ಈ ನಡುವೆ ಕೇರಳದ ಅಲಪ್ಪುಳದಲ್ಲಿ ಹಕ್ಕಿ ಜ್ವರ ದೃಢಪಟ್ಟಿರುವುದು ತೀವ್ರ ಕಳವಳ ಸೃಷ್ಟಿಸಿದೆ. ಈ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಹಕ್ಕಿ ಜ್ವರ ಪತ್ತೆಯಾದ ತಕಾಝಿ ಪಂಚಾಯಿತಿಯ 1 ಕಿ.ಮೀ. ವ್ಯಾಪ್ತಿಯಲ್ಲಿನ ಸುಮಾರು 12,000 ಕೋಳಿ ಹಾಗೂ ಬಾತುಕೋಳಿಗಳನ್ನು ಕೊಂದು ಸುರಕ್ಷಿತವಾಗಿ ಸುಟ್ಟುಹಾಕಿದೆ ಎಂದು ಪಶುಸಂಗೋಪನೆ ಸಚಿವೆ ಜೆ. ಸಿಂಚು ರಾಣಿ ತಿಳಿಸಿದ್ದಾರೆ.
ಆಲಪ್ಪುಳದಲ್ಲಿ ಈವರೆಗೆ ಹಕ್ಕಿಜ್ವರದ 26 ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ತಕಾಝಿ ಗ್ರಾಮ ಪಂಚಾಯಿತಿ ಪ್ರದೇಶವನ್ನು ಕಂಟೋನ್ಮೆಂಟ್ ವಲಯವನ್ನಾಗಿ ಘೋಷಣೆ ಮಾಡಲಾಗಿದೆ. ಇದರ ಜತೆಗೆ ವಾಹನ ಸಂಚಾರ ಮತ್ತು ಜನರ ಓಡಾಟವನ್ನು ನಿಷೇಧಿಸಲಾಗಿದೆ.
ಅಲಪ್ಪುಳ District Collector ತುರ್ತು ಸಭೆ ನಡೆಸಿ, ಹಕ್ಕಿ ಜ್ವರ ವ್ಯಾಪಕವಾಗಿ ಹರಡದಂತೆ ಮುನ್ನೆಚ್ಚೆರಿಕಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 13 ಪಂಚಾಯಿತಿ ವ್ಯಾಪ್ತಿಯಲ್ಲಿ ಮೊಟ್ಟೆ, ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಕೋಳಿಗಳನ್ನು ಸಾಮೂಹಿಕವಾಗಿ ಕೊಲ್ಲಲು ಸೂಚನೆ ನೀಡಲಾಗಿದೆ. ಹಕ್ಕಿ ಜ್ವರ ತಡೆಗಟ್ಟಲು ನಾಗರಿಕರು ಸಹಕಾರ ನೀಡಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.
ಇದನ್ನು ಓದಿರಿ:
ಕುರಿ, ಮೇಕೆ ಸಾಕಾಣಿಕೆದಾರರಿಗೆ ಭೀತಿ ಹುಟ್ಟಿಸಿದ ಹಿರೇಬೇನೆ..ಈ ರೋಗದ ತಡೆಗಟ್ಟುವಿಕೆ ಹೇಗೆ..?
ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ
ಭೋಪಾಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‌ಗೆ ಕಳುಹಿಸಲಾದ ಕೆಲವು ಮಾದರಿಗಳಲ್ಲಿ ಹಕ್ಕಿ ಜ್ವರ ಇರುವುದನ್ನು ರಾಜ್ಯ ಪಶುಸಂಗೋಪನಾ ಇಲಾಖೆ ಗುರುವಾರ ದೃಢಪಡಿಸಿತ್ತು. ನಂತರ ಕೇರಳದ ಅಲಪ್ಪುಳ (Alappuzha) ಜಿಲ್ಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಕಳೆದ ವಾರ ಜಿಲ್ಲೆಯಲ್ಲಿ ಅನೇಕ ಬಾತುಕೋಳಿಗಳು ಮತ್ತು ಸ್ಥಳೀಯ ಹಕ್ಕಿಗಳು ಸಾವಿಗೀಡಾಗಿದ್ದರಿಂದ ಅಧಿಕಾರಿಗಳು ಭೋಪಾಲ್ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಿದ್ದರು.
ರೋಗ ಹರಡದಂತೆ ರೋಗ ಪೀಡಿತ ಪ್ರದೇಶದಲ್ಲಿರುವ ಬಾತುಕೋಳಿಗಳನ್ನು ಕೊಲ್ಲಲು ಪಶುವೈದ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ. ಸರ್ಕಾರದ ನಿಯಮಾವಳಿ ಪ್ರಕಾರ ರೈತರಿಗೆ ಪರಿಹಾರ ನೀಡಲಾಗುವುದು. ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ಪಶುಸಂಗೋಪನಾ ಸಚಿವೆ ಜೆ. ಸಿಂಚು ರಾಣಿ ತಿರುವನಂತಪುರಂನಲ್ಲಿ ತಿಳಿಸಿದ್ದಾರೆ.
ಅನೇಕ ಹಿನ್ನೀರು ಮತ್ತು ಜಲಮೂಲಗಳಿಂದ ಕೂಡಿದ ಜಿಲ್ಲೆಯಲ್ಲಿ ರೈತರು ಬಾತುಕೋಳಿಗಳನ್ನು ಸಾಕುತ್ತಾರೆ ಇಲ್ಲಿ ಹಕ್ಕಿ ಜ್ವರ ಕಾಣಿಸಿಕೊಳ್ಳುವುದೂ ಜಾಸ್ತಿ. ಇತರ ದೇಶಗಳಿಂದ ವಲಸೆ ಬರುವ ಪಕ್ಷಿಗಳು ವೈರಸ್‌ನ ಮುಖ್ಯ ಮೂಲಗಳು ಎಂದು ವರದಿಯಾಗಿದೆ.
ಪೈಲ್ವಾನ್ ಕಿಚ್ಚ ಸುದೀಪ್ ಕೊಟ್ಟ ಗುನ್ನಾಕೆ ಮಕಾಡೆ ಮಲಗಿದ ಅಜಯ್ ದೇವಗನ್!
ಗುಡ್ ನ್ಯೂಸ್: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!
ಲಪ್ಪುಳ ಮತ್ತು ನೆರೆಯ ಜಿಲ್ಲೆಯಾದ ಕೋಟ್ಟಯಂನಲ್ಲಿ ಬಾತುಕೋಳಿ ಸಾಕಣೆಯು ಒಂದು ಪ್ರಮುಖ ವ್ಯವಹಾರವಾಗಿದೆ.ಇಲ್ಲಿ ಬಾತುಕೋಳಿಗಳ ಮೊಟ್ಟೆ ಮತ್ತು ಮಾಂಸಕ್ಕೆ ಹೆಚ್ಚಿನ ಬೇಡಿಕೆಯಿದೆ. ಸಾಮಾನ್ಯವಾಗಿ ಕೋಳಿಗಿಂತ ಹೆಚ್ಚಿನ ಬೆಲೆಯಿದೆ. ಏವಿಯನ್ ಫ್ಲೂ ಎಂದೂ ಕರೆಯಲ್ಪಡುವ ಹಕ್ಕಿ ಜ್ವರ ಪಕ್ಷಿಗಳಲ್ಲಿ ಗಾಳಿಯಿಂದ ಹರಡುವ ವೈರಸ್‌ನಿಂದ ಉಂಟಾಗುವ ವಿವಿಧ ರೀತಿಯ ಸೋಂಕು ಜ್ವರವಾಗಿದೆ.
ಇದು ಅಪರೂಪವಾಗಿ ಮನುಷ್ಯರಿಗೆ ಹರಡಬಹುದು ಮತ್ತು ಇದು ಮನುಷ್ಯರಿಗೆ ಬಂದಲ್ಲಿ ಅದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದು ಎಂದು ತಜ್ಞರು ಹೇಳುತ್ತಾರೆ. ವೈರಸ್‌ಗಳಲ್ಲಿ ಹಲವು ವಿಧಗಳಿವೆ ಮತ್ತು ಅವುಗಳಲ್ಲಿ H7N9 ಅಪಾಯಕಾರಿ ಎಂದು ಪರಿಗಣಿಸಲಾಗಿದೆ.
ರೈತರಿಗೆ ಸಿಹಿಸುದ್ದಿ : ಹಸು-ಎಮ್ಮೆ ಖರೀದಿಗೆ ರೂ.20 ಸಾವಿರ ಸಬ್ಸಿಡಿ! ರಾಜ್ಯ ಸರ್ಕಾರದ ಭರ್ಜರಿ ಕೊಡುಗೆ!
ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಏವಿಯನ್ ಇನ್ಫ್ಲುಯೆನ್ಸ್ ವೈರಸ್‌ನಲ್ಲಿ ಅನೇಕ ವಿಧಗಳಿವೆ ಮತ್ತು ಅವುಗಳಲ್ಲಿ ಕೆಲವು ಮಾತ್ರ ಮಾನವರಿಗೆ ಅಪಾಯಕಾರಿ. ಕಳೆದ ವರ್ಷವೂ ಜಿಲ್ಲೆಯಲ್ಲಿ ವೈರಲ್ ಏಕಾಏಕಿ ವರದಿಯಾಗಿದ್ದು ಅದನ್ನು ಸ್ಥಳೀಯವಾಗಿಯೇ ನಿಭಾಯಿಸಲಾಗಿತ್ತು . 2016 ರಲ್ಲಿ ಹಕ್ಕಿ ಜ್ವರ ನಿಯಂತ್ರಿಸಲು ಅಲಪ್ಪುಳ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಕನಿಷ್ಠ 5 ಲಕ್ಷ ಕೋಳಿ ಮತ್ತು ಬಾತುಕೋಳಿಗಳನ್ನು ಕೊಲ್ಲಲಾಯಿತು.
ಇದು ಸಾಂಕ್ರಾಮಿಕ ರೋಗವಾಗಿದ್ದು, ರೋಗ ನಿಯಂತ್ರಣಕ್ಕೆ ಇತರ ಪಕ್ಷಿಗಳನ್ನೂ ಕೊಲ್ಲಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಎಚ್ಚರಿಕೆ! “ವಾಹನ ಚಾಲಕರಿಗೆ ಎಚ್ಚರಿಕೆ” ಡ್ರೈವಿಂಗ್ ವೇಳೆ ಗುಟ್ಕಾ ಜಗಿದರೆ ಬೀಳತ್ತೆ ದಂಡ!
Share your comments