News

ಭಾರತದಲ್ಲಿ ರೋಟವೇಟರ್ ತಂತ್ರಜ್ಞಾನವನ್ನು ಬಳಸಿಕೊಂಡು ಎಲ್ಲಾ ಥರದ ಬೆಳೆಗಳಿಗೆ ಮತ್ತು ಮಣ್ಣಿನ ವಿಧಗಳಿಗೆ ಅನುಗುಣವಾಗಿ ವ್ಯವಸಾಯಕ್ಕೆ ಭೂಮಿಯನ್ನು ಸಿದ್ಧಗೊಳಿಸುವ ಪ್ರಕ್ರಿಯೆಯಲ್ಲಿ ಕ್ರಾಂತಿ ಮಾಡಲು ಮುಂದಾದ ಮಹೀಂದ್ರಾ

02 September, 2024 3:05 PM IST By: KJ Staff
Mahindra Supervator

ಭಾರತದಲ್ಲಿನ ದೀರ್ಘಕಾಲ ಬಾಳಿಕೆ ಬರುವ ಮತ್ತು ವಿಶ್ವಾಸಾರ್ಹ ರೋಟವೇಟರ್‌ ಶ್ರೇಣಿಗಳ ಮೂಲಕ ವ್ಯವಸಾಯಕ್ಕೆ ಭೂಮಿ ಸಿದ್ಧಗೊಳಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುವ ಉದ್ದೇಶವನ್ನು ಮಹೀಂದ್ರಾ ಕಂಪನಿ ಹೊಂದಿದೆ. ಹಗುರ ರೋಟವೇಟರ್ ಗಳಿಂದ ಹಿಡಿದು ಭಾರದ ರೋಟವೇಟರ್ ಗಳವರೆಗೆ ವಿವಿಧ ರೀತಿಯ ಕೃಷಿ ಚಟುವಟಿಕೆಗಳಿಗೆ ಹೊಂದಿಕೊಳ್ಳುವ ರೋಟವೇಟರ್ ಗಳನ್ನು ವಿನ್ಯಾಸ ಮಾಡಿ ಅಭಿವೃದ್ಧಿಪಡಿಸಲಾಗಿದೆ.

ಭಾರತದಲ್ಲಿ ತಯಾರಿಸಲಾದ ಮಹೀಂದ್ರಾ ರೋಟವೇಟರ್ಗಳು ಮಹೀಂದ್ರಾದ ವ್ಯಾಪಕ ನೆಟ್ವರ್ಕ್ ಗಳಲ್ಲಿ ಸುಲಭ ಫೈನಾನ್ಸ್ ಸೌಲಭ್ಯ, ವಾರಂಟಿ, ಸರ್ವೀಸ್ ಮತ್ತು ಬಿಡಿಭಾಗಗಳ ಜೊತೆ ದೊರೆಯುತ್ತದೆ.

ಪ್ರಗತಿಪರ ರೈತರಿಗಾಗಿ 'ಇಂಟೆಲಿಜೆಂಟ್ ರೋಟವೇಟರ್' ಗಳನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ.

ಚಂಡೀಗಢ, ಆಗಸ್ಟ್ 23, 2024: ಪ್ರಮಾಣದಲ್ಲಿ ವಿಶ್ವದ ಅತಿದೊಡ್ಡ ಟ್ರ್ಯಾಕ್ಟರ್ ತಯಾರಿಕ ಕಂಪನಿ ಎಂಬ ಹೆಗ್ಗಳಿಕೆ ಪಡೆದಿರುವ ಮಹೀಂದ್ರಾ ಫಾರ್ಮ್ ಈಕ್ವಿಪ್ ಮೆಂಟ್ ವಿಭಾಗವು ತನ್ನ ಸಮಗ್ರ ಶ್ರೇಣಿಯ ರೋಟವೇಟರ್ಗಳ ಮೂಲಕ ಭಾರತದ ಎಲ್ಲಾ ಥರದ ಬೆಳೆಗಳಿಗೆ ಮತ್ತು ಮಣ್ಣಿನ ವಿಧಗಳಿಗೆ ಅನುಗುಣವಾಗಿ ಭೂಮಿ ಸಿದ್ಧಗೊಳಿಸುವ ಪ್ರಕ್ರಿಯೆಯನ್ನು ಗಣನೀಯವಾಗಿ ಬದಲಿಸಲು, ಸುಲಭಗೊಳಿಸಲು ಮುಂದಾಗಿದೆ. ಮಹೀಂದ್ರಾ ಕಂಪನಿ ಭಾರತದ ದೇಶದ ಅತಿ ದೊಡ್ಡ ರೋಟವೇಟರ್ ತಯಾರಕರಲ್ಲಿ ಒಂದಾಗಿದ್ದು, ಕಂಪನಿಯ ಹೊಸ ಶ್ರೇಣಿಯ ಉತ್ಪನ್ನಗಳನ್ನು ಮಹೀಂದ್ರಾದ ಸಂಶೋಧನೆ ಮತ್ತು ಅಭಿವೃದ್ಧಿ ತಂಡವು ವಿಶ್ವದರ್ಜೆಯ ಮಾನದಂಡಗಳಿಗೆ ಅನುಗುಣವಾಗಿ ಪರೀಕ್ಷಿಸಿ ವಿನ್ಯಾಸಗೊಳಿಸಿದೆ. ದೇಶದ ಉದ್ದಗಲಕ್ಕೂ ಬೇರೆ ಬೇರೆ ರೀತಿಯ ಕೃಷಿ ಪರಿಸ್ಥಿತಿಗಳಲ್ಲಿಯೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ, ವಿಶ್ವಾಸಾರ್ಹ ಮತ್ತು ದೀರ್ಘ ಕಾಲ ಬಾಳಿಕೆ ಬರುವ ಉತ್ಪನ್ನ ಸಿದ್ಧಗೊಳಿಸಲು ಕಂಪನಿಯು ದೇಶದ ಕೃಷಿಕರ ಜೊತೆಗೆ ನಿಕಟವಾಗಿ ಕಾರ್ಯ ನಿರ್ವಹಿಸುತ್ತಿದೆ. ಮೇಡ್ ಇನ್ ಇಂಡಿಯಾ ಮಹೀಂದ್ರಾ ರೋಟವೇಟರ್ಗಳನ್ನು ಪಂಜಾಬ್ ನಭಾದಲ್ಲಿರುವ ಮಹೀಂದ್ರಾದ ಅತ್ಯುನ್ನತ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತದೆ.

ಬೆಳೆಯನ್ನು ಬೆಳೆಯಲು ಭೂಮಿಯನ್ನು ಸಿದ್ಧಗೊಳಿಸುವ ಪ್ರಕ್ರಿಯೆಯಗಳಿಗೆ ಅಗತ್ಯವಿರುವ ಸಮಯ ಮತ್ತು ಶ್ರಮವನ್ನು ಮಹೀಂದ್ರಾದ ರೋಟವೇಟರ್ಗಳು ಕಡಿಮೆ ಮಾಡುತ್ತವೆ. ಜೊತೆಗೆ ಅವುಗಳು ಬೀಜ ಬಿತ್ತುವ ಜಾಗದ ಗುಣಮಟ್ಟವನ್ನು ಹೆಚ್ಚಿಸುತ್ತವೆ. ಕಳೆ ನಿಯಂತ್ರಣ ಮಾಡುವುದರ ಜೊತೆಗೆ ಉಳಿಕೆ ಭಾಗಗಳನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತವೆ. ಜೊತೆಗೆ ಮಣ್ಣಿನ ಭೌತಿಕ ಸ್ಥಿತಿಯನ್ನು ಸುಧಾರಣೆ ಮಾಡುತ್ತವೆ.

ಮಹೀಂದ್ರಾ ರೋಟವೇಟರ್ಗಳು 15 ರಿಂದ 70 ಎಚ್ಪಿವರೆಗೆ ಸಾಮರ್ಥ್ಯ ಹೊಂದಿರುವ ಟ್ರ್ಯಾಕ್ಟರ್ಗಳ ಜೊತೆಗೆ ಮತ್ತು ವಿವಿಧ ರೀತಿಯ ಮಣ್ಣಿನ ಸ್ಥಿತಿಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತವೆ. ವ್ಯವಸಾಯಕ್ಕೆ ಬಳಸುವ ರೋಟವೇಟರ್ಗಳನ್ನು ಕಡಿಮೆ ಇಂಧನ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ಹೆಚ್ಚು ಬಾಳಿಕೆ ಬರುವಂತೆ ಸಿದ್ಧಪಡಿಸಲಾಗಿದೆ. ಮಹೀಂದ್ರಾ ರೋಟವೇಟರ್ಗಳ ಬ್ಲೇಡ್ಗಳನ್ನು ವಿಶೇಷವಾದ ಉಕ್ಕಿನ ಮಿಶ್ರಲೋಹ ಬ್ರಾಂಡ್ ಆಗಿರುವ 'ಬೋರೊ ಬ್ಲೇಡ್' ಬಳಸಿಕೊಂಡು ತಯಾರಿಸಲಾಗುತ್ತದೆ. ಹಾಗಾಗಿ ಇದನ್ನು ಕಠಿಣವಾದ ಮಣ್ಣಿನ ಗದ್ದೆಯಲ್ಲಿ ಬಳಸಿದರೆ ಕೂಡ ದೀರ್ಘ ಕಾಲ ಬಾಳಿಕೆ ಬರುತ್ತದೆ.

ಪ್ರಗತಿಪರ ಆಧುನಿಕ ರೈತರ ಅಭಿಲಾಷೆಗಳನ್ನು ಪೂರೈಸಲು ಮಹೀಂದ್ರಾ ಕಂಪನಿಯು 'ಇಂಟೆಲಿಜೆಂಟ್ ರೋಟವೇಟರ್' ಒದಗಿಸುತ್ತಿದ್ದು, ಅದರ ಜೊತೆ ಬ್ಲೂಟೂತ್ ತಂತ್ರಜ್ಞಾನದ ಸಹಾಯದಿಂದ ಆಪ್ ಮೂಲಕ ಕಾರ್ಯ ನಿರ್ವಹಿಸಬಹುದಾಗಿದೆ.

ಭಾರತದಲ್ಲಿ ವ್ಯವಸಾಯಕ್ಕೆ ಭೂಮಿ ಸಿದ್ಧಗೊಳಿಸುವ ಪ್ರಕ್ರಿಯೆಯನ್ನು ಯಾಂತ್ರೀಕರಿಸುವ ಮಹೀಂದ್ರಾದ ಉದ್ದೇಶದ ಕುರಿತು ಮಾತನಾಡಿದ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ ಫಾರ್ಮ್ ಈಕ್ವಿಪ್ ಮೆಂಟ್ ಸೆಕ್ಟರ್ ಅಧ್ಯಕ್ಷರಾದ ಶ್ರೀ ಹೇಮಂತ್ ಸಿಕ್ಕಾ ಅವರು, "ಆಧುನಿಕ ಕೃಷಿ ಉಪಕರಣ ಕ್ಷೇತ್ರವು ಅಭಿವೃದ್ಧಿ ಹೊಂದುತ್ತಿರುವಂತೆಯೇ ರೋಟವೇಟರ್ ಉತ್ಪನ್ನವು ಪ್ರಪಂಚದಾದ್ಯಂತ ಕೃಷಿ ಉತ್ಪಾದಕತೆ ಮತ್ತು ಕೆಲಸದ ದಕ್ಷತೆಯನ್ನು ಹೆಚ್ಚಿಸುತ್ತದೆ ಎಂಬುದು ಸಾಬೀತಾಗಿದೆ. ಕೃಷಿ ಪದ್ಧತಿಗಳನ್ನು ಬದಲಿಸುವ ಮತ್ತು ಜೀವನ ಗುಣಮಟ್ಟವನ್ನು ಉತ್ಕೃಷ್ಟಗೊಳಿಸುವ ಉದ್ದೇಶಕ್ಕೆ ಪೂರಕವಾಗಿ ಮಹೀಂದ್ರಾ ಸಂಸ್ಥೆಯು ಭಾರತಕ್ಕೆ ರೋಟವೇಟರ್ ತಂತ್ರಜ್ಞಾನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದೆ ಎಂದು ಹೇಳಿದರು.

ಮಹೀಂದ್ರಾ ಆಂಡ್ ಮಹೀಂದ್ರಾ ಲಿಮಿಟೆಡ್ ನ ಫಾರ್ಮ್ ಮೆಶಿನರಿ ವಿಭಾಗದ ಹಿರಿಯ ಉಪಾಧ್ಯಕ್ಷ ಮತ್ತು ಬಿಸಿನೆಸ್ ಹೆಡ್ ಶ್ರೀ ಕೈರಾಸ್ ವಖಾರಿಯಾ ಅವರು ಮಾತನಾಡಿ, "ಭಾರತದಲ್ಲಿ ವ್ಯವಸಾಯಕ್ಕೆ ಭೂಮಿಯನ್ನು ಸಿದ್ಧಗೊಳಿಸುವ ಪ್ರಕ್ರಿಯೆಯಲ್ಲಿ ಸಮಯ ಮತ್ತು ಶ್ರಮವನ್ನು ಗಣನೀಯವಾಗಿ ಕಡಿಮೆ ಮಾಡುವ ಗುರಿಯನ್ನು ಹೊಂದಿತ್ತು. ಆ ನಿಟ್ಟಿನಲ್ಲಿ ದಶಕಗಳ ಕಾಲ ರೈತರ ಜೊತೆ ನಿಕಟವಾಗಿ ಕಾರ್ಯ ನಿರ್ವಹಿಸಿ ರೋಟವೇಟರ್‌ಗಳ ಸಮಗ್ರ ಶ್ರೇಣಿಯನ್ನು ಅಭಿವೃದ್ಧಿಪಡಿಸಲಾಗಿದೆ. ಪಂಜಾಬ್‌ನ ನಭಾದಲ್ಲಿ ಮಹೀಂದ್ರಾ ಸಂಸ್ಥೆಯು ನುರಿತ ತಂತ್ರಜ್ಞರು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವಿಶ್ವ ದರ್ಜೆಯ ರೋಟವೇಟರ್ ಉತ್ಪಾದನಾ ಘಟಕವನ್ನು ನಿರ್ಮಿಸಿದೆ. ವಿಸ್ತಾರವಾದ ಮಾರಾಟ, ಸೇವೆ ಮತ್ತು ಬಿಡಿಭಾಗಗಳ ನೆಟ್‌ವರ್ಕ್ ಹೊಂದಿರುವ ಸಂಸ್ಥೆಯು ಎಲ್ಲಾ ಶ್ರೇಣಿಗಳ ಮೇಲೆಯೂ 2- ವರ್ಷದ ಸಮಗ್ರ ವಾರಂಟಿಯನ್ನು ಒದಗಿಸುತ್ತಿದ್ದು, ಆ ಮೂಲಕ ನಮ್ಮ ಉತ್ಪನ್ನಗಳನ್ನು ಬಳಸುವ ರೈತರ ಅನುಭವವನ್ನು ನಾವು ಮತ್ತಷ್ಟು ತೀವ್ರಗೊಳಿಸಲಿದ್ದೇವೆ” ಎಂದು ಹೇಳಿದರು

ಮಹೀಂದ್ರಾದ ರೋಟವೇಟರ್ಉತ್ಪನ್ನಗಳನ್ನು ಮಹೀಂದ್ರಾದ ಟ್ರ್ಯಾಕ್ಟರ್ ಡೀಲರ್ ನೆಟ್ವರ್ಕ್ ಮತ್ತು ಭಾರತದಾದ್ಯಂತ ಇರುವ ವಿಶೇಷ ವಿತರಕರ ಮೂಲಕ ಮಾರಾಟ ಮಾಡಲಾಗುತ್ತದೆ. ವಿಶೇಷವಾಗಿ ಮಹೀಂದ್ರಾ ಫೈನಾನ್ಸ್ ಸಂಸ್ಥೆಯು ರೈತರಿಗೆ ಉತ್ಪನ್ನಗಳನ್ನು ಖರೀದಿಸಲು ಅನುಕೂಲಕರ ಮತ್ತು ಆಕರ್ಷಕ ಸಾಲ ಸೌಲಭ್ಯಗಳನ್ನು ಒದಗಿಸುತ್ತದೆ.

ಇತರ ತಯಾರಕ ಕಂಪನಿಗಳು 6 ರಿಂದ 12 ತಿಂಗಳ ವಾರಂಟಿ ಒದಗಿಸುವುದಕ್ಕೆ ಹೋಲಿಸಿ ನೋಡಿದರೆ ಮಹೀಂದ್ರಾ ಸಂಸ್ಥೆಯು ರೈತರಿಗೆ ಹೆಚ್ಚು ಮನಃಶಾಂತಿ ಒದಗಿಸಲು ಉದ್ಯಮದಲ್ಲಿಯೇ ಹೆಚ್ಚು 2 ವರ್ಷಗಳ ವಾರಂಟಿಯನ್ನು ನೀಡುತ್ತದೆ.

ಭಾರತದ ಕೃಷಿ ಯಾಂತ್ರೀಕರಣದ ನಾಯಕರು

50ಕ್ಕೂ ಹೆಚ್ಚು ದೇಶಗಳಲ್ಲಿ ತಮ್ಮ ಅಸ್ತಿತ್ವವನ್ನು ಹೊಂದಿರುವ ಮಹೀಂದ್ರಾ ಸಂಸ್ಥೆಯು ಭಾರತದ ಕೃಷಿ ಪದ್ಧತಿಯನ್ನು ಯಾಂತ್ರೀಕರಣಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ಭಾರತ ಮತ್ತು ಪ್ರಪಂಚದಾದ್ಯಂತ ಇರುವ ರೈತರಿಗೆ ತಮ್ಮ ಕ್ರಾಂತಿಕಾರಕ ತಂತ್ರಜ್ಞಾನಗಳ ಮೂಲಕ ಸಮೃದ್ಧಿ ಮತ್ತು ನೆಮ್ಮದಿ ಒದಗಿಸುವ ಗುರಿಯನ್ನು ಮಹೀಂದ್ರಾ ಕಂಪನಿ ಹೊಂದಿದೆ.

'ಟ್ರಾನ್ಸ್ಫಾರ್ಮ್ ‘ಟ್ರಾನ್ಸ್ ಫಾರ್ಮ್ ಫಾರ್ಮಿಂಗ್, ಎನ್ರಿಚ್ ಲೈವ್ಸ್' (ಕೃಷಿ ಪದ್ಧತಿ ಬದಲಾಯಿಸುವುದು, ಬದುಕಿನ ಗುಣಮಟ್ಟ ಹೆಚ್ಚಿಸುವು) ಎಂಬ ತತ್ವಕ್ಕೆ ಬದ್ಧವಾಗಿ ಮುನ್ನಡೆಯುತ್ತಿರುವ ಪ್ರಮಾಣದಲ್ಲಿ ವಿಶ್ವದ ಅತಿದೊಡ್ಡ ಟ್ರ್ಯಾಕ್ಟರ್ ತಯಾರಕರು ಎಂಬ ಹೆಗ್ಗಳಿಕೆ ಹೊಂದಿರುವ ಮಹೀಂದ್ರಾ ಮಹೀಂದ್ರಾ ಫಾರ್ಮ್ ಈಕ್ವಿಪ್ ಮೆಂಟ್ ವಲಯವು ಜಗತ್ತಿನಾದ್ಯಂತ ಇರುವ ಮಾರುಕಟ್ಟೆಗಳಿಂದ ದೊರೆತ ಮಾಹಿತಿ ಮತ್ತು ಪಾಠಗಳನ್ನು ಬಳಸಿಕೊಂಡು ಬದಲಾಗುತ್ತಿರುವ ಕೃಷಿ ಕ್ಷೇತ್ರದ ಅಗತ್ಯಗಳನ್ನು ಪೂರೈಸುವ ಸಂಪೂರ್ಣ ಶ್ರೇಣಿಯ ಕೃಷಿ ಯಂತ್ರೋಪಕರಣ ಉತ್ಪನ್ನಗಳನ್ನು ಒದಗಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. (ಟ್ರ್ಯಾಕ್ಟರ್ ಗಳ ಹೊರತಾಗಿ) ಮಹೀಂದ್ರಾ ಕಂಪನಿಯು ಕಳೆದ ದಶಕದಲ್ಲಿ ಅತ್ಯುತ್ತಮ ಮತ್ತು ಅತ್ಯಾಧುನಿಕವಾದ ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು (ಸೆಂಟರ್ ಆಫ್ ಎಕ್ಸಲೆನ್ಸ್) ಸ್ಥಾಪಿಸಿದೆ. ಅತ್ಯಾಧುನಿಕ ಕೇಂದ್ರಗಳು ಪ್ರಪಂಚದಾದ್ಯಂತದ ಇರುವ ದೊಡ್ಡ ಭೂಹಿಡುವಳಿ ಫಾರ್ಮ್ಗಳಲ್ಲಿ ಬಳಸುವ ತಂತ್ರಜ್ಞಾನಗಳನ್ನು ಬಳಸಿಕೊಂಡು ಭಾರತ ಮತ್ತು ಪ್ರಪಂಚದಾದ್ಯಂತ ಇರುತ ಸಣ್ಣ ಭೂಹಿಡುವಳಿದಾರರಿಗೆ ಅಥವಾ ರೈತರಿಗೆ ಕೃಷಿಗೆ ಅವಶ್ಯವಾಗಿ ಬೇಕಾಗುವ ಉತ್ಪನ್ನಗಳನ್ನು ವಿನ್ಯಾಸ ಮತ್ತು ಅಭಿವೃದ್ಧಿಗೊಳಿಸಿ ಕೈಗೆಟುಕುವ ದರದಲ್ಲಿ ಮತ್ತು ಸುಲಭವಾಗಿ ದೊರಕುವಂತೆ ಮಾಡಲು ಕಾರ್ಯ ನಿರ್ವಹಿಸುತ್ತದೆ.