1. ಸುದ್ದಿಗಳು

ಅಮಿತಾಬ್ ಬಚ್ಚನ್ ಜೊತೆ ಮಗ ಅಭಿಷೇಕ್‌ ಬಚ್ಚನ್‌ಗೂ ಕೊರೊನಾ

Amitab Bachan
Amit Bachchan

ಬಾಲಿವುಡ್ ನ ಖ್ಯಾತ ನಟ, ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ಬಿಗ್ ಬಿ ಎಂದೇ ಹೆಸರಾದ ಅಮಿತಾಬ್ ಬಚ್ಚನರವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ

 ಇದರ ಬೆನ್ನಲ್ಲೇ ಅಮಿತಾಬ್ ಬಚ್ಚನ್ ರವರ ಮಗ ಅಭಿಷೇಕ್ ಬಚ್ಚನ್ ಅವರಿಗೂ ಕೂಡ  ಕೋವಿಡ್-19 ಪತ್ತೆಯಾಗಿದೆ.

ಅಮಿತಾಬ್ ಬಚ್ಚನ್ (77)  ಪುತ್ರ ಅಭಿಷೇಕ್ ಬಚ್ಚನ್ (44) ಅವರನ್ನು ಶನಿವಾರ ಸಂಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಮಿತಾಭ್ ಬಚ್ಚನ್ ರವರ ಆರೋಗ್ಯ ಸ್ಥಿರವಾಗಿದ್ದು ಸೋಂಕಿಗೆ ಸಂಬಂಧ ಪಟ್ಟ ಯಾವುದೇ ರೋಗ ಲಕ್ಷಣಗಳನ್ನು ಹೊಂದಿಲ್ಲ ಎಂದು ಖಚಿತಪಡಿಸಿದ್ದಾರೆ.

ಅಮಿತಾಬ್ ಬಚ್ಚನ್ ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮಗೆ ಕೊರೋನಾ ಪಾಸಿಟಿವ್ ಇರುವುದಾಗಿ, ಮತ್ತು ಕಳೆದ ಹತ್ತು ದಿನಗಳಿಂದ ತಮ್ಮ ಎಲ್ಲಾ ಕುಟುಂಬ ಸದಸ್ಯರು ತಮ್ಮ ಬಳಿ ಹೆಚ್ಚು ಕಾಲ ಕಳೆದಿರುವುದರಿಂದ ಎಲ್ಲರನ್ನೂ ಸ್ವಯಂ ಪ್ರೇರಿತರಾಗಿ COVID - 19 ಪರೀಕ್ಷೆಗೆ ಒಳಗಾಗಲು ಮನವಿ ಮಾಡಿದ್ದಾರೆ.

ಇದರ ಬೆನ್ನಲ್ಲೇ ಅಮಿತಾಬ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮಗೆ ಹಾಗೂ ತಮ್ಮ ತಂದೆಗೆ COVID - 19 ಗೆ ಸಂಬಂಧ ಪಟ್ಟಂತೆ ಅಲ್ಪ ರೋಗ ಲಕ್ಷಣಗಳು ಕಾಣಿಸಿರುವ ಕಾರಣ ಇಬ್ಬರು ಈಗಾಗಲೇ ಆಸ್ಪತ್ರೆಗೆ ದಾಖಲಾಗಿದ್ದೇವೆ. ಯಾವುದೇ ಕಾರಣಕ್ಕೂ ಅಭಿಮಾನಿಗಳು ಗಾಬರಿ ಆಗುವುದು ಬೇಡ ಎಂದು ಮನವಿ ಮಾಡಿದ್ದಾರೆ.

ಕುಟುಂಬ ಮೂಲಗಳ ಮಾಹಿತಿ ಪ್ರಕಾರ ಸದ್ಯ ಅಮಿತಾಬ್ ಬಚ್ಚನ್ ರವರನ್ನು ಮುಂಬೈನ ನಾನಾವತಿ ಆಸ್ಪತ್ರೆಯ ರೆಸ್ಪಿರೇಟರಿ ಐಸೋಲೇಶನ್ ಘಟಕದಲ್ಲಿ ಇರಿಸಲಾಗಿದೆ ಮತ್ತು ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

Published On: 12 July 2020, 12:28 PM English Summary: Amitabh Bachchan tests positive for coronavirus, admitted to hospital

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.