ಅಡಿಕೆ ಮಾರುಕಟ್ಟೆಯಲ್ಲಿ ದಿಢೀರ್ ಏರಿಕೆಯಾಗುತ್ತಿದ್ದು, ಮಂಗಳೂರು ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆಯಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ. ಗುರುವಾರ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ಗರಿಷ್ಠ 35,200 ಲಭಿಸಿದೆ. ಇದು ಈ ಹಂಗಾಮಿನಲ್ಲಿ ಹೊಸ ಕೊಯ್ಲಿನ ಅಡಿಕೆಗೆ ಲಭಿಸಿರುವ ಗರಿಷ್ಠ ಬೆಲೆಯಾಗಿದೆ.
ಕಳೆದ ಒಂದು ವಾರದಿಂದ ಖಾಸಗಿ ವಲಯದಲ್ಲೂ ಅಡಿಕೆ ಧಾರಣೆ ಏರಿಕೆಯಾಗುತ್ತಿದೆ ಹಳೆಯ ಅಡಿಕೆ, ಡಬಲ್ ಚೋಲ್ ಅಡಿಕೆ ಧಾರಣೆಯಲ್ಲೂ ಗಣನೀಯ ಏರಿಕೆಯಾಗಿದೆ. ಹಳೆಯ ಅಡಿಕೆಯು ಗುರುವಾರ ಕ್ವಿಂಟಲ್‌ಗೆ ಗರಿಷ್ಠ 39,500 ದರದಲ್ಲಿ ಮಾರಾಟವಾಯಿತು. ಪುತ್ತೂರು, ಬೆಳ್ತಂಗಡಿ ಮತ್ತು ಕಾರ್ಕಳ ಎಪಿಎಂಸಿ ಮಾರುಕಟ್ಟೆಯಲ್ಲಿ ಗುರುವಾರ ಹೊಸ ಅಡಿಕೆಯು ಕ್ವಿಂಟಲ್‌ಗೆ 35,000ಕ್ಕೆ ಮಾರಾಟವಾಗಿದೆ.
ಸುಳ್ಯ, ಬಂಟ್ವಾಳ ಮಾರುಕಟ್ಟೆಯಲ್ಲಿ 34,500ಕ್ಕೆ ಹೊಸ ಅಡಿಕೆ ಖರೀದಿಯಾಗಿದೆ. ಹಳೆಯ ಅಡಿಕೆ ಕ್ವಿಂಟಲ್‌ಗೆ ಗರಿಷ್ಠ 39,500 ದರ ಇದೆ. ಕ್ಯಾಂಪ್ಕೊ ಕೂಡ ಬೆಲೆ ಏರಿಸಿದ್ದು, ಕ್ಯಾಂಪ್ಕೊ ಮಾರುಕಟ್ಟೆಯಲ್ಲೂ ಹೊಸ ಅಡಿಕೆ ಕೆ.ಜಿಗೆ 350, ಡಬಲ್ ಚೋಲ್ ಅಡಿಕೆ 410ಕ್ಕೆ ಖರೀದಿಯಾಗಿದೆ.
Share your comments