1. ಸುದ್ದಿಗಳು

ಸರ್ಕಾರಿ ನೌಕರರಿಗೆ ಇನ್ನೊಂದು ಬಂಪರ್‌ ಸುದ್ದಿ: ನೀವಿದನ್ನು ತಪ್ಪದೇ ಓದಲೇಬೇಕು!

Kalmesh T
Kalmesh T
Another Bumper News for Government Employees: You Must Read This!

ಸರ್ಕಾರಿ ನೌಕರರಿಗೆ ಒಂದರ ಮೇಲೊಂದು ಎನ್ನುವಂತೆ ಸಿಹಿ ಸುದ್ದಿಗಳು ದೊರೆಯುತ್ತಲೇ ಇವೆ. ಇದೀಗ ಇನ್ನೊಂದು ಬಂಪರ್‌ ಸುದ್ದಿ ಸರ್ಕಾರಿ ನೌಕರರಿಗೆ ಇದೆ. ಇದನ್ನು ಓದಿರಿ

ಸರ್ಕಾರಿ ನೌಕರರಿಗೆ 3 ತಿಂಗಳ ಬಾಕಿ ಡಿಎ ನೀಡುವುದಾಗಿ ಘೋಷಣೆ; ಈ ತಿಂಗಳೊಳಗೆ ಬರಲಿದೆ ಹಣ!

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ(Dearness Allowence) ಹೆಚ್ಚಳಕ್ಕೆ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ಜನವರಿಯಿಂದ ಜಾರಿಗೆ ಬರಲಿರುವ ಈ ತುಟ್ಟಿ ಭತ್ಯೆಯಲ್ಲಿ ಶೇಕಡಾ 4 ರಷ್ಟು ಹೆಚ್ಚಳಕ್ಕೆ ಸರ್ಕಾರವು ಅನುಮೋದನೆಯನ್ನು ನೀಡಿದೆ.

ಇದರೊಂದಿಗೆ ಎಲ್ಲ ಸರ್ಕಾರಿ ನೌಕರರು ಮತು ಪಿಂಚಣಿದಾರರು  ಇದೀಗ ಶೇ. 42 ರಷ್ಟು ತುಟ್ಟಿಭತ್ಯೆಯನ್ನು ಪಡೆದುಕೊಳ್ಳಲಿದ್ದಾರೆ.

ಗಮನಿಸಿ: 50 ಲಕ್ಷ ಸರ್ಕಾರಿ ನೌಕರರ ಮೂಲ ವೇತನ ಪರಿಷ್ಕರಣೆ ಸಾಧ್ಯತೆ!

ಈ ಮೊದಲು ಇದು ಶೇ. 38 ರಷ್ಟು ಇತ್ತು. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಇನ್ನೊಂದು ದೊಡ್ಡ ಸುದ್ದಿ ಸಿಗುವ ಸಾಧ್ಯತೆ ಇದೆ.

ಅದೇನೆಂದರೆ ಸರ್ಕಾರಿ ನೌಕರರ ಫಿಟ್‌ಮೆಂಟ್ ಫ್ಯಾಕ್ಟರ್ (Fitment Factor) ಹೆಚ್ಚಳವಾಗುವುದು ಆಗಿದೆ.

ಮುಂದಿನ ವರ್ಷದಿಂದ ಅದನ್ನು ಹೆಚ್ಚಿಸಲು ಸರ್ಕಾರದಿಂದ ನಿರ್ಧಾರ ತೆಗೆದುಕೊಳ್ಳಬಹುದು. 2024ರಲ್ಲಿ ನಡೆಯಲಿರುವ ಚುನಾವಣೆ ಸಮೀಪಿಸುತ್ತಿರುವಾಗಲೇ ಈ ಬಗ್ಗೆ ಸಾಕಷ್ಟು ಸುದ್ದಿಯಾಗುತ್ತಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ಡಿಎ/ಡಿಆರ್ ದರ ಶೇ.4ರಷ್ಟು ಹೆಚ್ಚಳ ಘೋಷಣೆ!

ಸರ್ಕಾರಿ ನೌಕರರ ಫಿಟ್‌ಮೆಂಟ್ ಅಂಶದ ಇತ್ತೀಚಿನ ಸುದ್ದಿಯೆಂದರೆ, ಸರ್ಕಾರ ಇದೀಗ ಫಿಟ್ಮೆಂಟ್‌ ಪರಿಶೀಲಿಸಲು ನಿರ್ಧರಿಸಿರುವುದು.

ಪರಿಶೀಲನೆಯ ನಂತರ ಮುಂದಿನ ವರ್ಷದ ವೇಳೆಗೆ ಉದ್ಯೋಗಿಗಳಿಗೆ ಈ ಬಗ್ಗೆ ಒಳ್ಳೆಯ ಇನ್ನೊಂದು ಬಂಪರ್‌ ಸುದ್ದಿ ಸಿಗುವ ಸಾಧ್ಯತೆ ಸಾಕಷ್ಟಿದೆ.

ಈ ಬದಲಾವಣೆಯಿಂದ ನೌಕರರ ಮೂಲ ವೇತನದಲ್ಲಿ ಭಾರಿ ಹೆಚ್ಚಳವಾಗಲಿದೆ.

2023 ರಲ್ಲಿ ಫಿಟ್‌ಮೆಂಟ್ ಅಂಶಕ್ಕೆ ಸಂಬಂಧಿಸಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮೂಲಗಳು ಹೇಳಿವೆ.

ಫೆಬ್ರವರಿ 15 ರಂದು ರಾಜ್ಯ ಬಜೆಟ್ ಮಂಡನೆಯ ಸಂದರ್ಭದಲ್ಲಿ, ಪಶ್ಚಿಮ ಬಂಗಾಳ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಿ ನೌಕರರು ಮತ್ತು ನಿವೃತ್ತ ವ್ಯಕ್ತಿಗಳಿಗೆ ತುಟ್ಟಿಭತ್ಯೆಯಲ್ಲಿ 3 ಶೇಕಡಾ ಹೆಚ್ಚಳವನ್ನು ಘೋಷಿಸಿತ್ತು.

Published On: 06 April 2023, 03:48 PM English Summary: Another Bumper News for Government Employees: You Must Read This!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.