1. ಸುದ್ದಿಗಳು

7 ನೇ ವೇತನ ಆಯೋಗ : ಸರ್ಕಾರದಿಂದ ಮಹತ್ವದ ಆದೇಶ

Maltesh
Maltesh
7th Pay Commission : An important order from Govt

ರಾಜ್ಯದ ಲಕ್ಷಾಂತರ ನೌಕಕರಿಗೆ ಇತ್ತೀಚಿಗೆ ಘೋಷಿಸಲಾದ 7 ನೇ ವೇತನ ಆಯೋಗದ ಕುರಿತು ಮಹತ್ವದ ಅಪಡೇಟ್‌ ಬಂದಿದೆ.

ಹೌದು ರಾಜ್ಯ ಸರ್ಕಾರಿ ನೌಕರರ ಪ್ರಸ್ತುತ ವೇತನವನ್ನ ಪರಿಷ್ಕರಿಸಲು ಹಾಗೂ ಇತ್ಯಾದಿ ಅಂಶಗಳನ್ನು ಗಮನಿಸಿ ಸುಧಾರಣೆ ಕೈಗೊಳ್ಳಲು ಇತ್ತೀಚಿಗೆ ಆಡಳಿತದಲ್ಲಿದ್ದ ಬೊಮ್ಮಾಯಿ ನೇತೃತ್ವದ BJP ಸರ್ಕಾರ 7 ನೇ ವೇತನ ಆಯೋಗವನ್ನು ಘೋಷಿಸಿತ್ತು. ಅದಾದ ಬಳಿಕ ರಿಟೈರ್ಡ್ IAS ಅಧಿಕಾರಿ ಸುಧಾಕರ್‌ ರಾವ್‌ ಅವರ ನೇತೃತ್ವದಲ್ಲಿ ಈ ಆಯೋಗವನ್ನು ರಚಿಸಿ ವರದಿ ಸಲ್ಲಿಸುವಂತೆ ಸೂಚಿಲಾಗಿತ್ತು. ಸದ್ಯ ಈ ವರದಿಯಲ್ಲಿ ಸ್ವಲ್ಪ ಬದಲಾವಣೆ ಆಗಿದೆ.

7ನೇ ವೇತನ ಆಯೋಗದ ವರದಿಯನ್ನು ಸಲ್ಲಿಸಲು ಅವಧಿಯನ್ನು 6 ತಿಂಗಳಿಗೆ ವಿಸ್ತರಿಸಲಾಗಿದೆ. ಈ ಕುರಿತು ರಾಜ್ಯಪಾಲರು ಆದೇಶ ಹೊರಡಿಸಿದ್ದು, 19 ಮೇ 2023 ರಿಂದ ಮುಂದಿನ 6 ತಿಂಗಳ ಅವಧಿಗೆ ಸಮಯಾವಕಾಶವನ್ನು ವಿಸ್ತರಿಸಲಾಗಿದೆ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಆದೇಶವನ್ನು ಪ್ರಕಟಿಸಿದ್ದಾರೆ.

ಈ ಮೊದಲು ವರದಿ ಸಲ್ಲಿಸಲು 6 ತಿಂಗಳ ಅವಧಿಯನ್ನು ನೀಡಲಾಗಿತ್ತ. ಸದ್ಯ ಆ ಅವಧುಯತನ್ನು ಇದೀಗ ವಿಸ್ತರಿಸಲಾಗಿದೆ. ಇತ್ತೀಚಿಗೆ ಕೇಂದ್ರ ಸರ್ಕಾರಿ ನೌಕರರು ಪಡೆಯುತ್ತಿರುವ ವೇತನಕ್ಕೆ ಸಮನಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನವನ್ನೂ ಪರಿಷ್ಕಸಬೇಕೆಂಬ ಬಹುಕಾಲದ ಬೇಡಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿ 7 ನೇ ವೇತನ ಆಯೋಗಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದ್ದರು.

Published On: 16 May 2023, 03:56 PM English Summary: 7th Pay Commission : An important order from Govt

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.