21ನೆಯ ಶತಮಾನ ಹಲವಾರು ಆರ್ಥಿಕ, ಸಾಮಾಜಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಬದಲಾವಣೆಗಳಿಗೆ ನಾಂದಿ ಹಾಡಿದೆ. ಈ ಸರ್ವತೋಮುಖ ಬದಲಾವಣೆಗಳಿಂದಾಗಿ ಮನುಷ್ಯನ ಜೀವನ, ಆ ಜೀವನವನ್ನು ನಡೆಸುವ ಶೈಲಿ, ಆಹಾರ ಪದ್ಧತಿ, ಉಡುಗೆ-ತೊಡುಗೆ, ಸಂಚಾರ-ವಿಹಾರ ಹೀಗೆ ಎಲ್ಲದಕ್ಕೂ ಬದಲಾವಣೆಯ ಗಾಳಿ ಸೋಂಕಿದೆ. ಈ ಬದಲಾವಣೆಯ ಗಾಳಿ ಕೃಷಿ ವಲಯವನ್ನೂ ಬಿಟ್ಟಿಲ್ಲ. ಇಲ್ಲೂ ಸಾಕಷ್ಟು ತಾಂತ್ರಿಕ ಕ್ರಾಂತಿಗಳಾಗಿವೆ, ಉಳಿಮೆ, ಬಿತ್ತನೆ, ಕಟಾವು ಹೀಗೆ ವ್ಯವಸಾಯದ ಪ್ರತಿ ಹಂತದಲ್ಲೂ ಒಂದಿಲ್ಲೊAದು ಹೊಸ ತಂತ್ರಜ್ಞಾನ, ಯಂತ್ರೋಪಕರಣಗಳು ಕ್ರಾಂತಿ ಮಾಡುತ್ತಿವೆ. ಇದರೊಂದಿಗೆ ರಾಸಾಯನಿಕಗಳ ಬಳಕೆ ಕೂಡ ವ್ಯಾಪಕವಾಗಿ ಬೇರೂರಿದೆ. ಪರಿಣಾಮ, ದೇಶದ ಸಣ್ಣ-ಪುಟ್ಟ ಹಳ್ಳಿಗಳಲ್ಲೂ ಇಂದು ದೊಡ್ಡ ಆಸ್ಪತ್ರೆಗಳು ತಲೆಯೆತ್ತಿವೆ!
ವಿಷಕಾರಿ, ಹಾನಿಕಾರಕ ರಾಸಾಯನಿಕಗಳನ್ನು ಸೇವಿಸಿ ತಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಿಕೊಳ್ಳುವ ಆಸೆ ಯಾರಿಗೆ ತಾನೇ ಇರುತ್ತದೆ? ಎಲ್ಲರೂ ಆರೋಗ್ಯದಿಂದ ಇರಲು ಬಯಸುತ್ತಾರೆ. ಅದಕ್ಕಾಗಿ ಪ್ರತಿನಿತ್ಯ ಮಾರುಕಟ್ಟೆಗೋ, ಇಲ್ಲವೇ ಸಮೀಪದ ತರಕಾರಿ ಅಂಗಡಿಗೋ ಹೋಗಿ ಆಗ ತಾನೇ ಬಂದಿರುವ ತಾಜಾ ಸೊಪ್ಪು, ತರಕಾರಿಗಳನ್ನು ಕೊಂಡು ತರುತ್ತಾರೆ. ಮನೆಯಲ್ಲಿ ಅವುಗಳನ್ನು ಸ್ವಚ್ಛವಾಗಿ ತೊಳೆದು ಅಡುಗೆ ಮಾಡುತ್ತಾರೆ. ಬಳಿಕ ತಾವಿಂದು ಆರೋಗ್ಯಕರ ಆಹಾರ ಸೇವಿಸಿದ್ದೇವೆ ಎಂದು ಹಾಯಾಗಿ ದಿನ ಕಳೆಯುತ್ತಾರೆ. ಆದರೆ ತಾವು ಆಹಾರದ ಜೊತೆ ವಿಷವನ್ನೂ ಸೇವಿಸಿದ್ದೇವೆ ಎಂಬ ವಾಸ್ತವದ ಅರಿವು ಅವರಿಗೆ ಇರುವುದೇ ಇಲ್ಲ.
ಹಾಲು, ಆಹಾರದಲ್ಲಿ ಬೆರೆತ ವಿಷ
ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ಜಗತ್ತಿನಾದ್ಯಂತ ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗಲು ಪ್ರಮುಖ ಕಾರಣ ರಾಸಾಯನಿಕ ಕೀಟನಾಶಕಗಳಾಗಿವೆ. ಬೆಳೆಗಳನ್ನು ಕೀಟಗಳ ಹಾವಳಿಯಿಂದ ರಕ್ಷಿಸಲು ಬಳಸಲ್ಪಡುವ ವಿಷಕಾರಿ ಕೀಟನಾಶಕಗಳು, ಮನುಷ್ಯನಿಗೆ ದೀರ್ಘ ಕಾಲಿಕ ಹಾಗೂ ಮಾರಣಾಂತಿಕ ಕಾಯಿಲೆಗಳನ್ನು ತಂದೊಡ್ಡುತ್ತವೆ. ಬೆಳೆಗಳಿಗೆ ರಾಸಾಯನಿಕ ದ್ರಾವಣ ಸಿಂಪಡಿಸುವ ರೈತರು, ಕೃಷಿ ಕಾರ್ಮಿಕರು ಈ ವಿಷಗಳಿಗೆ ಬಲಿಯಾಗುವವರ ಪೈಕಿ ಮೊದಲ ಸಾಲಿನಲ್ಲಿದ್ದರೆ ಎರಡನೇ ಸಾಲಿನಲ್ಲಿ, ಈ ರಾಸಾಯನಿಕ ಸಿಂಪಡಿಸಿದ ಬೆಳೆಗಳನ್ನು ಆಹಾರವನ್ನಾಗಿ ಸೇವಿಸುವ ಸಾರ್ವಜನಿಕರು ಬರುತ್ತಾರೆ. ಅಷ್ಟೇ ಅಲ್ಲ, ಈ ಬೆಳೆಗಳ ಎಲೆ, ಸೊಪ್ಪು, ಹುಲ್ಲನ್ನು ಮೇವಿನ ರೂಪದಲ್ಲಿ ಸೇವಿಸುವ ಜಾನುವಾರುಗಳೂ ಅಪಾಯಕ್ಕೆ ಸಿಲುಕಿವೆ. ಹಾಗೇ, ಈ ಜಾನುವಾರುಗಳ (ಹಸಿ, ಎಮ್ಮೆ, ಮೇಕೆ) ಕಾಲು ಸೇವಿಸುವ ಮಕ್ಕಳೂ ಸೇರಿ ಎಲ್ಲಾ ವಯೋಮಾನದವರು ಹಾಲಿನ ರೂಪದಲ್ಲಿ ಪ್ರತಿ ದಿನವೂ ಸ್ವಲ್ಪ ಸ್ವಲ್ಪವೇ ವಿಷ (ಸ್ಲೋ ಪಾಯ್ಸನ್) ಸೇವಿಸುತ್ತಿದ್ದಾರೆ.
ರಾಸಾಯನಿಕಗಳ ಪರಿಣಾಮ
ಹಣ್ಣು, ತರಕಾರಿ ಮತ್ತು ಧಾನ್ಯದ ಬೆಳೆಗಳನ್ನು ಕೀಟಗಳ ಬಾಧೆಯಿಂದ ಕಾಪಾಡಲು ವಿಶ್ವದಾದ್ಯಂತ ಒಟ್ಟು ಒಂದು ಸಾವಿರಕ್ಕೂ ಅಧಿಕ ವಿಧದ ರಾಸಾಯನಿಕ ಕೀಟನಾಶಕಗಳನ್ನು ಬಳಸಲಾಗುತ್ತಿದೆ. ಆ ಪೈಕಿ ಹಲವಾರು ಅತ್ಯಂತ ಹಳೆಯ ಹಾಗೂ ಕಡಿಮೆ ಬೆಲೆಗೆ ಸಿಗುವ (ಅಕ್ರಮ) ಕೀಟನಾಶಕಗಳೂ (ಡಿಡಿಟಿ, ಲಿಂಡೇನ್) ಇವೆ. ಒಮ್ಮೆ ಈ ಕೀಟನಾಶಕಗಳನ್ನು ಬಳಸಿದರೆ ಅವುಗಳ ದುಷ್ಪರಿಣಾಮ ಹತ್ತು ಹಲವು ವರ್ಷಗಳವರೆಗೂ ಮಣ್ಣಿನ ಮೇಲೆ ಆಗುತ್ತಲೇ ಇರುತ್ತದೆ. ಇನ್ನು ಇವುಗಳನ್ನು ಸಿಂಪಡಿಸಿ ಬೆಳೆದ ಉತ್ಪನ್ನಗಳನ್ನು ಸೇವಿಸುವ ಜನರ ಆರೋಗ್ಯದ ಮೇಲೂ ಇವು ಅಷ್ಟೇ ಗಂಭೀರ ಪರಿಣಾಮ ಬೀರುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ ಒತ್ತಾಯದ ಮೇರೆಗೆ ಕೆಲವು ದೇಶಗಳು ಇಂತಹ ಹಾನಿಕಾರಕ ರಾಸಾಯನಿಕಗಳ ಬಳಕೆಯನ್ನು ನಿಷೇಧಿಸಿವೆ. ಆದರೂ ಭಾರತದಂತಹ ದೊಡ್ಡ ದೇಶಗಳಲ್ಲಿ ಈ ರಾಸಾಯನಿಕಗಳು ಅಕ್ರಮವಾಗಿ ನುಸುಳುತ್ತಿವೆ.
ಏನೆಲ್ಲಾ ಆರೋಗ್ಯ ಸಮಸ್ಯೆ?
ಕೀಟನಾಶಕಗಳನ್ನು ಸಿಂಪಡಿಸುವುದು ಸಸ್ಯಗಳ ಆರೋಗ್ಯಕ್ಕಾಗಿಯೇ ಆದರೂ ಅವುಗಳಿಂದ ಸಸ್ಯಗಳಿಗಿಂತಲೂ ಹೆಚ್ಚಾಗಿ ಹಾನಿ ಅಥವಾ ದುಷ್ಪರಿಣಾಮ ಎದುರಿಸುವುದು ಮಾನವ. ಒಂದೊAದು ರಾಸಾಯನಿಕವೂ ಮನುಷ್ಯನಿಗೆ ಒಂದೊAದು ಕಾಯಿಲೆಯನ್ನು ತಂದೊಡ್ಡುತ್ತದೆ. ಪ್ರಾಥಮಿಕ ಹಂತದಲ್ಲಿ ಕೀಟನಾಶಕ ಸಿಂಪಡಿಸುವ ರೈತ, ಕಾರ್ಮಿಕರಿಗೆ ತಲೆ ತಿರುಗುವಿಕೆ, ಕೊಟ್ಟೆ ನೋವು, ವಾಕರಿಕೆ, ವಾಂತಿಯAತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಡೆಗೆ ಹಟ್ಟೆ ನೋವು ದೀರ್ಘಕಾಲದ ಕಾಯಿಲೆಯಾಗಿಯೂ ಮಾರ್ಪಡುತ್ತದೆ. ಇದರೊಂದಿಗೆ ಚರ್ಮದ ಕಾಯಿಲೆ, ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಷ್ಟೇ ಅಲ್ಲ, ಸಾಮಾನ್ಯ ಸಾರ್ವಜನಿಕರಲ್ಲಿ ವಿವಿಧ ರೀತಿಯ ದೀರ್ಘಕಾಲಿಕ ಕ್ಯಾನ್ಸರ್ ಕಾಣಿಸಿಕೊಳ್ಳಲು ಸಹ ಕೀಟನಾಶಕಗಳು ಕಾರಣವಾಗಿವೆ. ಮೆದುಳಿನ ಕ್ಯಾನ್ಸರ್, ಮೂತ್ರಪಿಂಡ, ಸ್ತನ ಕ್ಯಾನ್ಸರ್, ಪ್ರಾಸ್ಟೇಟ್, ಮೇದೋಜ್ಜೀರಕ ಗ್ರಂಥಿ (Pಚಿಟಿಛಿಡಿeಚಿs), ಯಕೃತ್ತು, ಶ್ವಾಸಕೋಶ ಮತ್ತು ಚರ್ಮದ ಕ್ಯಾನ್ಸರ್ ಜೊತೆಗೆ, ಲ್ಯುಕೇಮಿಯಾ, ಲಿಂಫೋಮಾ ಕ್ಯಾನ್ಸರ್‌ಗೆ ಪ್ರಮುಖ ಕಾರಣ ಕೀಟನಾಶಕ ಮಿಶ್ರಿತ ಆಹಾರ ಸೇವನೆ ಎಂಬುದು ಬಹಳಷ್ಟು ಮಂದಿಗೆ ಗೊತ್ತೇ ಇಲ್ಲ. ಇವಷ್ಟೇ ಅಲ್ಲ, ಇಂದಿನ ದಿನಗಳಲ್ಲಿ ಬಹಳಷ್ಟು ಮಂದಿಯ ಬಳಲಿಕೆಗೆ ಕಾರಣವಾಗಿರುವ ಉಸಿರಾಟದ ತೊಂದರೆಗೆ ಈ ಕೀಟನಾಶಕಗಳೂ ಕಾರಣವಾಗಬಲ್ಲವು. ನರದೌರ್ಬಲ್ಯ, ಮಹಿಳೆಯರಲ್ಲಿ ಬಂಜೆತನದAತಹ ಗಂಭೀರ ಸಮಸ್ಯೆಗಳನ್ನು ಇವು ತಂದೊಡ್ಡುತ್ತವೆ.
ಟಾರ್ಗೆಟ್ ಯಾರು?
ಕೀಟನಾಶಗಳು ತಂದೊಡ್ಡುವ ಕಾಯಿಲೆಗಳ ಮೊದಲ ಟಾರ್ಗೆಟ್ ಅವುಗಳನ್ನು ಬೆಳೆಗೆ ಸಿಂಪಡಡಿಸುವ ರೈತ ಮತ್ತು ಕೃಷಿ ಕಾರ್ಮಿಕರು. ನಂತರ ಬರುವುದೇ, ಕೀಟನಾಶಕ ಸಿಂಪಡಿಸಿದ ಆಹಾರ, ಆಹಾರೋತ್ಪನ್ನಗಳನ್ನು ನೇರವಾಗಿ ಇಲ್ಲವೇ ಪರೋಕ್ಷವಾಗಿ ಸೇವಿಸುವ ಸಾರ್ವಜನಿಕರು. ಅದರಲ್ಲೂ ಕಡಿಮೆ ಆದಾಯ ಹೊಂದಿರುವ ಕೆಳ ಹಾಗೂ ಮಧ್ಯಮ ವರ್ಗದ ನಾಗರಿಕರು. ಮಾರುಕಟ್ಟೆ, ಮಾರ್ಟ್ಗಳು, ಸೂಪರ್ ಮಾರ್ಕೆಟ್, ಮಾಲ್‌ಗಳು ಹಾಗೂ ತರಕಾರಿ ಅಂಗಡಿಗಳಲ್ಲಿ ನೋಡಲು ಸುಂದರ, ಆಕರ್ಷಕವಾಗಿ, ಫಳಫಳ ಹೊಳೆಯುವ ತರಕಾರಿಗಳು, ಚಂದದ ಪೊಟ್ಟಣಗಳಲ್ಲಿ ಪ್ಯಾಕ್ ಮಾಡಿ ಇರಿಸಿದ ಆಹಾರ ಧಾನ್ಯಗಳು ತಮ್ಮೊಳಗೆ ಮಾರಣಾಂತಿಕ ರೋಗಕಾರಕ ಅಂಶಗಳನ್ನು ಅಡಗಿಸಿಟ್ಟುಕೊಂಡಿರುತ್ತವೆ.
ಸೇವಿಸದೆ ವಿಧಿಯಿಲ್ಲ!
ಹೌದು, ಈ ತರಕಾರಿ ಹಾಗೂ ಆಹಾರ ಉತ್ಪನ್ನಗಳನ್ನು ಸೇವಿಸದೇ ಬೇರೆ ದಾರಿ ಇಲ್ಲ. ಇವುಗಳನ್ನು ತ್ಯಜಿಸಬೇಕೆಂದರೆ ಉಪವಾಸ ಇರಬೇಕು. ಇನ್ನೊಂದೆಡೆ ಸಾವಯವ ಉತ್ಪನ್ನಗಳ ಹೆಸರಿನಲ್ಲೂ ಕೆಲ ದಲ್ಲಾಳಿಗಳು ಮೋಸ ಮಾಡುತ್ತಾರೆ. ರೈತರು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಬೆಳೆಗನ್ನು ಬಹಳ ದಿನಗಳವರೆಗೆ ಶೇಖರಿಸಿ ಇಡಲು ಅವುಗಳಿಗೆ ಮತ್ತದೇ ಕೀಟನಾಶಕ ಪುಡಿ, ಹಾನಿಕಾರಕ ಸಂರಕ್ಷಕಗಳನ್ನು ಬಳಸಲಾಗುತ್ತಿದೆ. ಹೀಗಾಗಿ ಯಾವುದು ಸುರಕ್ಷಿತ ಆಹಾರ ಎಂಬುದನ್ನು ಗುರುತಿಸುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆಲ್ಲಾ ಇರುವ ಒಂದೇ ಒಂದು ಪರಿಹಾರ, ರಾಸಾಯನಿಕಗಳ ಬಳಕೆಯನ್ನು ಸರ್ಕಾರ ಸಾರಾಸಗಟಾಗಿ ನಿಷೇಧಿಸುವುದು ಹಾಗೂ ಕೃಷಿಕರೆಲ್ಲರೂ ಸಾಮೂಹಿಕವಾಗಿ ನೈಸರ್ಗಿಕ, ಸುಸ್ಥಿರ, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು.
Share your comments