1. ಸುದ್ದಿಗಳು

ರೈತರಿಗೆ ಪವರ್ ಟಿಲ್ಲರ್ ಖರೀದಿಗೆ ಪ್ರೋತ್ಸಾಹಿಸಲು ತೋಟಗಾರಿಕೆ ಇಲಾಖೆಗೆ ಸರ್ಕಾರ ಅನುಷ್ಠಾನ ಮಾರ್ಗಸೂಚಿ

2020-21ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ ವಿವಿಧ ಫಲಾನುಭವಿಯ ಆಧಾರಿತ ಕಾರ್ಯಕ್ರಮಗಳಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಪವರ್ ಟಿಲ್ಲರ್  ಖರೀದಿಗೆ ಪ್ರೋತ್ಸಾಹ ಧನ ನೀಡಲು ಈಗಾಗಲೇ ಎಲ್ಲಾ ತೋಟಗಾರಿಗೆ ಇಲಾಖೆಗಳಿಗೆ (Horticulture Department) ಸರ್ಕಾರ ಅನುಷ್ಠಾನ ಮಾರ್ಗಸೂಚಿ ಕಳುಹಿಸಿದೆ.

ತೋಟಗಾರಿಕೆ ಚಟುವಟಿಕೆಗಳಿಗೆ ಹಾಗೂ ತೋಟಗಾರಿಕೆ ಬೆಳೆಗಳ ಉತ್ಪಾದಕೆಯನ್ನು ಹೆಚ್ಚಿಸಲು ಸಕಾಲಿಕ ಮತ್ತು ನಿಖರ ಕ್ಷೇತ್ರ ಕೆಲಸಗಳನ್ನು ನಿರ್ವಹಿಸಲು ಯಂತ್ರೋಪಕರಣಗಳ ಅವಶ್ಯಕತೆ ಹೆಚ್ಚಾಗಿರುವುದರಿಂದ ಇಲಾಖೆಯ ವತಿಯಿಂದ ವಿವಿಧ ಯಂತ್ರೋಪಕರಗಳಿಗೆ ಸಹಾಯಧನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಕೊರೋನಾ ಲಾಕ್ಡೌನ್ ದಿಂದಾಗಿ ಪ್ರಸಕ್ತ ವರ್ಷ ಯಂತ್ರೋಪಕರಣಿಗೆ ನೀಡುವ ಪ್ರೋತ್ಸಾಹ ಧನವನ್ನು ತಡೆಹಿಡಿಯಲಾಗಿತ್ತು. ಆದರೆ ಪವರ್ ಟಿಲ್ಲರ್ (Power tiller)  ಬೆಲೆ ಜಾಸ್ತಿಯಿರುವುದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಖರೀದಿಸಲು ಶೇ.90 ರಷ್ಟುಸಹಾಯ ನೀಡುವ  ರಾಜ್ಯದ ಎಲ್ಲಾ ತೋಟಗಾರಿಕೆ ಇಲಾಖೆಗಳಿಗೆ ಅನುಷ್ಠಾನ ಮಾರ್ಗಸೂಚಿ ನೀಡಲಾಗಿದೆ.

ಈ ಯೋಜನೆಯನ್ನು ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಜಿಲ್ಲಾವಾರು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗದ ರೈತರು ಈ ಯೋಜನೆಯಡಿ ಪ್ರೋತ್ಸಾಹಧನ ಪಡೆಯಬಹುದು.

1 ಲಕ್ಷ ರುಪಾಯಿಯವರೆಗೆ ಸಹಾಯಧನ:

ಪವರ್ ಟಿಲ್ಲರ್ ಖರೀದಿಸಲು 8 ಬಿ,ಹೆಚ್.ಪಿ ಮತ್ತು ಅದಕ್ಕಿಂತ ಹೆಚ್ಚು ಪವರ್ ಟಿಲ್ಲರಗೆ ಶೇ. 90 ರಷ್ಟು ಗರಿಷ್ಠ 1 ಲಕ್ಷವರೆಗೆ ಸಹಾಯಧನ ನೀಡಲಾಗುವುದು.

ಪವರ್ ಟಿಲ್ಲರ್ ಗೆ ಒಮ್ಮೆ ಮಾತ್ರ ಪ್ರೋತ್ಸಾಹ ಧನ:

ರೈತರು ತೋಟಗಾರಿಕೆ ಇಲಾಖೆಯಿಂತ ಖರೀದಿಸುವ ಪವರ್ ಟಿಲ್ಲರ್ ಒಮ್ಮೆ ಮಾತ್ರ ಸಹಾಯಧನ ಪಡೆಯಲು ಅರ್ಹತೆ ಹೊಂದಿರುತ್ತಾರೆ. ಫಲಾನುಭವಿಯು ಜಮೀನು ಹೊಂದಿರುವ ಬಗ್ಗೆ ಹಾಗೂ ತೋಟಗಾರಿಕೆ ಬೆಳೆ ಬೆಳೆಯುತ್ತಿರುವ ವಿವರಗಳುಳ್ಳ ಆರ್.ಟಿ.ಸಿ/ಪಹಣಿಯಲ್ಲಿ ಒದಗಿಸಬೇಕು. 1 ಏಪ್ರೀಲ್ 2020 ರ ನಂತರ ಖರೀದಿಸಿದ ಪವರ್ ಟಿಲ್ಲರಗೆ ಮಾತ್ರಸಹಾಯದ ನೀಡಲಾಗುವುದು. ಈ ಯೋಜನೆಯಡಿ ಸಹಾಯಧನ ಪಡೆದ ರೈತ ಫಲಾನುಭವಿಗಳು ಪವರ್ ಟಿಲ್ಲರ್ ಉಪಕರಣವನ್ನು ಕನಿಷ್ಟ 5 ವರ್ಷದವರೆಗೆ ಮಾರಾಟ ಮಾಡುವುದಾಗಲಿ ಅಥವಾ ಪರಭಾರೆ ಮಾಡುವುದಾಗಲಿ ಮಾಡಬಾರದು.

ಡ್ರಾ ಮೂಲಕ ಫಲಾನುಭವಿಗಳ ಆಯ್ಕೆ:

ಯೋಜನೆಯಡಿ ಅನುದಾನವನ್ನು ಡ್ರಾ ಮೂಲಕ ಆಯ್ಕೆ ಮಾಡಲಾಗುವುದು. ರೈತರು ಸಹಾಯಧನಕ್ಕಾಗಿ ಪವರ್ ಟಿಲ್ಲರ್ ಯಂತ್ರೋಪಕರಣಕ್ಕೆ  ಈ ಮೊದಲು ತೋಟಗಾರಿಕೆಯ ಇಲಾಖೆಯ /ಕೃಷಿ/ ರೇಷ್ಮೆ/ಪಶುಪಾಲನೆ/ ಇಲಾಖೆ/ಖಾದಿ ಗ್ರಾಮೋದ್ಯೋಗ ಸಂಸ್ಥೆ/ಕಾಫಿ ಬೋರ್ಡ್/ ಇತ್ಯಾದಿ ಯಾವುದೇಇಲಾಖೆ ಸಂಸ್ಥೆಗಳಿಂದ ಸಹಾಯಧನ ಪಡೆದಿರಬಾರದು. ರೈತ ಫಲಾನುಭವಿಯು ಸಹಾಯಧನಕ್ಕೆ ಸಲ್ಲಿಸುವ ಅರ್ಜಿಗಳನ್ನು ಇಲಾಖೆಯ HASIRU ಮತ್ತು FRUITS  ಆನ್ ಲೈನ್ ಅಪ್ಲಿಕೇಷನ್ ಸಾಫ್ಟ್ ವೇರ್ ಗಳಲ್ಲಿ ನೋಂದಾಯಿಸಿಕೊಳ್ಳುವುದಕ್ಕಾಗಿ ಅವಶ್ಯವಿರುವ ದಾಖಲೆಗಳನ್ನು ಪಡೆಯಬೇಕು.

 

ದಾಖಲಾತಿಗಳು (Documents):

1 ಏಪ್ರೀಲ್ 2020ನೇ ತಿಂಗಳ ನಂತರ ಪವರ್ ಟಿಲ್ಲರ್ ಖರೀದಿಸಿದ ಬಗ್ಗೆ ಮೂಲ ವೋಚರ್ /ದಾಖಲಾತಿ ವಿವರಗಳನ್ನು ಸಲ್ಲಿಸಬೇಕು. ಪವರ್ ಟಿಲ್ಲರ್ ಉಪಕರಣದೊಂದಜಿಗೆ ಫಲಾನುಭವಿ ಇರುವ ಛಾಯಾಚಿತ್ರವನ್ನು ಸಲ್ಲಿಸಬೇಕು. ಜಮೀನು ಹೊಂದಿರುವ ಮತ್ತು ತೋಟಗಾರಿಕೆ ಬೆಳೆ ನಮೂದಾಗಿರುವ ಆರ್.ಟಿ.ಸಿ ಮೂಲ ಪ್ರತಿಯನ್ನು ಸಲ್ಲಿಸಬೇಕು. ಪವರ್ ಟಿಲ್ಲರ್ ಯಂತ್ರೋಪಕರಣವನ್ನು ತೋಟಗಾರಿಕೆ ಚಟುವಿಕೆಗಳಿಗೆ ಮಾತ್ರ ಉಪಯೋಗಿಸುವ ಬಗ್ಗೆ ಹಾಗೂ ಯಂತ್ರೋಪಕರಣವನ್ನು ಮಾರಾಟ/ಪರಭಾರೆ ಮತ್ತು ಇತರ ಇಲಾಖೆಗಳಿಂದ ಪವರ್ ಟಿಲ್ಲರಿಗೆ ಸಹಾಯಧನ ಪಡೆದಿಲ್ಲವೆಂದು ಪ್ರಮಾಣಪತ್ರ ಸಲ್ಲಿಸಬೇಕು.

ರೈತ ಫಲಾನುಭವಿಯು ಪವರ್ ಟಿಲ್ಲರ್ ಯಂತ್ರೋಪಕರಣವನ್ನು ಖರೀದಿಸಿರುವ ಬಗ್ಗೆ, ತಾಲೂಕುಮಟ್ಟದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರವರ ಪರಿಶೀಲನಾ ದೃಢೀಕರಣ ಪತ್ರವನ್ನು ನೀಡಿರಬೇಕು.

ಬಿಲ್ ಪರಿಶೀಲಿಸಿ ಪ್ರೋತ್ಸಾಹ ಧನ:

ರೈತರು ತಮಗೆ ಅಗತ್ಯವೆನಿಸಿದ ಮತ್ತು ಇಚ್ಚೆಪಟ್ಟ ಅನುಮೋದಿತ ಸಂಸ್ಥೆಗಳಿಂದ ಮಾತ್ರ ಪವರ್ ಟಿಲ್ಲರ್ ಉಪಕರಣಗಳನ್ನು ಖರೀದಿಸಲು ಸಂಪೂರ್ಣವಾಗಿ ಸ್ವಂತತ್ರರಾಗಿರುತ್ತಾರೆ. ರೈತರು ಅರ್ಜಿಯೊಂದಿಗೆ ಸಲ್ಲಿಸುವ ಪವರ ಟಿಲ್ಲರ್ ಉಪಕರಣ ಖರೀದಿಸಿದ ಬಿಲ್ಲನ್ನು ಪರಿಶೀಲಿಸಿ ಪ್ರೋತ್ಸಾಹಧನ ನೀಡಲಾಗುವುದು. ರೈತರು ಖರೀದಿಸಿದ ಉಪಕರಣದ ಬಿಲ್ಲು ಮೂಲ ಪ್ರತಿಯಲ್ಲಿರಬೇಕು ಹಾಗೂ ಜಿಎಸ್.ಟಿ ಸಂಖ್ಯೆ ಹೊಂದಿರಬೇಕು. ಸಹಾಯಧನವನ್ನು ಇಸಿಎಸ್ ಮೂಲಕ ರೈತ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುವುದು.

  ಹೆಚ್ಚಿನ ಮಾಹಿತಿಗಾಗಿ ಹೋಬಳಿಮಟ್ಟದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು, ಅಥವಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು.

 

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.