1. ಸುದ್ದಿಗಳು

26 ದಿನಗಳ ವಿದ್ಯುತ್ ಗೃಹಪಯೋಗಿ ವಸ್ತುಗಳ ತರಬೇತಿಗಾಗಿ ಅರ್ಜಿ ಆಹ್ವಾನ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಸಂಯುಕ್ತಾಶ್ರಯದಲ್ಲಿ   ವಿದ್ಯುತ್ ಗೃಹಪಯೋಗಿ ವಸ್ತುಗಳು ರಿಪೇರಿ ಮತ್ತು ಸರ್ವೀಸ್ ಕುರಿತು 26 ದಿನಗಳ ಕೌಶಲ್ಯಾಧಾರಿತ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಆಸಕ್ತಿಯುಳ್ಳ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸಿಡಾಕ್ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಕೌಶಲ್ಯ ತರಬೇತಿ ಪಡೆದು ಸ್ವಯಂ ಉದ್ಯೋಗ ಪ್ರಾರಂಭಿಸಲು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ರಿಂದ 40 ವರ್ಷದೊಳಗಿರಬೇಕು. 10 ನೇ ತರಗತಿ ಪಾಸಾಗಿರಬೇಕು.

ಭರ್ತಿ ಮಾಡಿದ ಅರ್ಜಿಯೊಂದಿಗೆ ಆಧಾರ ಕಾರ್ಡ್ ಪ್ರತಿ, 10ನೇ ತರಗತಿ ಪಾಸಾದ ಅಂಕಪಟ್ಟಿ ಪ್ರತಿ, ಜಾತಿ ಪ್ರಮಾಣಪತ್ರದ ಪ್ರತಿ  ಹಾಗೂ ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ 2 ಫೋಟೋಗಳನ್ನು ಲಗತ್ತಿಸಿ ಅರ್ಜಿಯನ್ನು ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ, (ಸಿಡಾಕ್) ಕಛೇರಿ, ಜಿಲ್ಲಾ ಕೌಶಲ್ಯ ಅಭಿವ್ರದ್ಧಿ ಅಧಿಕಾರಿ ಕಛೇರಿ, (ಸರ್ಕಾರಿ ಬಾಲಕರ ಐಟಿಐ ಆವರಣ) ಎಂ.ಎಸ್.ಕೆ. ಮಿಲ್ ರೋಡ್ ಕಲಬುರಗಿ-585102 ಕಚೇರಿ ವಿಳಾಸಕ್ಕೆ 2020ರ ಅಕ್ಟೋಬರ್ 23ರ ಸಂಜೆ 5 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9108972833 / 9916006910 ಗೆ ಸಂಪರ್ಕಿಸಲು ಕೋರಲಾಗಿದೆ.

Published On: 19 October 2020, 09:55 PM English Summary: Application invited for Training of Electrical Home Appliances

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.