Bandur sheep sold for 1.1 lakh rupees: ನಾವೆಲ್ಲ ಸಾಮನ್ಯವಾಗಿ ಆಡಯ, ಕುರಿ, ಟಗರುಗಳ ಬೆಲೆಯನ್ನು ಸಾವಿರದ ಲೆಕ್ಕದಲ್ಲಿ ಕೇಳಿದ್ದೇವೆ. ಆದರೆ, ಇಲ್ಲೊಂದು ಟಗರು ದಾಖಲೆಯ ಬೆಲೆಗೆ ಮಾರಾಟವಾಗುವ ಮೂಲಕ ಸದ್ಯ ಸುದ್ದಿಯಲ್ಲಿದೆ. ಇದನ್ನು ಓದಿರಿ
ಬಂಡೂರ ತಳಿಯ ಟಗರು (Bandur sheep) ಒಂದಕ್ಕೆ ಬರೋಬ್ಬರಿ 1.1 ಲಕ್ಷ ರೂಪಾಯಿಗೆ ಮಾರಾಟವಾಗಿ ದಾಖಲೆ ಮಾಡಿದೆ.
ಮಂಡ್ಯ ಜಿಲ್ಲೆಯ ಹಲಗೂರು ಬಳಿಯ ಹುಚ್ಚೇಗೌಡನದೊಡ್ಡಿ ಗ್ರಾಮದ ಮರೀಗೌಡ ಎನ್ನುವವರು ಬರೋಬ್ಬರಿ 1.1 ಲಕ್ಷ ರೂಪಾಯಿಗೆ ಬಂಡೂರು ತಳಿಯ ಟಗರೊಂದನ್ನು ಖರೀದಿ ಮಾಡಿದ್ದಾರೆ.
ಬಂಡೂರು ತಳಿಯ ಟಗರು
ಇಷ್ಟೊಂದು ಹೆಚ್ಚಿನ ಬೆಲೆಗೆ ಮಾರಾಟವಾದ ಟಗರು ಬಂಡೂರು ತಳಿಗೆ ಸೇರಿದ್ದು, ಇದು ರುಚಿಯಾದ ಮಾಂಸಕ್ಕೆ ಹೆಸರುವಾಸಿ.
ಮರೀಗೌಡ ಅವರು ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಕುರಿ ಸಾಕಣೆ ಅವರ ಆದಾಯದ ಮೂಲವಾಗಿದೆ. ಅವರ ಮನೆಯಲ್ಲಿ ಐವತ್ತು ಸಾಮನ್ಯ ತಳಿಯ ಕುರಿಗಳಿವೆ.
ರಾಜ್ಯದಲ್ಲಿ ರುಚಿಯಾದ ಮಾಂಸಕ್ಕೆ ಹೆಸರುವಾಸಿಯಾದ ಬಂಡೂರು ತಳಿಯ ಕುರಿಯನ್ನು ಸಂವರ್ಧನೆ ಮಾಡುವುದಕ್ಕಾಗಿ ಹದಿನೆಂಟು ತಿಂಗಳ ಈ ಟಗರನ್ನು 1.1 ಲಕ್ಷಕ್ಕೆ ಖರೀದಿ ಮಾಡಿರುವುದಾಗಿ ಹೇಳುತ್ತಾರೆ ಅವರು.
ಬಂಡೂರು ತಳಿಯ ವಿಶೇಷತೆ! (Specialty of Banduru breed)
- ಬಂಡೂರು ಕುರಿ ಮಾಂಸ ಜನಪ್ರಿಯವಾಗಿದೆ.
- ಬಂಡೂರು ತಳಿಯ ಕುರಿ ಮಾಂಸ ಬಲು ರುಚಿ.
- ಮಾಂಸದ ಎಳೆಗಳ ಮಧ್ಯದ ಕೊಬ್ಬಿನ ಅಂಶ ತಳಿಯ ವಿಶೇಷ.
- ಎಲ್ಲಾ ವಾತಾವರಣಕ್ಕೂ ಹೊಂದಿಕೊಳ್ಳುವ ಗುಣ ಬಂಡೂರು ಕುರಿಗಳಿಗಿದೆ.
Share your comments