1. ಸುದ್ದಿಗಳು

8200 Smart Harvester ಸ್ವರಾಜ್‌ನಿಂದ ಅತ್ಯಾಧುನಿಕ 8200 ಸ್ಮಾರ್ಟ್ ಕೊಯ್ಲು ಯಂತ್ರ ಅಭಿವೃದ್ಧಿ!

Hitesh
Hitesh
ಸ್ವರಾಜ್‌ನಿಂದ ನೂತನ ಕೊಯ್ಲು ಯಂತ್ರ 8200 ಸ್ಮಾರ್ಟ್‌ ಕೊಯ್ಲು ಯಂತ್ರ ಅಭಿವೃದ್ಧಿ

ಸ್ವರಾಜ್‌ನಿಂದ ತನ್ನ ಕಂಪನಿಯು ಪಿತಂಪುರದ ಹೊಸ ಸ್ಥಾವರದಲ್ಲಿ ಸ್ವರಾಜ್ 8200 ಸ್ಮಾರ್ಟ್ ಹಾರ್ವೆಸ್ಟರ್ (ಕೊಯ್ಲು ಯಂತ್ರ)ವನ್ನು ಅಭಿವೃದ್ಧಿಪಡಿಸಿದ್ದು, ಇದು ರೈತರ ಉತ್ಪಾದನೆಯನ್ನು ಹೆಚ್ಚಿಸಿದೆ.

ಸ್ವರಾಜ್‌ ಅಭಿವೃದ್ಧಿಪಡಿಸಿರುವ ನೂತನ ಯಂತ್ರ

ಭಾರತದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೊಯ್ಲು ಯಂತ್ರವನ್ನು ಪರಿಚಯಿಸುವುದನ್ನು ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್‌ನ

ವಿಭಾಗವಾದ ಸ್ವರಾಜ್ ಟ್ರಾಕ್ಟರ್ಸ್ ಮುಂದುವರಿಸಿದೆ.  

ಹೊಸ ತಲೆಮಾರಿನ ಸ್ವರಾಜ್ 8200 ಸ್ಮಾರ್ಟ್ ಹಾರ್ವೆಸ್ಟರ್ ಅನ್ನು ಭಾರತೀಯ ರೈತರಿಗಾಗಿ ಬಿಡುಗಡೆ ಮಾಡಿದೆ. ಮುಂಗಾರು (ಖಾರೀಫ್‌) ಋತುವಿನ ಬೆಳೆಯನ್ನು

ಗಮನದಲ್ಲಿ ಇರಿಸಿಕೊಂಡು ಪರಿಚಯಿಸಲಾದ ಕೊಯ್ಲು ಯಂತ್ರವು ಭತ್ತ ಮತ್ತು ಸೋಯಾ ಬೀನ್‌ನಂತಹ ಬೆಳೆಗಳನ್ನು ಕೊಯ್ಲು

ಮಾಡುವಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ನೀಡಲಿದೆ ಎಂದು ಕಂಪನಿ ತಿಳಿಸಿದೆ.  

ಈ ಹಾರ್ವೆಸ್ಟರ್‌ನ ಯಶಸ್ವಿ ಆರಂಭದೊಂದಿಗೆ, ಮುಂಬರುವ ರಬಿ ಋತುವಿನಲ್ಲಿ ಈ ಉತ್ಪನ್ನಕ್ಕೆ ಆರೋಗ್ಯಕರ ಬೇಡಿಕೆಯನ್ನು ಕಂಪನಿಯು

ಎದುರು ನೋಡುತ್ತಿದೆ.

ಸ್ವರಾಜ್ 8200 ಸ್ಮಾರ್ಟ್ ಹಾರ್ವೆಸ್ಟರ್ ಮೊಹಾಲಿಯಲ್ಲಿರುವ ಸ್ವರಾಜ್‌ನ ಆರ್ & ಡಿ ಸೌಲಭ್ಯದಲ್ಲಿ ಹಲವು ವರ್ಷಗಳ ತಂತ್ರಜ್ಞಾನ ಅಭಿವೃದ್ಧಿಯ ಫಲಿತಾಂಶವಾಗಿದೆ.

ಯುರೋಪ್‌ನ ಫಿನ್‌ಲ್ಯಾಂಡ್‌ನಲ್ಲಿರುವ ಮಹೀಂದ್ರಾ & ಮಹೀಂದ್ರಾದ ಹಾರ್ವೆಸ್ಟರ್ ಆರ್ & ಡಿ ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗಿದೆ.

ಕಂಪನಿಯು ತನ್ನ ಹಾರ್ವೆಸ್ಟರ್ ಉತ್ಪನ್ನಗಳ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುವ   ನಿರೀಕ್ಷೆಯಲ್ಲಿ ಪಿತಂಪುರದಲ್ಲಿ ಮೀಸಲಾದ ಕೊಯ್ಲು ಘಟಕವನ್ನು ನಿರ್ಮಿಸಿದೆ.

ಘಟಕದಲ್ಲಿ ವಿವಿಧ ಯಂತ್ರಗಳ ಭಾಗಗಳನ್ನು ತಯಾರಿಸಲು ಅತ್ಯಾಧುನಿಕ ಯಂತ್ರೋಪಕರಣಗಳು, ಆಧುನಿಕ ಬಣ್ಣದ

ಸ್ಟೋರ್ಸ್‌, ಯಂತ್ರಕ್ಕೆ ಅವಶ್ಯವಿರುವ ಅಸೆಂಬ್ಲಿ ಲೈನ್‌ಗಳು ಮತ್ತು ಪರೀಕ್ಷಾ ಸೌಲಭ್ಯಗಳನ್ನು ಒಳಗೊಂಡಿದೆ.

ಉದ್ಯಮದ ಮೊದಲ ವೈಶಿಷ್ಟ್ಯಗಳು, ವರ್ಧಿತ ಬಾಳಿಕೆ ಮತ್ತು ಬಹು ಮತ್ತು ನಿರ್ದಿಷ್ಟ ಬೆಳೆ ಅಗತ್ಯಗಳಿಗಾಗಿ ಸಾಟಿಯಿಲ್ಲದ ಸೇವೆಯೊಂದಿಗೆ,

ಹೊಸ ಸ್ವರಾಜ್ 8200 ಸ್ಮಾರ್ಟ್ ಹಾರ್ವೆಸ್ಟರ್ ಸಮಗ್ರ ಕೊಯ್ಲಿಗೆ ಅನುಕೂಲವಾಗಲಿದೆ. ಆಧುನಿಕ ಕೊಯ್ಲು ವ್ಯವಸ್ಥೆಯ ಮೂಲಕ

ಉತ್ತಮ ಸಾಮರ್ಥ್ಯವನ್ನು ಸಹ ಇದು ನೀಡುತ್ತದೆ.

ಎಕರೆಗಳಲ್ಲಿ ಕಟಾವು, ನಿರ್ದಿಷ್ಟ ಸ್ಥಳ ಟ್ರ್ಯಾಕಿಂಗ್, ಎಷ್ಟು ದೂರ ಯಂತ್ರ ಕ್ರಮಿಸಿದೆ ಅಂದರೆ, ರಸ್ತೆ ಕಿಲೋಮೀಟರ್‌ನ ವಿವರ ಮತ್ತು ಇಂಧನ

ಬಳಕೆಯನ್ನು ಸ್ವರಾಜ್‌ನ ಇಂಟೆಲಿಜೆಂಟ್ ಹಾರ್ವೆಸ್ಟಿಂಗ್ ಸಿಸ್ಟಂನ ಮೂಲಕ ಗ್ರಾಹಕರು ತಿಳಿದುಕೊಳ್ಳಬಹುದಾಗಿದೆ.

ಅಲ್ಲದೇ  ಕಾರ್ಯಾಚರಣೆಯ ದಕ್ಷತೆ ಮತ್ತು ಗರಿಷ್ಠ ಲಾಭಗಳ ಕುರಿತು ನಿಖರವಾದ ಸಮಯದ ಮಾಹಿತಿಯನ್ನು ತಲುಪಿಸುತ್ತದೆ.

ಬ್ರ್ಯಾಂಡ್‌ನ ಪವರ್ ಮತ್ತು ವಿಶ್ವಾಸಾರ್ಹತೆಯ ಪರಂಪರೆಯನ್ನು ಮುಂದುವರಿಸಿರುವ ಸಂಸ್ಥೆ ಹೊಸ ಸ್ವರಾಜ್ 8200 ಸ್ಮಾರ್ಟ್ ಹಾರ್ವೆಸ್ಟರ್ ಅಭಿವೃದ್ಧಿಪಡಿಸಿದೆ.

ಇದು ಭಾರತದಲ್ಲೇ  ಅಭಿವೃದ್ಧಿಪಡಿಸಿದ ಮತ್ತು ತಯಾರಿಸಿದ ಎಂಜಿನ್‌ನಿಂದ ಚಾಲಿತವಾಗಿದೆ. ಅಲ್ಲದೇ ಅತ್ಯುತ್ತಮ ದರ್ಜೆಯ ಇಂಧನ

ಆರ್ಥಿಕತೆ ಮತ್ತು ಪರಿಸರ ಸ್ನೇಹಿ BS IV ಹೊರಸೂಸುವಿಕೆ ಮಾನದಂಡಗಳನ್ನು ಒದಗಿಸುತ್ತದೆ.

ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್‌ನ ಫಾರ್ಮ್ ಮೆಷಿನರಿ, ಹಿರಿಯ ಉಪಾಧ್ಯಕ್ಷ ಮತ್ತು ವ್ಯವಹಾರ ಮುಖ್ಯಸ್ಥ ಕೈರಾಸ್ ವಖಾರಿಯಾ

ಅವರು ಮಾತನಾಡಿ, “ಸ್ವರಾಜ್ ಭಾರತದಲ್ಲಿ ಕೊಯ್ಲು ತಂತ್ರಜ್ಞಾನದಲ್ಲಿ ಪ್ರವರ್ತಕವಾಗಿದೆ ಮತ್ತು ಹೊಸ 8200 ಸ್ಮಾರ್ಟ್ ಹಾರ್ವೆಸ್ಟರ್‌ಅನ್ನು

ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಿರುವುದಾಗಿ ಹೇಳಿದ್ದಾರೆ.

ಇದರ ಇಂಟೆಲಿಜೆಂಟ್ ಹಾರ್ವೆಸ್ಟಿಂಗ್ ಸಿಸ್ಟಮ್‌ನಿಂದಾಗಿ, ಕಂಪನಿಯ ಸೇವೆ ಮತ್ತು ಉತ್ಪನ್ನ ಬೆಂಬಲ ತಂಡವು ಹಾರ್ವೆಸ್ಟರ್‌ನ ಕಾರ್ಯಕ್ಷಮತೆ

ಮತ್ತು ಕಾರ್ಯದಕ್ಷತೆಯ 24x7 ಮೇಲ್ವಿಚಾರಣೆಯನ್ನು ಒದಗಿಸುತ್ತದೆ. ಇದು ಗ್ರಾಹಕರ ಅವಶ್ಯಕ್ಕೆ ಅತ್ಯುತ್ತಮವಾಗಿದ್ದು,

ಸಾಟಿಯಿಲ್ಲದ ಸೌಲಭ್ಯಗಳನ್ನು ಒಳಗೊಂಡಿದೆ ಎಂದಿದ್ದಾರೆ.  

ಕಂಪನಿಯು ಗ್ರಾಹಕರ ಬೇಡಿಕೆಯನ್ನು ಗಮನದಲ್ಲಿ ಇರಿಸಿಕೊಂಡು ಈ ಕೊಯ್ಲು ಯಂತ್ರವನ್ನು ಅಭಿವೃದ್ಧಿಪಡಿಸಿದೆ.

ಇನ್ನು ಸ್ವರಾಜ್ 8200 ಸ್ಮಾರ್ಟ್ ಹಾರ್ವೆಸ್ಟರ್ ಸ್ವರಾಜ್‌ನ ಪ್ಯಾನ್-ಇಂಡಿಯಾ ಟ್ರಾಕ್ಟರ್ ಡೀಲರ್ ನೆಟ್‌ವರ್ಕ್ ಮೂಲಕ ಲಭ್ಯವಿದೆ.

Published On: 14 December 2023, 04:48 PM English Summary: 8200 Smart Harvester Development by Swaraj!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.