1. ಸುದ್ದಿಗಳು

5000 ಶಿಕ್ಷಕರ ನೇಮಕಕ್ಕೆ ಈ ವರ್ಷವೇ ಪ್ರಕ್ರಿಯೆ-ಮುಖ್ಯಮಂತ್ರಿ ಘೋಷಣೆ

ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲೆಗಳಿಗೆ ಸುಮಾರು ಐದು ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಘೋಷಿಸಿದ್ದಾರೆ. ಭಾನುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ವೇಳೆ ಉತ್ತಮ ಶಿಕ್ಷಕ, ಉಪನ್ಯಾಸಕರಿಗೆ ಪ್ರಶಸ್ತಿ ಪ್ರದಾನ ಮಾಡಿದ ನಂತರ ಮಾತನಾಡಿ, ಶಾಲೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಶಿಕ್ಷಕರ ನೇಮಕಾತಿ ಬಹಳ ದಿನಗಳಿಂದ ಬಾಕಿಯಿರುವುದನ್ನು  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರು ತಮ್ಮ ಗಮನಕ್ಕೆ ತಂದಿದ್ದಾರೆ.

ಸದ್ಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದು, ಈ ಸಮಸ್ಯೆ ನೀಗಿಸಲು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು. 'ಶಿಕ್ಷಣ ಸಚಿವರ ಮನವಿ ಮೇರೆಗೆ ಸರ್ಕಾರವು ಸುಮಾರು ಐದು ಸಾವಿರ ಶಿಕ್ಷಕರನ್ನು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ನೇಮಿಸಿಕೊಳ್ಳಲು ತೀರ್ಮಾನಿಸಿದೆ' ಎಂದು ಹೇಳಿದ್ದಾರೆ.

'ನಾನು ಶೈಕ್ಷಣಿಕ ನೀತಿಗಳನ್ನು ಅಧ್ಯಯನ ಮಾಡಿದ್ದೇನೆ. ಸ್ವಾತಂತ್ರ್ಯಾನಂತರ ವಿದ್ಯಾರ್ಥಿಗಳಿಗೆ ನಾವು ನೀಡುತ್ತಿರುವ ಅತ್ಯುತ್ತಮ ಕೊಡುಗೆಯಿದು. ಇಂಥ ನೀತಿಗಳನ್ನು ಅನುಷ್ಠಾನಗೊಳಿಸುವಾಗ, ಧನಾತ್ಮಕ ಪ್ರತಿಕ್ರಿಯೆಗಳು ಹಾಗೂ ಆಕ್ಷೇಪಣೆಗಳು ಸಹಜ. ನೀತಿಯನ್ನು ಅಧ್ಯಯನ ಮಾಡಲು ಹಾಗೂ ಅವರ ಸಲಹೆಯನ್ನು ಸಲ್ಲಿಸಲು ನಾನು ಶಿಕ್ಷಕರನ್ನು ವಿನಂತಿಸುತ್ತೇನೆ. ಈ ನೀತಿಯನ್ನು ಪ್ರಾಥಮಿಕ ಹಾಗೂ ಮಧ್ಯಮ ಮಟ್ಟದಲ್ಲಿ ಕಾರ್ಯಗತಗೊಳಿಸಲು ಸಿದ್ಧರಿದ್ದೇವೆ' ಎಂದು ಬೊಮ್ಮಾಯಿ ಹೇಳಿದರು.

ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ನಾಗರಾಜ್ ಸಿಎಂ (ಸರ್ಕಾರಿ ಶಾಲೆ, ದೊಡ್ಡಬನಹಳ್ಳಿ, ಬೆಂಗಳೂರು ದಕ್ಷಿಣ) ಹೇಮಾ ಅಂಗಡಿ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಳಗಾವಿ) ಹಾಗೂ ಪರಮೇಶ್ವರಯ್ಯ ಎಂ (ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಲಾಲವಿ ಬಳ್ಳಾರಿ) ಅವರನ್ನು ಗೌರವಿಸಲಾಯಿತು.

ಕೇಂದ್ರ ಸರ್ಕಾರ ರೂಪಿಸಿರುವ ವಿದ್ಯಾರ್ಥಿ ಕೇಂದ್ರಿತವಾದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಕ್ರಮವಹಿಸಲಾಗುತ್ತಿದೆ. ಪ್ರಾರಂಭದಲ್ಲೇ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಅವರಿಗೆ ಎಲ್ಲಾ ಅವಕಾಶ ನೀಡುವ ಗುರಿ ಈ ಶಿಕ್ಷಣ ನೀತಿಯದ್ದಾಗಿದೆ. ಶಿಕ್ಷಕರು, ಸಂಸ್ಥೆಗಳು, ಸರ್ಕಾರ ಎಲ್ಲರೂ ಈ ನೀತಿ ಅನುಷ್ಠಾನಕ್ಕೆ ಸಿದ್ದರಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತರಬೇಕು ಎಂದು ಕರೆ ನೀಡಿದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ದಾನಿಗಳಿಂದ ದೇಣಿಗೆ ಸಂಗ್ರಹಿಸಲು ಶಿಕ್ಷಣ ಇಲಾಖೆ ರೂಪಿಸಿರುವ ನಮ್ಮ ಶಾಲೆ ನಮ್ಮ ಕೊಡುಗೆ ಕಾರ್ಯಕ್ರಮದ ಮೊಬೈಲ್ App ಚಾಲನೆ ನೀಡಿದ ನಂತರ ಮುಖ್ಯಮಂತ್ರಿ ಮಾತನಾಡಿ, ಶಾಲೆಗಳ ಅಭಿವೃದ್ಧಿ, ಶಿಕ್ಷಣಕ್ಕೆ ಕೊಡುಗೆ ನೀಡುವ ದಾನಿಗಳು ಸಮಾಜದಲ್ಲಿದ್ದಾರೆ. ಆದರೆ ಹೇಗೆ ಕೊಡಬೇಕು, ಏನು ಮಾಡಬೇಕು, ನೀಡಿದ ಹಣ ಏನಾಗುತ್ತದೆ ಎಂಬ ಸಂಶಯಗಳಿದ್ದವು ಎಲ್ಲಾ ಸಂಶಯಗಳಿಗೆ ಪರಿಹಾರವಾಗಿ App ರೂಪಿಸುವ ಕ್ರಮ ಸ್ವಾಗತಾರ್ಹವಾಗಿದೆ ಎಂದರು.

Published On: 06 September 2021, 12:28 PM English Summary: 5000 teachers will be appointed soon

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.