1. ಸುದ್ದಿಗಳು

ದಸರಾ, ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ 70 ತಾತ್ಕಾಲಿಕ ಉದ್ಯೋಗ ಸೃಷ್ಟಿ- ಫ್ಲಿಪ್‌ಕಾರ್ಟ್‌

ಕೊರೋನಾ ಸಂಕಷ್ಟದಿಂದಾಗಿ ಉದ್ಯೋಗ ಕಳೆದುಕೊಂಡವರಿಗೆ ಹಾಗೂ ಯಾವುದಾದರೊಂದು ಹೊಸದಾಗಿ ತಾತ್ಕಾಲಿಕ ಉದ್ಯೋಗ ಮಾಡಲು ಬಯಸುವವರಿಗೆ ಸಂತಸದ ಸುದ್ದಿ.

ಮುಂಬರುವ ದಸರಾ, ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ  ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ  ತನ್ನ ವ್ಯಾಪಾರದ ಮೂಲಕ ದೇಶದಲ್ಲಿ ಒಟ್ಟು 70 ಸಾವಿರ ತಾತ್ಕಾಲಿಕ ಉದ್ಯೋಗ ಸೃಷ್ಟಿಸಿ ನೆರವಾಗುವುದಾಗಿ ಹೇಳಿಕೊಂಡಿದೆ. ಇದರೊಂದಿಗೆ ಪರೋಕ್ಷವಾಗಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿಕೊಂಡಿದೆ.

ಡೆಲಿವರಿ ಎಕ್ಸಿಕ್ಯೂಟಿವ್, ದುರಸ್ತಿಗಾರರು, ಪಾರ್ಸಲ್ ಸೇರಿದಂತೆ ವಿವಿಧ ರೀತಿಯಲ್ಲಿ ತಾತ್ಕಾಲಿಕವಾಗಿ ಉದ್ಯೋಗ ಸೃಷ್ಟಿಯಾಗಲಿದೆ. ಬಿಗ್‌ ಬಿಲಿಯನ್ ಡೇ’ ಹೆಸರಿನ ವ್ಯಾ‍‍ಪಾರ ಉತ್ಸವ ಹಾಗೂ ಹಬ್ಬಗಳ ಸಂದರ್ಭದಲ್ಲಿನ ವ್ಯಾಪಾರದ ಮೂಲಕ ದೇಶದಲ್ಲಿ ಒಟ್ಟು 70 ಸಾವಿರಕ್ಕೂ ಹೆಚ್ಚಿನ ನೇರ, ತಾತ್ಕಾಲಿಕ ಉದ್ಯೋಗ ಸೃಷ್ಟಿಗೆ ತಾನು ನೆರವಾಗುವುದಾಗಿ ಫ್ಲಿಪ್‌ಕಾರ್ಟ್‌ ಹೇಳಿದೆ. ಇದರಿಂದ ಒಂದು ಲಕ್ಷಕ್ಕೂ ಹೆಚ್ಚಿನ ಪರೋಕ್ಷ ಉದ್ಯೋಗ ಕೂಡ ಸೃಷ್ಟಿಯಾಗಲಿದೆ ಎಂದು ಅದು ಹೇಳಿಕೊಂಡಿದೆ.

 ಮುಂಬರುವ ದಸರಾ, ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ವಾಣಿಜ್ಯ ವಹಿವಾಟು ನಡೆಯಲಿದೆ ಎಂಬ ನಿರೀಕ್ಷೆಯಲ್ಲಿ ಇ–ಕಾಮರ್ಸ್‌ ಕಂಪನಿಗಳು ಇವೆ.  ಒಟ್ಟು 1.4 ಲಕ್ಷ ತಾತ್ಕಾಲಿಕ ಉದ್ಯೋಗ ಸೃಷ್ಟಿಯಾಗಬಹುದು ಎಂದು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಹಿಂದಿನ ವರ್ಷದ ಹಬ್ಬಗಳ ಸಂದರ್ಭದಲ್ಲಿ ಹೇಳಿದ್ದವು. ‘ಬಿಗ್ ಬಿಲಿಯನ್ ಡೇ ಸಂದರ್ಭದಲ್ಲಿ ನಡೆಯುವ ಮಾರಾಟದ ಪ್ರಮಾಣವನ್ನು ಗಮನಿಸಿದರೆ, ವಸ್ತುಗಳ ದಾಸ್ತಾನು ಸಾಮರ್ಥ್ಯ, ಪ್ಯಾಕೇಜಿಂಗ್ ಸೌಲಭ್ಯ, ಮಾನವ ಸಂಪನ್ಮೂಲ ಲಭ್ಯತೆ ಮುಂತಾದವುಗಳನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಇದು ಹೆಚ್ಚುವರಿ ಉದ್ಯೋಗ ಸೃಷ್ಟಿಗೆ ನೆರವಾಗುತ್ತದೆ’ ಎಂದು ಫ್ಲಿಪ್‌ಕಾರ್ಟ್‌ ಹೇಳಿದೆ.

Published On: 15 September 2020, 04:55 PM English Summary: big billion days to create 70000 seasonal jobs this festives eason flipkart

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.