News

weather ಇಂದು ನಾಳೆ ಕರ್ನಾಟಕದಲ್ಲಿ ಹೇಗಿರಲಿದೆ ಹವಾಮಾನ ?

31 January, 2024 2:22 PM IST By: Hitesh
ರಾಜ್ಯದಲ್ಲಿ ಇಂದು ನಾಳೆ ಹೇಗಿರಲಿದೆ ನೋಡಿ ಹವಾಮಾನ

ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಬಹುತೇಕ ಒಣಹವೆ ಮುಂದುವರಿದಿದೆ.

ಮಂಗಳವಾರವೂ ರಾಜ್ಯದ ಬಹುತೇಕ ಪ್ರದೇಶದಲ್ಲಿ ಒಣಹವೆ ಇರುವುದು ವರದಿಯಾಗಿತ್ತು.

ಇನ್ನು ಉಳಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ಮಳೆಯಾಗಿರುವುದು ವರದಿಯಾಗಿಲ್ಲ.

ಇನ್ನು ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಉಷ್ಣಾಂಶ 13.4 ಡಿಗ್ರಿ ಸೆಲ್ಸಿಯಸ್‌ ವಿಜಯಪುರದಲ್ಲಿ ದಾಖಲಾಗಿದೆ.

ಇನ್ನು ಮುಂದಿನ 24 ಗಂಟೆಯ ಅವಧಿ ಹಾಗೂ 48 ಗಂಟೆಯ ಅವಧಿಯಲ್ಲಿ ರಾಜ್ಯದಾದ್ಯಂತ ಬಹುತೇಕ ಒಣಹವೆ ಮುಂದುವರಿಯಲಿದೆ.

ಇನ್ನು ರಾಜ್ಯದಲ್ಲಿ ಗುಡುಗು ಮುನ್ನೆಚ್ಚರಿಕೆ ಇಲ್ಲ.

ಬೆಂಗಳೂರಿನಲ್ಲಿ ವಾತಾವರಣ

ಬೆಂಗಳೂರಿನಲ್ಲಿ ಮುಂದಿನ 24 ಗಂಟೆಯ ಅವಧಿಯಲ್ಲಿ ನಿರ್ಮಲ ಆಕಾಶವಿರುತ್ತದೆ.

ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಾಧ್ಯತೆ ಇದೆ.

ಇನ್ನು ಗರಿಷ್ಠ ಉಷ್ಣಾಂಶವು 30 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶವು 16 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಅದೇ ರೀತಿ ಮುಂದಿನ 48 ಗಂಟೆಯ ಅವಧಿಯಲ್ಲೂ ಬೆಂಗಳೂರಿನಲ್ಲಿ ಇದೇ ವಾತಾವರಣ ಮುಂದುವರಿಯಲಿದೆ

ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  

ಉತ್ತರ ಭಾರತದಲ್ಲಿ ಮುಂದುವರಿದ ಹವಾಮಾನ ವೈಪರೀತ್ಯ

ಇನ್ನು ಉತ್ತರ ಭಾರತದಲ್ಲಿ ಹವಾಮಾನ ವೈಪರೀತ್ಯ ಮುಂದುವರಿದಿದೆ. ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ

ಮೈಕೊರೆಯುವ ಚಳಿ ಮುಂದುವರಿದಿದ್ದು, ದೆಹಲಿಯ ಹಲವು 

ಭಾಗದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಉತ್ತರ ದೆಹಲಿ, ಗಾಜಿಯಾಬಾದ್‌, ಗೌತಮ್‌ನಗರ ಹಾಗೂ ದಕ್ಷಿಣ ದೆಹಲಿ ಸೇರಿದಂತೆ ವಿವಿಧ ಭಾಗದಲ್ಲಿ ಮಳೆಯಾಗಲಿದೆ

ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ದಕ್ಷಿಣ ಭಾರತದ ಹವಾಮಾನ ಮುನ್ಸೂಚನೆ

 ಕರ್ನಾಟಕವು ಸೇರಿದಂತೆ ದಕ್ಷಿಣ ಭಾರತದಲ್ಲಿ  ಭಿನ್ನವಾದ ಹವಾಮಾನ ವಾತಾವರಣ ಇದೆ.

ಕರ್ನಾಟಕದಲ್ಲಿ ಒಣಹವೆ ಹಾಗೂ ಅಲ್ಪ ಪ್ರಮಾಣದಲ್ಲಿ ಚಳಿ ವಾತಾವರಣ ಇದ್ದರೆ, ಕೇರಳದ

ಹಲವೆಡೆ ಅಲ್ಪ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಇನ್ನು ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ

ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನು ಉತ್ತರ ಭಾರತದ ಬಹುತೇಕ ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ

ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.