1. ಸುದ್ದಿಗಳು

ಬಹುನೀರಿಕ್ಷಿತ MFOI 2023 ಕೃಷಿ ಮಹಾಕುಂಭಕ್ಕೆ ಅದ್ದೂರಿ ಚಾಲನೆ

Maltesh
Maltesh

MFOI Awards 2023: ದೇಶದ ಖ್ಯಾತ ಕೃಷಿ ಮಾಧ್ಯಮ ಸಂಸ್ಥೆ ಕೃಷಿ ಜಾಗರಣ ಆಯೋಜಿಸುರುವ MFOI Awards 2023 ಸ್ಪಾನ್ಸರ್ಡ್‌ ಭೈ ಮಹೀಂದ್ರಾ ಟ್ರ್ಯಾಕ್ಟರ್ಸ್‌ ಕಾರ್ಯಕ್ರಮಕ್ಕೆ ಇಂದು ಅದ್ದೂರಿ ಚಾಲನೆ ದೊರೆತಿದೆ.

ಡಿಸೆಂಬರ್‌ 6 ರಿಂದ 8ರವರೆಗೆ ನಡೆಯುವ ಈ ಕಾರ್ಯಕ್ರಮವನ್ನು ಗುಜರಾತ್‌ ರಾಜ್ಯದ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ಅವರು ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಪ್ರಶಸ್ತಿ 2023 ಅನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಕೃಷಿ ಜಾಗರಣದ ಈ ವಿಶಿಷ್ಟ ಕಾರ್ಯವನ್ನು ಮೆಚ್ಚಿ ಮೆಚ್ಚುಗೆಯ ಮಾತುಗಳನ್ನಾಡಿದರು. ಈ ರೀತಿ ರೈತರನ್ನು ಒಂದೇ ವೇದಿಕೆಗೆ ತರುತ್ತಿರುವುದು ಶ್ಲಾಘನೀಯ, ಈ ಕಾರ್ಯಕ್ರಮಕ್ಕೆ ಬಂದಿದ್ದ ರೈತರು ರಾಸಾಯನಿಕ ಕೃಷಿ ಕೈಬಿಟ್ಟು ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ರಾಸಾಯನಿಕ ಗೊಬ್ಬರದಿಂದ ಭೂಮಿಯ ಪೌಷ್ಟಿಕಾಂಶದಲ್ಲಿ ಕೊರತೆ
ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿಯ ಪೋಷಕಾಂಶಗಳು ನಿರಂತರವಾಗಿ ಕಡಿಮೆಯಾಗುತ್ತಿದ್ದು, ಇಳುವರಿ ಸಾಮರ್ಥ್ಯವೂ ಕಡಿಮೆಯಾಗುತ್ತಿದೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ಭಾರತೀಯ ಕೃಷಿ ಭೂಮಿ ಇಂದು ವಿಷಮಯವಾಗಿದೆ ಎಂದರು. ಭೂಮಿಯಿಂದ ವಿಷವು ಜನರ ಬಾಯಿಗೆ ಆಹಾರದಿಂದ ಬರುತ್ತಿದೆ ಈ ಮಟ್ಟಕ್ಕೆ ಇಂದು ರಾಸಾಯನಿಕ ಕೃಷಿ ಭೂಮಿಯನ್ನು ಆವರಿಸಿಕೊಂಡಿದೆ. ಇದರಿಂದ ಜನರಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಪ್ರಸ್ತುತ ಆಹಾರವು ವಿಷಕಾರಿಯಾಗಿ ಪರಿಣಮಿಸಿದ್ದು, ಜನರು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದರು. ರೈತರು ತಮ್ಮ ಮತ್ತು ದೇಶದ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬೇಕಾದರೆ ಇಂದು ರಾಸಾಯನಿಕ ಕೃಷಿ ಬಿಟ್ಟು ನೈಸರ್ಗಿಕ ಕೃಷಿಯತ್ತ ಮುಖ ಮಾಡುವುದು ಒಳಿತು ಎಂದರು.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ

ಇನ್ನು ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ ಮಾಜಿ ಮುಖ್ಯ ನ್ಯಾಯಮೂರ್ತಿ ಮತ್ತು ಕೇರಳದ ರಾಜ್ಯಪಾಲರಾದ ಪಿ.ಸದಾಶಿವಂ, ಕೃಷಿ ಜಾಗರಣದ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಎಂ.ಸಿ. ಡೊಮಿನಿಕ್, ಕೃಷಿ ಜಾಗರಣ್ ಮತ್ತು ಅಗ್ರಿಕಲ್ಚರ್ ವರ್ಲ್ಡ್ ನಿರ್ದೇಶಕ ಶೈನಿ ಡೊಮಿನಿಕ್, ಡಾ. ಯುಎಸ್ ಗೌತಮ್ ಐಸಿಎಆರ್, ಡಾ. ನೀಲಂ ಪಟೇಲ್- ಹಿರಿಯ ಕೃಷಿ ಸಲಹೆಗಾರ, ನೀತಿ ಆಯೋಗ, ಮಹೇಶ್ ಕುಲಕರ್ಣಿ - ಹೆಡ್ ಮಾರ್ಕೆಟಿಂಗ್, ಮಹೀಂದ್ರ & ಮಹೀಂದ್ರ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಈ ವೇದಿಕೆಯಲ್ಲಿ ಭಾಗವಹಿಸಿದ್ದರು.

Published On: 06 December 2023, 01:50 PM English Summary: A grand launch for the much awaited MFOI 2023 Awards

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.