1. ಸುದ್ದಿಗಳು

60 ಸಾವಿರ ಗಡಿ ದಾಟಿದ ಅಡಿಕೆ ಬೆಲೆ

ಅಡಕೆ ಬೆಳೆಗಾರರಿಗೆ ಸಂತಸದ ಸುದ್ದಿ. ಅಡಕೆ ಬೆಲೆಯಲ್ಲಿ ಗಣನೀಯ ಏರಿಕೆಯಾಗುತ್ತಿದ್ದರಿಂದ ಅಡಕೆ ಬೆಳೆಗಾರರಲ್ಲಿ ಮಂದಹಾಸ ಮೂಡಿದೆ. ಕಳೆದ 10 ದಿನಗಳಿಂದ ಅಡಕೆ ಬೆಲೆ ಏರುತ್ತಲೇ ಇದೆ.ಇದರಿಂದಾಗಿ ಬೆಳೆಗಾರರು ಖುಷ್ ಆಗಿದ್ದಾರೆ. ಅಡಿಕೆ ಧಾರಣೆ ಕೇವಲ 10 ದಿನಗಳಲ್ಲಿ 10 ಸಾವಿರ ರೂಪಾಯಿ ಹೆಚ್ಚಳವಾಗಿದೆ. ಸೋಮವಾರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕ್ವಿಂಟಾಲಿಗೆ ಗರಿಷ್ಠ 60 ಸಾವಿರ ರಪಾಯಿ ದಾಖಲೆ ಬರೆದಿದೆ. 2014 ರಲ್ಲಿ ಕ್ವಿಂಟಾಲ್ ಗೆ ಅಡಿಕೆ ಬೆಲೆ 80 ಸಾವಿರ ರೂಪಾಯಿ ಗಡಿ ದಾಟಿತ್ತು. ಈಗ ಹಿಂದಿನ ದಾಖಲೆ ಮುರಿಯುವ ಹಂತಕ್ಕೆ ತಲುಪುವ ಸಾಧ್ಯತೆಯಿದೆ.

ರಾಶಿ ಪ್ರಕಾರದ ಅಡಿಕೆ ಧಾರಣೆ 2010 ರವರೆಗೆ ಕ್ವಿಂಟಾಲಿಗೆ 10 ಸಾವಿರದಿಂದ 15 ಸಾವಿರದ ಆಸುಪಾಸು ಇತ್ತು. 2020 ರಲ್ಲಿ ಗರಿಷಅಠ ಧಾರಣೆ ಸಾವಿರ ರೂಪಾಯಿ ಇತ್ತು.ಈಗ ಮತ್ತೇ  ಅಡಿಕೆ ಬೆಲೆ ಗಗನಮುಖಿಯಾಗಿ ಏರಿಕೆಯಾಗುತ್ತಿದೆ. ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಅಡಕೆ ಆಮದು ಸುಂಕ ಹೆಚ್ಚಿಸಿದ್ದರಿಂದ ಬೆಲೆ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ.

ಶ್ರೀಲಂಕಾ, ಮ್ಯಾನ್ಮಾರ್, ನೇಪಾಳ, ಚೀನಾ, ಥೈಲಾಂಡ್, ಮಾಲ್ಡೀವ್ಸ್, ಬಾಂಗ್ಲಾದೇಶ, ಇಂಡೋನೇಷಿಯಾಗಳಲ್ಲಿ ಅಡಕೆಯ ಗುಣಮಟ್ಟ ಅಷ್ಟೊಂದು ಚೆನ್ನಾಗಿಲ್ಲ.  ಈ ದೇಶಗಳಿಗೆ ಹಿಂದೆ ಅಡಕೆ ಆಮದು ಮಾಡಲಾಗುತ್ತಿತ್ತು. ಈಗ ಈ ದೇಶಗಳಿಗೆ ಆಮದು ಸುಂಕ ಹೆಚ್ಚಿಸಿದ ಪರಿಣಾಮ ದೇಸಿ ಅಡಕೆಗೆ ಹೋಲಿಸಿದೆ ಆಮದು ಅಡಕೆಯೇ ದುಬಾರಿ ಎನಿಸಿತೊಡಗಿತು. ಹೀಗಾಗಿ ಸ್ಥಳೀಯ ಅಡಕೆಗೆ ಉದ್ಯಮಿಗಳು ಮುಂದಾಗಿದ್ದರಿಂದ ಬೆಲೆ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ.

ಭಾನುವಾರ ತೀರ್ಥಹಳ್ಳಿಯ ಸಹ್ಯಾದ್ರಿ ಅಡಕೆ ಮಾರಾಟ ಸಹಕಾರಿ ಸಂಸ್ಥೆಯಲ್ಲಿ ನಡೆದ ಅಡಕೆ ವಹಿವಾಟಿನಲ್ಲಿ ರಾಶಿ ಹಿಡಿ ಮಾದರಿಯ  ಅಡಕೆ ಗರಿಷ್ಠ 60 ಸಾವಿರ ರೂಪಾಯಿಗೆ ಮಾರಾಟವಾಗಿದ್ದು, ಅಡಕೆ ವಲಯದಲ್ಲಿ ಆಶ್ಚರ್ಯ ಮೂಡಿಸಿದೆ. ಶಿವಮೊಗ್ಗ, ಮ್ಯಾಮ್ ಕೋಸ್, ಚನ್ನಗಿರಿಯ ತುಮ್ ಕೋಸ್ ಸೇರಿ ಬಹುತೇಕ ಭಾಗಗಳಲ್ಲಿ ಟೆಂಡರ್ ದಾರರು ಅಧಿಕ ಬೆಲೆಗೆ ಖರೀದಿಸಿದರು.

ದೇಶದಲ್ಲಿ ಅಡಿಕೆ ಫಸಲು ಕಡಿಮೆಯಾಗಿರುವುದು, ಆಮದು ಅಡಕೆಗೆ ಗರಿಷ್ಠ ಬೆಲೆ ನಿಗದಿ ಮಾಡಿರುವುದು ಮತ್ತು ವಿದೇಶಗಳಿಂದ ಕಳ್ಳ ಸಾಗಾಣಿಕೆ ಮೂಲಕ ಬರುತ್ತಿದ್ದ  ಅಡಿಕೆಗೆ ಕಡಿವಾಣ ಬಿದ್ದಿರುವುದರಿಂದ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಈಗಾಗಲೇ ಕಡಿಮೆ ಬೆಲೆಗೆ ಮಾರಾಟ ಮಾಡಿದ ರೈತರು ಈಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ಉತ್ತಮ ಬೆಲೆ ಬರಬಹುದೆಂದು ಕಾಯ್ದು ಅಡಕೆ ಸಂಗ್ರಹಿಸಿದ್ದ ರೈತರಿಗೆ ಸಂತಸವಾಗುತ್ತಿದೆ.

Published On: 08 September 2021, 11:21 AM English Summary: areca nut price reached 60 thousand

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.