1. ಸುದ್ದಿಗಳು

"ಮೇಕೆದಾಟು ಯೋಜನೆ ಕೈಗೆತ್ತಿಕೊಂಡು ಹೆಚ್ಚುವರಿ ನೀರನ್ನು ರಾಜ್ಯದ ಹಿತಾಸಕ್ತಿಗೆ ಬಳಸಿ"

Kalmesh T
Kalmesh T
Take up the Mekedatu project and use the surplus water in the interest of the state

Mekedatu project: ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲಿ, ಕಾವೇರಿ ನೀರನ್ನು  ಸಮುದ್ರಕ್ಕೆ ಹರಿಯುವ ಹೆಚ್ಚು ನೀರನ್ನು ರಾಜ್ಯದ ಹಿತಾಶಕ್ತಿಗೆ ಬಳಸಿಕೊಳ್ಳಲಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಒತ್ತಾಯಿಸಿದ್ದಾರೆ.

ಕಾವೇರಿ ಅಂತಿಮ ತೀರ್ಪಿನಲ್ಲಿ ಸೂಚಿಸಿರುವ ತಮಿಳುನಾಡಿನ ಹಂಚಿಕೆ ನೀರನ್ನು ಹರಿಸಿ ಹೆಚ್ಚುವರಿ ನೀರನ್ನು ರಾಜ್ಯಕ್ಕೆ ಬಳಸಿಕೊಳ್ಳಲು ಮೇಕೆದಾಟು ಅಣೆಕಟ್ಟೆ ನಿರ್ಮಿಸಲು ರಾಜ್ಯ ಸರ್ಕಾರ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು.

ತಮಿಳುನಾಡಿನ ಒತ್ತಡದ ಮುಲಾಜಿಗೆ ಮಣಿಯಬಾರದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಒತ್ತಾಯಿಸಿದ್ದಾರೆ.

ಕಬಿನಿ ಜಲಾಶಯದಲ್ಲಿ ಜಿಲ್ಲಾ ರೈತ ಮುಖಂಡರ ಸಭೆ ನಡೆಸಿದ ನಂತರ ಮಾತನಾಡಿ, ಕಬಿನಿ ಅಚ್ಚುಕಟ್ಟು ವ್ಯಾಪ್ತಿಗೆ ಬರುವ ಎರಡನೇ ಹಂತದ ಯೋಜನೆ ಹಾಗೂ ಏತ ನೀರಾವರಿ ಯೋಜನೆಗಳನ್ನು ಶರವೇಗದಲ್ಲಿ ಕಾರ್ಯಗತಗೊಳಿಸಬೇಕು ಎಂದು ಒತ್ತಾಯಿಸಿದರು.

ಗೋ ಹತ್ಯೆ ನಿಷೇಧ ಕಾಯ್ದೆ ಗೋವುಗಳ ರಾಜಕಾರಣವಾಗಬಾರದು.  ಪಶುಸಂಗೋಪನ ಸಚಿವರು ಎಮ್ಮೆಗೂ ಹಸುವಿಗೆ ಹೋಲಿಕೆ ಮಾಡಿರುವುದು ಸರಿಯಲ್ಲ.

ಹಸುಗಳು ರೈತರ ಬದುಕಿಗೆ ಆಸರೆಯಾಗಿ ಕಾಯಕ ಮಾಡುತ್ತವೆ ನಾವು ಗೌರವ ಭಾವನೆಯಿಂದ ಪೂಜಿಸುತ್ತೇವೆ ಇಂಥ ಪ್ರಾಣಿಗಳನ್ನು ಹತ್ಯೆ ಮಾಡಿದರೆ ಏನು ತಪು ಎಂದು ಹೇಳುವುದು ಒಪ್ಪುವಂತದ್ದಲ್ಲ.

ಕಾನೂನಿನಲ್ಲಿರುವ ಅಡೆ ತಡೆಗಳನ್ನು ನಿವಾರಿಸಿ ತಪ್ಪೇನಿಲ್ಲ.ಆದರೆ ಮೇಲಿನಂಥ ಇಂಥ ಹೇಳಿಕೆ ಸಚಿವರಿಗೆ ಶೂಬೆ ತರುವುದಿಲ್ಲ

ಕಾಡು ಪ್ರಾಣಿಗಳ ದಾಳಿ ಹಾವಳಿಯಿಂದ ಕಾಡಂಚಿನ ಭಾಗದ ರೈತರ ಬದುಕು ಭಯದಿಂದ ಕಾಡುತ್ತಿದೆ ಕಾಡಿನ ಒಳಗೆ ಇರುವ ಎಲ್ಲಾ ರಿಸಾರ್ಟಗಳು ಮೋಜಿನತಾಣಗಳನ್ನು ಬಂದ್ ಮಾಡಲು ಗಣಿಗಾರಿಕೆಯನ್ನು ನಿಲ್ಲಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ.

ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ದೊರಕಲಿ

ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳ ಹೋರಾಟವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಹೋರಾಟಗಾರರಿಗೆ ನ್ಯಾಯ ಕೊಡಿಸಲಿ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇನೆ.

ರೈತ ಪ್ರತಿನಿಧಿಗಳ ಸಭೆಯಲ್ಲಿ ಅತ್ತಹಳ್ಳಿ ದೇವರಾಜ್, ಪಿ ಸೋಮಶೇಖರ್, ಕೆಂಡಗಣ್ಣ ಸ್ವಾಮಿ, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಬಿದರಹಳ್ಳಿ ಮಹೇಶ್, ಮಹಿಳಾ ಜಿಲ್ಲಾಧ್ಯಕ್ಷೆ ಕಮಲಮ್ಮ, ಲಕ್ಷ್ಮಿಪುರ ವೆಂಕಟೇಶ್, ಕುರುಬೂರು ಸಿದ್ದೇಶ್, ಹಂಪಾಪುರ ರಾಜೇಶ್ ,ಗೌರಿಶಂಕರ್ ಪ್ರದೀಪ್, ಕಿರಗಸೂರು ಪ್ರಸಾದ್ ನಾಯಕ, ಹೆಗ್ಗೂರು ರಂಗರಾಜ್, ಕಾಟೂರು ಮಹಾದೇವಸ್ವಾಮಿ, ಕೋಟೆ ಸುರೇಶ್ ಶೆಟ್ಟಿ, ಸುನಿಲ್ ಕುಮಾರ್, ಅಂಬಳೆ ಮಂಜುನಾಥ್, ಎಗ್ಗೊಟಾರ ಶಿವ ಸ್ವಾಮಿ, ವಾಜಮಂಗಲ ಮಹಾದೇವು, ಚುಂಚರಾಯನ ಹುಂಡಿ ನಂಜುಂಡಸ್ವಾಮಿ, ಸಿದ್ದರಾಮ, ಯಾಕ ನೂರು ರಾಜೇಶ್, ಕರುವಟ್ಟಿ ಉಮೇಶ್ ಇದ್ದರು.

Published On: 06 June 2023, 06:09 PM English Summary: Take up the Mekedatu project and use the surplus water in the interest of the state

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.