1. ಸುದ್ದಿಗಳು

ಟೆಸ್ಟ್ ವಿಶ್ವ ಚಾಂಪಿಯನ್ ಫೈನಲ್ ನಲ್ಲಿ ಭಾರತಕ್ಕೆ ಸೋಲು

ಮೊಟ್ಟಮೊದಲ ವಿಶ್ವಕಪ್ ಚಾಂಪಿಯನ್ ಆಗಿ ನ್ಯೂಜಿಲೆಂಡ್ ಹೊರಹೊಮ್ಮಿ ಇತಿಹಾಸ ನಿರ್ಮಾಣ ಮಾಡಿದೆ.ಕ್ಯಾಪ್ಟನ್ ಕೂಲ್ ವಿಲಿಯಮ್ಸ್  ನ ನಾಯಕತ್ವದ ನ್ಯೂಜಿಲೆಂಡ್ ತಂಡವು ಚೊಚ್ಚಲ ವಿಶ್ವ ಟೆಸ್ಟ್ ಕ್ರಿಕೇಟ್ ಚಾಂಪಿಯನ್ ಶಿಪ್ ಕಿರಿಟ ಧರಿಸಿದೆ.

ಏಜಿಸ್ ಬೌಲ್ ನಲ್ಲಿ ಬುಧವಾರ ಮುಕ್ತಾಯವಾದ ಫೈನಲ್ ಪಂದ್ಯದಲ್ಲಿ 8 ವಿಕೇಟ್ ಗಳಿಂದ ಭಾರತ ತಂಡವನ್ನು ಸೋಲಿಸಿದ ನ್ಯೂಜಿಲೆಂಡ್ ತಂಡ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದೆ. ಮಳೆ ಕಾಡಿದ್ದರಿಂದ ಆಟವನ್ನು ಆರು ದಿನ ವಿಸ್ತರಣೆ ಮಾಡಲಾಗಿತ್ತು. ಗೆಲ್ಲಲೂ ನ್ಯೂಜಿಲೆಂಡ್ ತಂಡಕ್ಕೆ 53 ಓವರ್ ಗಳಲ್ಲಿ ಕೇವಲ 139 ರನ್ ಗುರಿ ನೀಡಿತ್ತು. ರಾಸ್ ಟೇಲ್ ಮತ್ತು ಕೇನ್ ಜತೆಯಾಟ ಭಾರತದಿಂದ ಪಂದ್ಯವನ್ನು 45.5 ಓವರ್ ಗಳಲ್ಲಿ 2 ವಿಕೇಟ್ಗಳಿಗೆ 140 ರನ್ ಗಳಿಸಿತು.

ಮಳೆಯ ಮಾಟದ ನಡುವೆ ಎರಡು ತಂಡಗಳಿಗೆ ಗೆಲ್ಲುವ ಅವಕಾಶವಿತ್ತು. ಹೀಗಾಗಿ ಒಂದು ಹಂತದಲ್ಲಿ ಪಂದ್ಯ ರೋಚಕ ಘಟಕ್ಕೆ ತಲುಪಿತ್ತು. ಒಂದುದಿನ ಭಾರತದ ಕಡೆ ಮತ್ತೊಂದು ದಿನ ನ್ಯೂಜಿಲೆಂಡ್ ತಂಡದ ಕಡೆ ವಾಲುತ್ತಿದ್ದ ಪಂದ್ಯ ಅಂತಿಮವಾಗಿ ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಿಸಿ ಐತಿಹಾಸಿಕ ತಂಡವಾಗಿ ಹೆಸರು ಮಾಡಿತು.

ನಾಯಕ ಕೇನ್ ವಿಲಿಯಮ್ಸನ್ (51) ಮತ್ತು ರಾಸ್ ಟೇಲರ್ (43) ಅವರ ಅದ್ಭುತ ಇನ್ನಿಂಗ್ಸ್ ಎರಡು ವಿಕೆಟ್ಗಳ ನಷ್ಟದಿಂದಾಗಿ ನ್ಯೂಜಿಲೆಂಡ್ ಗೆಲುವಿಗೆ 139 ರನ್ ಗಳಿಸುವ ಗುರಿಯನ್ನು ಸಾಧಿಸಿತು. ಇದರೊಂದಿಗೆ, ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.

ದೊಡ್ಡ ಗುರಿ ನೀಡಲು ಭಾರತ ವಿಫಲ

ಭಾರತ ತಂಡವು ಕನಿಷ್ಠ 200 ರನ್ ಗಳಿಸುವ ಮೂಲಕ ನ್ಯೂಜಿಲೆಂಡ್‌ಗೆ ಕಠಿಣ ಗುರಿ ನಿಗದಿಪಡಿಸಲು ಬಯಸಿತು. ಆದರೆ ಟಿಮ್ ಸೌಥಿ (48 ಕ್ಕೆ 4), ಟ್ರೆಂಟ್ ಬೌಲ್ಟ್ (39 ಕ್ಕೆ 3) ಮತ್ತು ಕೈಲ್ ಜಾಮಿಸನ್ (30 ಕ್ಕೆ 2) ಬ್ಯಾಟ್ಸ್‌ಮನ್‌ಗಳ ಮೇಲೆ ಮೊದಲಿನಿಂದಲೂ ಒತ್ತಡ ಹೇರಿದರು . ರಿಷಭ್ ಪಂತ್ (88 ಎಸೆತಗಳಲ್ಲಿ 41 ರನ್) ಭಾರತ ಪರ ಹೆಚ್ಚು ರನ್ ಗಳಿಸಿದರು. ಆರಂಭಿಕ ಜೋಡಿ ರೋಹಿತ್ ಶರ್ಮಾ (30) ಮತ್ತು ಶುಬ್ಮನ್ ಗಿಲ್ (ಎಂಟು) ನಿನ್ನೆ ಸಂಜೆ ಪೆವಿಲಿಯನ್‌ಗೆ ಮರಳಿದ ನಂತರ, ಭಾರತ ತಮ್ಮ ಮೂವರು ವಿಶ್ವಾಸಾರ್ಹ ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಕಳೆದುಕೊಂಡಿತು. ನಾಯಕ ವಿರಾಟ್ ಕೊಹ್ಲಿ (29 ಎಸೆತಗಳಲ್ಲಿ 13 ರನ್), ಚೇತೇಶ್ವರ್ ಪೂಜಾರ (80 ಎಸೆತಗಳಲ್ಲಿ 15 ರನ್ ) ಮತ್ತು ಇತರರು. ಬೆಳಿಗ್ಗೆ ಸೆಷನ್‌ನಲ್ಲಿಯೇ ಉಪನಾಯಕ ಅಜಿಂಕ್ಯ ರಹಾನೆ (40 ಎಸೆತಗಳಲ್ಲಿ 15) ಬೇಗನೆ ವಿಕೆಟ್ ಒಪ್ಪಿಸಿದರು. ಭಾರತದ ಮೇಲಿನ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ವೈಫಲ್ಯದ ಪ್ರಯೋಜ ಕೇನ್ ಬಳಗಕ್ಕೆ ಲಭಿಸಿತು.

ಅಂತಹ ಪರಿಸ್ಥಿತಿಯಲ್ಲಿ, ಪಂತ್ ಜವಾಬ್ದಾರಿಯನ್ನು ವಹಿಸಿಕೊಂಡರು ಆದರೆ ಶಿಸ್ತುಬದ್ಧ ಬೌಲಿಂಗ್ ಮುಂದೆ ಅದು ಸಾಧ್ಯವಾಗಲಿಲ್ಲ. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಬಾರಿಸಿದರು. ಬೌಲ್ಟ್ ಬೌಲಿಂಗ್​ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರು. ಅದೇ ಓವರ್‌ನಲ್ಲಿ ಬೌಲ್ಟ್ ರವಿಚಂದ್ರನ್ ಅಶ್ವಿನ್ (7) ಅವರನ್ನು ಸ್ಲಿಬಲಿ ಪಡೆದರು. ಸೌಥಿ ಒಂದು ಓವರ್‌ನಲ್ಲಿ ಶಮಿ (13) ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಔಟ್ ಮಾಡುವ ಮೂಲಕ ಭಾರತದ ಇನ್ನಿಂಗ್ಸ್ ಮುಗಿಸಿದರು.

ಸಂಕ್ಷೀಪ್ತ ಸ್ಕೋರ್

ಭಾರತ 1ನೇ ಇನ್ನಿಂಗ್ಸ್  21710, ಕಿವಿಸ್ ಮೊದಲನೇ ಇನ್ಸಿಂಗ್ಸ್ 249/10, ಭಾರತ ಎರಡನೇ ಇನ್ನಿಂಗ್ಸ್ 170/10 ಕಿವಿಸ್ 2ನೇ ಇನ್ನಿಂಗ್ಸ್ 140/2

Published On: 24 June 2021, 06:53 PM English Summary: New Zealand beat India in final

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.