1. ಸುದ್ದಿಗಳು

ರೇಷ್ಮೆ ಗೂಡಿಗೆ ರಕ್ಷಣಾತ್ಮಕ ದರ ನೀಡಲು 10 ಕೋಟಿ ರೂಪಾಯಿ ಹಣ ಮಂಜೂರು: ಸಚಿವ ಡಾ. ನಾರಾಯಣಗೌಡ

Cotton
Cotton Protection

ಕೊರೋನಾ ಹಿನ್ನೆಲೆಯಲ್ಲಿ ರೇಷ್ಮೆ ಗೂಡಿನ ದರ ಕುಸಿದಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ ರೈತರ ರಕ್ಷಣೆಗಾಗಿ ಸರ್ಕಾರ ರೇಷ್ಮೆ ಗೂಡಿಗೆ ರಕ್ಷಣಾತ್ಮಕ ದರ ನೀಡಲು ತೀರ್ಮಾನಿಸಿ 10 ಕೋಟಿ ಮಂಜೂರು ಮಾಡಲಾಗಿದೆ ಎಂದು ತೋಟಗಾರಿಕಾ ಸಚಿವ ನಾರಾಯಣಗೌಡ ತಿಳಿಸಿದರು.

ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕೊರೋನಾ ಕಾರಣದಿಂದ ಮಾರುಕಟ್ಟೆ ಇಲ್ಲದೆ ರೇಷ್ಮೆ ಗೂಡಿನ ದರ ಕುಸಿದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ, ರೇಷ್ಮೆ ಬೆಳೆಗಾರರ ಹಿತರಕ್ಷಿಸುವ ಉದ್ದೇಶದಿಂದ ರಕ್ಷಣಾತ್ಮಕ ದರ ನೀಡಲು ತೀರ್ಮಾನಿಸಲಾಗಿದೆ ಎಂದರು.

ಸಂಕಷ್ಟದಲ್ಲಿರುವ ರೇಷ್ಮೆ ಬೆಳೆಗಾರರಿಗೆ ನೆರವಾಗಲು ಈ ಮೊದಲು ರೇಷ್ಮೆ ರೀಲರ್ಸ್‌ಗಳಿಗೆ ಅಡಮಾನ ಸಾಲದ ಮಿತಿಯನ್ನು  2 ಲಕ್ಷಕ್ಕೆ ಏರಿಸಿದ್ದಲ್ಲದೆ,  20 ಕೋಟಿ ಹಣವನ್ನೂ ನೀಡಲಾಗಿತ್ತು. ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ಗುಣಮಟ್ಟ ಆಧರಿಸಿ ದರ ನಿಗದಿ ಮಾಡಲಾಗುತ್ತದೆ. ಗುಣಮಟ್ಟಕ್ಕೆ ನಿಗದಿಪಡಿ ಸಿರುವ ದರ ಸಿಗದೆ ಇದ್ದಲ್ಲಿ, ಸರ್ಕಾರ ರಕ್ಷಣಾತ್ಮಕ ದರ ನೀಡಲಿದೆ.ಪ್ರತಿ ಕೆ.ಜಿ. ರೇಷ್ಮೆ ಗೂಡಿಗೆ 50 ರೂ. ಮೀರ ದಂತೆ ರಕ್ಷಣಾತ್ಮಕ ದರ ನೀಡಲು ಸರ್ಕಾರ ನಿರ್ಧಿರಿಸಿದೆ. ದರ ಕುಸಿತದಿಂದ ಕಂಗಾಲಾಗಿದ್ದ ರೈತರಿಗೆ ಇದು ಆಸರೆ ಆಗಲಿದೆ ಎಂದರು.

. ಕೆಲ ತಿಂಗಳ ಹಿಂದಿನಿಂದಲೇ ದರ ಕುಸಿತವಾಗಿರುವ ಕಾರಣ ಹಿಂದೆ ಆಗಿರುವ ನಷ್ವ ನ್ನೂ ರೈತರಿಗೆ ಭರಿಸಲು ತೀರ್ಮಾನಿಸಲಾಗಿದೆ. ರಕ್ಷಣಾತ್ಮಕ ದರವನ್ನು ಎಪ್ರಿಲ್ 1 ರಿಂದಲೇ ಅನ್ವಯ ವಾಗುವಂತೆ ನೀಡಲು ಸೂಚಿಸಲಾಗಿದೆ. ಮುಂದೆ ಯೂ ರೇಷ್ಮೆ ಬೆಳೆಗಾರರಿಗೆ ಸಮಸ್ಯೆ ಎದುರಾದಲ್ಲಿ ಅಗತ್ಯ ಕ್ರಮ ವಹಿಸಲು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಕ್ಷಣಾತ್ಮಕ ದರದ ಹಣವೂ ನೇರವಾಗಿ ರೈತರ ಖಾತೆಗೆ ಜಮಾ ಮಾಡಲು ಕ್ರಮ ವಹಿಸಲಾಗಿದೆ.ಇದರಿಂದ ಸರ್ಕಾರದ ನೆರವು ಮಧ್ಯವರ್ತಿಗಳ ಪಾಲಾಗುವುದು ತಪ್ಪಿದೆ. ಜೊತೆಗೆ  ರೇಷ್ಮೆ ಗೂಡಿನ ಧಾರಣೆ ಸುಧಾರಿಸುವವರೆಗೂ ರಕ್ಷಣಾತ್ಮಕ ದರ ನೀಡಲು ನಿರ್ಧರಿಸಲಾಗಿದೆ.

Published On: 12 July 2020, 12:24 PM English Summary: 10 crore rupees granted for paying defensive rate to silk nest protection

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.