1. ಸುದ್ದಿಗಳು

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ವಿವಿಧ ವಿಭಾಗಗಳಲ್ಲಿ  ಖಾಲಿಯಿರುವ  ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಯ ಹೆಸರು: ಸಹಾಯಕ ನಿರ್ದೇಶಕರು, ಕಾರ್ಯಾಗಾರ  ಅಧಿಕಾರಿಗಳು/ ವ್ಯವಸ್ಥಾಪಕರು, ಕಿರಿಯ ಇಂಜಿನಿಯರಿಂಗ್ ( ಸಿವಿಲ್) , ವರ್ಕ್  ಸೂಪರವೈಸರ್, ಇಲೆಕ್ಟ್ರಿಷಿಯನ್, ಕಾರ್ಪೆಂಟರ್, ಟರ್ನರ್, ಪಿಟ್ಟರ್, •ಸಹಾಯಕ ತೋಟಗಾರಿಕಾ ಅಧಿಕಾರಿಗಳು,  •ಸಹಾಯಕ(ಕಾನೂನು ಕೋಶ), •ಪ್ಲೇಸಮಂಟ್ ಅಧಿಕಾರಿ

ಹುದ್ದೆಗಳ ಸಂಖ್ಯೆ: 15

ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಎಸ್ಎಸ್ಎಲ್ ಸಿ, ಐಟಿಐ,ಎಂಬಿಎ ಪದವಿ ,ಕಾನೂನು ಪದವಿ, ಬಿಎಸ್ಸಿ / ಎಂಎಸ್ಸಿ ತೋಟಗಾರಿಕೆ , ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಹತೆ ಜೊತೆಗೆ ನಿಗದಿತ ಅನುಭವ ಹೊಂದಿರಬೇಕು.

ವಯೊಮಿತಿ: ಕನಿಷ್ಠ 18 ವರ್ಷ ,ಸಾಮಾನ್ಯ ವರ್ಗ  ಗರಿಷ್ಠ 35 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ, ಗರಿಷ್ಠ 38 ವರ್ಷ. ಪ .ಜಾತಿ, ಪ .ಪಂ, ಪ್ರವರ್ಗ-1 ಗರಿಷ್ಠ 40 ವರ್ಷ .

ವೇತನ: ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ .12,000 ರೂ.25,000 ವೇತನ ನೀಡಲಾಗುತ್ತದೆ.

ಆಯ್ಕೆ ವಿಧಾನ: ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ:05 /05/2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:05/06/2021

ಅರ್ಜಿ ಸಲ್ಲಿಸುವ ವಿಧಾನ: ಅರ್ಜಿ ಸಲ್ಲಿಸಲು  ಬಯಸುವ  ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಅಧಿಕೃತ ವೆಬ್ ಸೈಟ್ ವಿಳಾಸಕ್ಕೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ನಂತರ ಅದನ್ನು ಭರ್ತಿ ಮಾಡಿ ಅಗತ್ಯದಾಖಲೆಗಲೊಂದಿಗೆ ಕಚೇರಿಗೆ ಸಲ್ಲಿಸಬೇಕು.

ವಿಶ್ವವಿದ್ಯಾಲಯದ ಅಧಿಕೃತ ವೆಬ್ ಸೈಟ್  www.kud.ac.in 

ಅರ್ಜಿ ಸಲ್ಲಿಸುವ ವಿಳಾಸ: ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ವಿಭಾಗ ಪಾವಟೆ ನಗರ , ಧಾರವಾಡ.

Published On: 14 May 2021, 08:59 PM English Summary: Application invited for filling up of posts in karnataka university

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.