ರಿಯಾಯಿತಿ ದರದಲ್ಲಿ ತಾಡಪತ್ರಿಗಳನ್ನು ವಿತರಿಸಲು ಅರ್ಹ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ. ಆಸಕ್ತರು ಆಗಸ್ಟ್ 14ರೊಳಗಾಗಿ ಅರ್ಜಿ ಸಲ್ಲಿಸಲು ತಿಳಿಸಿದೆ. (Application invited for issue of tarpaulin at concessional rate )
ಹಾವೇರಿ : ಕೃಷಿ ಇಲಾಖೆಯ ಕೃಷಿ ಸಂಸ್ಕರಣೆ ಹಾಗೂ ಆಹಾರ ಭದ್ರತಾ ಅಭಿಯಾನ ಯೋಜನೆಯಡಿ ರಿಯಾಯಿತಿ ದರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ತಾಡಪತ್ರಿಗಳನ್ನು ವಿತರಿಸಲು ಹಾವೇರಿ ತಾಲೂಕಿನ ಅರ್ಹ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ.
ಈ ಹಿಂದಿನ ಮೂರು ವರ್ಷಗಳಲ್ಲಿ ತಾಡಪತ್ರಿಗಳನ್ನು ಪಡೆಯದ ರೈತರು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಆಸಕ್ತ ರೈತರು ಆಧಾರ್ ಕಾರ್ಡ್, ಜಮೀನಿನ ಉತಾರ, ಆರ್‍ಡಿ ನಂಬರ ಹೊಂದಿದ ಚಾಲ್ತಿ ಝಾತಿ ಪ್ರಮಾಣ ಪತ್ರದ ಝರಾಕ್ಸ್ ಪ್ರತಿಗಳೊಂದಿಗೆ ಅರ್ಜಿಯನ್ನು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಿಗೆ ದಿನಾಂಕ 14-08-2023ರೊಳಗಾಗಿ ಸಲ್ಲಿಸಬೇಕು.
ದಿನಾಂಕ 17-08-2023 ರಂದು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಲ್ಲಿ ಲಾಟರಿ ಮುಖಾಂತರ ಫಲಾನುಭವಿಗಳ ಆಯ್ಕೆಮಾಡಲಾಗುವುದು.
ಆಯ್ಕೆಯಾದ ರೈತ ಫಲಾನುಭವಿಗಳಿಗೆ ದಿನಾಂಕ 18-8-2023 ರಿಂದ 31-08-2023ರವರೆಗೆ ಹಂಚಿಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದೆಂದು ಹಾವೇರಿ ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ಅವರು ತಿಳಿಸಿದ್ದಾರೆ.
Share your comments