1. ಸುದ್ದಿಗಳು

ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

teacher

2021-22 ನೇ ಸಾಲಿನಲ್ಲಿ ಸಮನ್ವಯ ಶಿಕ್ಷಣ ಮಧ್ಯವರ್ತನೆ ಅನುಷ್ಠಾನಗೊಳಿಸಲು ನೇರ ಗುತ್ತಿಗೆಯಡಿಯಲ್ಲಿ ಕಲಬುರಗಿ ಜಿಲ್ಲೆಯ ತಾಲೂಕು ಬಿ.ಆರ್.ಸಿ. ಕೇಂದ್ರಗಳಲ್ಲಿ ಖಾಲಿಯಿರುವ ಬಿ.ಐ.ಇ.ಆರ್.ಟಿ. (ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ)  ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಗ್ರ ಶಿಕ್ಷಣ ಕರ್ನಾಟಕ ಕಲಬುರಗಿ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಹಾಗೂ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ವಿದ್ಯಾರ್ಹತೆ ವಿವರ ಇಂತಿದೆ. ಪ್ರಾಥಮಿಕ  ವಿಭಾಗಕ್ಕೆ  ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಇರುವ ವಿದ್ಯಾರ್ಹತೆಯ ಜೊತೆಗೆ ವಿಶೇಷ ಡಿ.ಇ.ಡಿ. ಅಥವಾ ಎಮ್.ಸಿ.ಟಿ.ಸಿ. ವಿದ್ಯಾರ್ಹತೆ ಮತ್ತು ಆರ್.ಸಿ.ಐ. ಪ್ರಮಾಣಪತ್ರ ಹೊಂದಿರಬೇಕು. ಅದೇ ರೀತಿ ಪ್ರೌಢಶಾಲಾ ವಿಭಾಗಕ್ಕೆ  ಪ್ರೌಢಶಾಲಾ ಶಿಕ್ಷಕರಾಗಲು ಇರುವ ವಿದ್ಯಾರ್ಹತೆಯ ಜೊತೆಗೆ ವಿಶೇಷ ಬಿ.ಇಡಿ. ವಿದ್ಯಾರ್ಹತೆ ಮತ್ತು ಆರ್.ಸಿ.ಐ. ಪ್ರಮಾಣಪತ್ರ ಹೊಂದಿರಬೇಕು.

ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಹತ್ತಿರದ ರಾಜಾಪುರ ರಸ್ತೆಯಲ್ಲಿರುವ ಉಪನಿರ್ದೇಶಕರು ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿಯಲ್ಲಿ 2021ರ ಜೂನ್ 19ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು.

ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸಹಾಯಕ ಯೋಜನಾ ಸಮನ್ವಯಾಧಿಕಾರಿ ಬಸನಗೌಡ ಬಿರಾದಾರ ಇವರ ಮೊಬೈಲ್ ಸಂಖ್ಯೆ 8660995026 ಗೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

Published On: 14 June 2021, 10:58 PM English Summary: Application invitation for teacher posts

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.