1. ಸುದ್ದಿಗಳು

ಬಾಗಲಕೋಟೆಯ ತೋಟಗಾರಿಕಾ ಮೇಳದಲ್ಲಿ 23 ರೈತರಿಗೆ ಅತ್ಯುತ್ತಮ ತೋಟಗಾರಿಕೆ ರೈತ ಪ್ರಶಸ್ತಿ

ಬಾಗಲಕೋಟೆ ವಿಶ್ವವಿದ್ಯಾಲಯದಲ್ಲಿ ನಡೆದ ತೋಟಗಾರಿಕಾ ಮೇಳದಲ್ಲಿ  ಪ್ರತಿ ಜಿಲ್ಲೆಗೊಬ್ಬರಂತೆ ಒಟ್ಟು 23 ರೈತರಿಗೆ ಅತ್ಯುತ್ತಮ ತೋಟಗಾರಿಕೆ ರೈತ ಪ್ರಶಸ್ತಿ  ನೀಡಿ ಗೌರವಿಸಲಾಯಿತು.

ಬಾಗಲಕೋಟೆ: ಹಣ್ಣು, ತರಕಾರಿ ಹಾಗೂ ಹೂವಿನ ರಫ್ತು ಪ್ರಮಾಣ ಶೇ 5.5ರಷ್ಟು ಇದ್ದು, ಅದನ್ನು ಶೇ 20ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಡಾ.ಕೆ.ಸಿ.ನಾರಾಯಣಗೌಡ ಹೇಳಿದರು.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡ ತೋಟಗಾರಿಕೆ ಮೇಳದ ಎರಡನೇ ದಿನ ಅತ್ಯುತ್ತಮ ತೋಟಗಾರಿಕೆ ರೈತ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತೋಟಗಾರಿಕೆ ಬೆಳೆಗಳಿಗೆ ಹೆಚ್ಚು ಉತ್ತೇಜನ ನೀಡಲು ವಿಶ್ವವಿದ್ಯಾಲಯದ ಸಂಶೋಧನೆಗಳನ್ನು ರೈತರಿಗೆ ತಲುಪಿಸಿ ಅವರಿಗೆ ಶಕ್ತಿ ತುಂಬುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಮಾತನಾಡಿ, ''ಕಡಿಮೆ ಖರ್ಚಿನಲ್ಲಿ ಇಳುವರಿ ಹೆಚ್ಚು ಬರುವ ಸಂಶೋಧನೆಗಳು ಆಗಬೇಕು''. ಕೇವಲ ಉತ್ಪಾದನೆಯಲ್ಲಿ ಗಮನ ಹರಿಸದೇ ಮಾರುಕಟ್ಟೆಯ ಸ್ಥಿತಿಗತಿಗಳ ಬಗ್ಗೆಯೂ ರೈತರಿಗೆ ಸಲಹೆ ನೀಡಬೇಕು. ಬೆಳೆದ ರೈತನಿಗೆ ಲಾಭ ದೊರೆಯುವಂತೆ ಮಾಡುವ ಕಾರ್ಯ ವಿಶ್ವವಿದ್ಯಾಲಯದ್ದಾಗಿದೆ’ ಎಂದರು.

ದೆಹಲಿಯ ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ವೆಂಕಟ ಸುಬ್ರಹ್ಮಣ್ಯ, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಬಿ.ಚಟ್ಟಿ ಮಾತನಾಡಿದರು. ಕುಲಪತಿ ಡಾ.ಕೆ.ಎಂ.ಇಂದಿರೇಶ, ವಿಸ್ತರಣಾ ನಿರ್ದೇಶಕ ಡಾ.ವೈ.ಕೆ.ಕೋಟಿಕಲಕಲ್ ರವರು ಸಹ ಆಗಮಿಸಿದ್ದರು.

ಪ್ರಶಸ್ತಿ ಪುರಸ್ಕೃತ ರೈತರು

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಪ್ರತಿ ಜಿಲ್ಲೆಗೆ ಒಬ್ಬರಂತೆ  ಒಟ್ಟು 23 ಜನರಿಗೆ ಅತ್ಯುತ್ತಮ ತೋಟಗಾರಿಕೆ ರೈತ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪಡೆದವರು:

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಪ್ರತಿ ಜಿಲ್ಲೆಗೆ ಒಬ್ಬರಂತೆ ಒಟ್ಟು 23 ಜನರಿಗೆ ಅತ್ಯುತ್ತಮ ತೋಟಗಾರಿಕೆ ರೈತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪಡೆದವರು– ಬಾಗಲಕೋಟೆ: ಶರಣವ್ವ ಹಾದಿಮನಿ, ಬೆಳಗಾವಿ: ಲಕ್ಷ್ಮೀಕಾಂತ ಸೊಲ್ಲಾಪುರ, ಬೆಂಗಳೂರು ಗ್ರಾಮಾಂತರ: ಎನ್. ನಿತಿನ್, ಬೆಂಗಳೂರು ನಗರ: ಎಚ್.ಕೆ. ಗೋಪಾಲಕೃಷ್ಣ, ಬೀದರ್: ವಿಜಯ ಸೂರ್ಯವಂಶಿ, ಚಾಮರಾಜನಗರ: ಎಸ್.ಎಂ. ನಾಗಾರ್ಜುನ ಕುಮಾರ, ಚಿಕ್ಕಬಳ್ಳಾಪುರ: ಎಸ್.ಎನ್.ಶಿವಪ್ರಸಾದ, ಧಾರವಾಡ: ಬಸವರಾಜ ವಿಭೂತಿ, ಗದಗ: ಹನುಮಪ್ಪ ಸಾಲಿ, ಹಾವೇರಿ: ಗೋಪಾಲಗೌಡ ಬಸನಗೌಡರ, ಹಾಸನ: ಕೆ.ಪಿ.ಗೋಪಕುಮಾರ, ಕಲಬುರ್ಗಿ: ನಿಜಲಿಂಗಪ್ಪ ಕಲ್ಯಾಣ, ಕೋಲಾರ: ಎನ್.ಧರ್ಮಲಿಂಗಂ ನಾರಾಯಣಸ್ವಾಮಿ, ಮಂಡ್ಯ: ಪಿ.ಎಸ್.ವಿಜಯಕುಮಾರ, ಮೈಸೂರು: ಶ್ರೀಮತಿ ದಾಸಿ, ರಾಮನಗರ: ಹೊನ್ನೆಗೌಡ ಮುನಿಯಪ್ಪ, ಶಿರಸಿ: ಮಹಾಬಲೇಶ್ವರ ಹೆಗಡೆ, ತುಮಕೂರು: ರಾಜಶೇಖರಯ್ಯ ಬಸವೇಗೌಡ, ವಿಜಯಪುರ: ಪ್ರವೀಣ ಬಾಳಿಗೇರಿ, ಯಾದಗಿರಿ: ಅನಂತಪ್ಪ ರಾಥೋಡ, ಬಳ್ಳಾರಿ: ಸತ್ಯನಾರಾಯಣ ಶೆಟ್ಟಿ, ಕೊಪ್ಪಳ: ಮಾರುತಿ ನಾಯಕ, ರಾಯಚೂರು: ಶಿವಕುಮಾರ ಪಾಟೀಲ. 

Published On: 04 January 2021, 11:58 PM English Summary: best horticulture farmer award

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.