Agriculture Income Tax!
ಸಂಸದೀಯ ಸಮಿತಿಯು ತನ್ನ 49ನೇ ವರದಿಯಲ್ಲಿ ಹೇಳಿದೆ. ಭಾರತದ ಮಹಾಲೇಖಪಾಲರ (Auditor and Comptroller General – ACG) ವರದಿಯನ್ನು ಆಧರಿಸಿದ ಸಂಸದೀಯ ಸಮಿತಿಯು ಈ ಶಿಫಾರಸುಗಳನ್ನು ಮಾಡಿದೆ. ಚಂಡೀಗಡದಲ್ಲಿ ಭೂಮಿ ಮಾರಾಟದಿಂದ ಸಿಕ್ಕಿರುವ ₹ 1.09 ಕೋಟಿ ಮೊತ್ತವನ್ನು ಕೃಷಿ ಆದಾಯ ಎಂದು ತೋರಿಸಿ ತೆರಿಗೆ ವಂಚಿಸಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿರಿ:
EPFO Big Update! ಯಾವ ದಿನ ಬರಲಿದೆ! Balance ಹಣ?
7th Pay commission! Indian Railways Employees! ಒಳ್ಳೆಯ ಸುದ್ದಿ!
Agriculture Income!
ಆದಾಯ ತೆರಿಗೆ (Income Tax) ವಂಚಿಸುತ್ತಿದ್ದವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ ದಿನಗಳಲ್ಲಿ ಅತಿಶ್ರೀಮಂತ ಕೃಷಿಕರು ತೆರಿಗೆ ಅಧಿಕಾರಿಗಳಿಂದ ಕಟ್ಟುನಿಟ್ಟಿನ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ. ಹಾಲಿ ಜಾರಿಯಲ್ಲಿರುವ ನಿಯಮಗಳು ಕೃಷಿ ಆದಾಯದ ಮೇಲೆ ಸಾಕಷ್ಟು ವಿನಾಯ್ತಿಗಳನ್ನು ಘೋಷಿಸುತ್ತವೆ.
ಇದನ್ನು ಓದಿರಿ:
PM ಕಿಸಾನ್ ರೈತರಿಗೆ ಬಿಗ್ ನ್ಯೂಸ್: OTP ಮೂಲಕ ಆಧಾರ್ ಕಾರ್ಡ್ e-KYC ರದ್ದು..
Big Announce! ರೈತರ income ಹೆಚ್ಚಿಸಲು 100 ಕೋಟಿ ಮೀಸಲು CM ಬೊಮ್ಮಾಯಿ ಅವರಿಂದ Big GIft, ಬಜೆಟ್‌ನಲ್ಲಿ ಘೋಷಣೆ
Income Tax!
ಆದಾಯ ತೆರಿಗೆ ಕಾಯ್ದೆ (1961)ರ 10 (1) ಪರಿಚ್ಛೇದದ ಅನ್ವಯ ಕೃಷಿ ಆದಾಯವು ತೆರಿಗೆ ವಿನಾಯ್ತಿ ಅರ್ಹವಾಗಿದೆ. ಕೃಷಿ ಭೂಮಿಯನ್ನು ಬಾಡಿಗೆಗೆ ಕೊಡುವುದು, ಕೃಷಿ ಭೂಮಿಯಿಂದ ಆದಾಯ ಗಳಿಸುವುದು ಅಥವಾ ಹಸ್ತಾಂತರಿಸುವುದರಿಂದ ಬರುವ ಆದಾಯವನ್ನು ಸಹ ಕೃಷಿ ಆದಾಯ ಎಂದೇ ಈ ಕಾಯ್ದೆಯ ಅನ್ವಯ ಪರಿಗಣಿಸಲಾಗುತ್ತದೆ.
ಉದ್ಯೋಗಿಗಳ ಕೊರತೆಯಿಂದ ಜನರಿಗೆ ಅಗುವ ತೊಂದರೆ ನಿವಾರಿಸಲೆಂದು ಆದಾಯ ತೆರಿಗೆ ಇಲಾಖೆಯು ಕೃಷಿ ಆದಾಯವು ₹ 10 ಲಕ್ಷ ಮೀರುವ ಪ್ರಕರಣಗಳಲ್ಲಿ ಸ್ವಯಂ ಅಸೆಸ್ಮೆಂಟ್ ಸಾಧ್ಯವಾಗುವ ವ್ಯವಸ್ಥೆಯೊಂದನ್ನು ರೂಪಿಸಿದೆ ಎಂದು ಸಂಸದೀಯ ಸಮಿತಿಗೆ ಹಣಕಾಸು ಇಲಾಖೆ ತಿಳಿಸಿತ್ತು.
ಇದನ್ನು ಓದಿರಿ:
ಗುಡ್ ನ್ಯೂಸ್: ಹೈನುಗಾರರಿಗೆ ಕ್ರೆಡಿಟ್ ಕಾರ್ಡ್! ದೇಶದಲ್ಲೆ ಮೊದಲು
ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ?
ಯಾರಿಗೆ ನಷ್ಟ?
ಬಹುಸಂಖ್ಯೆಯ ರಾಜಕಾರಿಣಿಗಳ ತಮ್ಮ ಅಕ್ರಮ ಆದಾಯವನ್ನು ಕೃಷಿ ಆದಾಯ ಎಂದು ಘೋಷಿಸಿ, ತೆರಿಗೆ ವಂಚಿಸುತ್ತಿದ್ದಾರೆ. ಭಾರತದ ಬಹುತೇಕ ರೈತರು ಬಡವರೇ ಆಗಿದ್ದು, ತೆರಿಗೆ ವಿನಾಯ್ತಿಗೆ ಅರ್ಹರಿದ್ದಾರೆ. ಆದರೆ ಶ್ರೀಮಂತ ರೈತರಿಗೆ ಏಕೆ ಈ ವಿನಾಯ್ತಿ ಸಿಗಬೇಕು ಎನ್ನುವುದು ಸಂಸದೀಯ ಸಮಿತಿ ಕೇಳುತ್ತಿರುವ ಪ್ರಶ್ನೆ. ಕೇವಲ ಶೇ 0.04ರಷ್ಟು ಶ್ರೀಮಂತ ರೈತ ಕುಟುಂಬಗಳು ಮತ್ತು ಕಂಪನಿಗಳ ಮೇಲೆ (ಶೇ 30ರ ನಿಯಮದ) ತೆರಿಗೆ ವಿಧಿಸಿದರೂ ದೇಶಕ್ಕೆ ₹ 50,000 ಕೋಟಿ ಆದಾಯ ಸಿಗುತ್ತದೆ ಎಂದು ಸಂಸದೀಯ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನಷ್ಟು ಓದಿರಿ:
6% ಬಡ್ಡಿ ದರದಲ್ಲಿ ಸ್ವಯಂ ಉದ್ಯೋಗಕ್ಕೆ ಸಾಲ ಪಡೆಯುವುದು ಹೇಗೆ..? ಯಾರು ಅರ್ಹರು..?
ಇನ್ಮುಂದೆ Aadhaar-Pan Link ಫ್ರೀ ಇಲ್ಲ..ಸ್ವಲ್ಪ ಯಾಮಾರಿದ್ರೆ 1 ಸಾವಿರ Fine..!
ಈ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ಮುಂದೆ Whatsapp ಕಾರ್ಯನಿರ್ವ ಹಿಸಲ್ಲ..! ಕಾರಣವೇನು.