Pic Credits: Pexels)
Share your comments