News

ಮಹತ್ವದ ನ್ಯೂಸ್‌: ಈ ತಿಂಗಳಲ್ಲಿ ಮತ್ತೆ ಹೆಚ್ಚಾಗಲಿದೆ ಸರ್ಕಾರಿ ನೌಕರರ ತುಟ್ಟಿ ಭತ್ಯೆ..ಅಂಕಿ ಅಂಶಗಳು ಹೇಳೊದೇನು..?

04 May, 2022 2:11 PM IST By: Maltesh
7th Pay Commission

7ನೇ ವೇತನ ಆಯೋಗ (7th Pay Commision): ಕೇಂದ್ರ ನೌಕರರಿಗೆ ಸಂತಸದ ಸುದ್ದಿ. ಎಐಸಿಪಿಐ (AICPI) ಸೂಚ್ಯಂಕವು ಸತತ ಎರಡು ತಿಂಗಳ ಕುಸಿತ ಕಂಡ ನಂತರ ಭಾರೀ ಜಿಗಿದಿದೆ. ಅದರ ನಂತರ ತುಟ್ಟಿಭತ್ಯೆ ಹೆಚ್ಚಾಗುವುದು ಖಚಿತ ಎನ್ನಲಾಗುತ್ತಿದೆ. ಮಾರ್ಚ್ 2022 ರ ಸೂಚ್ಯಂಕದ ಪ್ರಕಾರ ಅಂಕಿ ಅಂಶಗಳಲ್ಲಿ ಒಂದು ಪಾಯಿಂಟ್ ಜಿಗಿತ ಕಂಡಿದೆ. ಇದರೊಂದಿಗೆ ಮುಂದಿನ ಡಿ ಎ ಯಲ್ಲಿ ಶೇ.3 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಪ್ರಸ್ತುತ, ಏಪ್ರಿಲ್, ಹಾಗೂ  ಮೇ ಮತ್ತು ಜೂನ್ ತಿಂಗಳುಗಳಲ್ಲಿನ ಅಂಕಿ ಅಂಶಗಳು ಇನ್ನೂ ಬರಬೇಕಾಗಿದೆ. ಇದರಲ್ಲೂ ಜಿಗಿತ ಕಂಡುಬಂದರೆ, ತುಟ್ಟಿ ಭತ್ಯೆಯಲ್ಲಿ ಶೇ.4ರಷ್ಟು ಏರಿಕೆ  ಆಗುವುದು ಪಕ್ಕಾ ಎನ್ನಲಾಗುತ್ತಿದೆ.

Tractors Subsidy! ಸರ್ಕಾರದಿಂದ ನಿಮಗೆ 50% Tractor ಖರೀದಿಸಲು Subsidy ಸಿಗಲಿದೆ!

ಗುಡ್ ನ್ಯೂಸ್! e-Shram Portalನಲ್ಲಿ ನೋದಾಯಿಸಿಕೊಳ್ಳಿ ಮತ್ತು ಉದ್ಯೋಗ ಪಡೆಯಿರಿ!

ಮಾರ್ಚ ತಿಂಗಳಿನಲ್ಲಿ ಏರಿಕೆ..!

7ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ನೌಕರರಿಗೆ ಎರಡು ಬಾರಿ ತುಟ್ಟಿಭತ್ಯೆ ನೀಡಲಾಗುತ್ತದೆ. ಮೊದಲನೆ ಅವಧಿ ಜನವರಿಯಲ್ಲಿ ಮತ್ತು ಎರಡನೆ  ಅವಧಿ ಜುಲೈ ತಿಂಗಳಿನಲ್ಲಿ. ಜನವರಿ 2022 ಕ್ಕೆ, ಉದ್ಯೋಗಿಗಳು 3% DA ಹೆಚ್ಚಳದ ಗಿಫ್ಟ್‌ ಪಡೆದಿದ್ದಾರೆ. ಈಗ ಮುಂದಿನ ತುಟ್ಟಿಭತ್ಯೆಯನ್ನು ಜುಲೈನಲ್ಲಿ ಪರಿಷ್ಕರಿಸಲಾಗುವುದು ಎಂದು ವರದಿಗಳಾಗಿವೆ. ಈ ಸಮಯದಲ್ಲಿ, AICPI ನಲ್ಲಿ ಹಣದುಬ್ಬರ ಅಂಕಿ ಅಂಶಗಳನ್ನು. ಪ್ರಸ್ತುತ, ಕಾರ್ಮಿಕ ಸಚಿವಾಲಯದ ಸಂಖ್ಯೆಗಳು ಮೂರು ತಿಂಗಳಿನಿಂದ ಬಂದಿವೆ. ಜನವರಿಯಲ್ಲಿ 125.1 ಮತ್ತು ಫೆಬ್ರವರಿಯಲ್ಲಿ 125 ತಲುಪಿತ್ತು. ಅದೇ ಸಮಯದಲ್ಲಿ, ಸೂಚ್ಯಂಕವು ಮಾರ್ಚ ತಿಂಗಳಿನಲ್ಲಿ 126 ಕ್ಕೆ ಅಂದರೆ 1 ಪಾಯಿಂಟ್ ಏರಿಕೆ ಕಂಡಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಇದರ ಪ್ರಮಾಣ 125.4 ಆಗಿತ್ತು.

3 Lakh's Mangos? How To Grow? ಅದು ಕೂಡ Medicinal ಗುಣ ಹೊಂದಿರುವ ಮಾವು?

Russia-Ukraine War: ರಷ್ಯಾ-ಉಕ್ರೇನ್‌ ಯುದ್ಧ .. ಆತಂಕದಲ್ಲಿ ಟೀ ಬೆಳೆಗಾರರು

ಕಾರ್ಮಿಕ ಸಚಿವಾಲಯ ಅಂಕಿ ಅಂಶಗಳು ಹೇಳೊದೇನು..?

ಡಿಎ ಅಂಕಿ ಅಂಶಗಳು ಬರಲಾರಂಭಿಸಿವೆ. ಮುಂದಿನ ತುಟ್ಟಿ ಭತ್ಯೆಯು 3% ವರೆಗೆ ಹೆಚ್ಚಾಗಬಹುದು. ಮುಂದಿನ ಮೂರು ತಿಂಗಳಲ್ಲಿ ಸೂಚ್ಯಂಕವು ಏರಿಕೆಯನ್ನು ಮುಂದುವರೆಸಿದರೆ, D A 4% ಆಗಿರಬಹುದು. AICPI ಡೇಟಾವನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ದೇಶದ 88 ಕೈಗಾರಿಕಾ ಪ್ರಮುಖ ಕೇಂದ್ರಗಳಲ್ಲಿ ನೆಲೆಗೊಂಡಿರುವ 317 ಮಾರುಕಟ್ಟೆಗಳಿಂದ ಸಂಗ್ರಹಿಸಲಾದ ಚಿಲ್ಲರೆ ಬೆಲೆಗಳ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ. 88 ಕೇಂದ್ರಗಳು ಮತ್ತು ದೇಶಗಳಿಗೆ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ. ಪ್ರತಿ ತಿಂಗಳ ಕೊನೆಯ ಕೆಲಸದ ದಿನದಂದು ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಾಗುತ್ತದೆ.

ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ

TAFE ನಿಂದ ವಿಶ್ವ ದರ್ಜೆಯ ಹೆವಿ ಟ್ರ್ಯಾಕ್ಟರ್ ಪರಿಚಯ!

ಶೇ4 ಷ್ಟು ಹೆಚ್ಚಳವಾಗುವ ಸಂಭವ :

ಸದ್ಯ ಮಾರ್ಚ ತಿಂಗಳ ಅಂಕಿ ಅಂಶಗಳು ಹೊರ ಬಿದ್ದ ಕಾರಣ ಜುಲೈ 2022 ರಲ್ಲಿ ಮೂರು ಪ್ರತಿ ಶತದಷ್ಟು ಡಿಎ ಹೆಚ್ಚಿಸುವ ಸಾಧ್ಯತೆ  ಎನ್ನಲಾಗಿದೆ.  ಆದರೆ, ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಅಂಕಿ ಅಂಶಗಳು ಹೊರಬಂದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಮುಂಬರುವ ತಿಂಗಳುಗಳಲ್ಲಿ ಇದೇ ಪ್ರವೃತ್ತಿ ಮುಂದುವರಿದರೆ, ತುಟ್ಟಿಭತ್ಯೆ ಹೆಚ್ಚಳದ ಅಂಕಿ ಅಂಶವು ಶೇಕಡಾ 4 ಕ್ಕೆ ಏರಬಹುದು.

Navy : 12ನೇ ತರಗತಿ ಪಾಸ್ ಆದವರಿಗೆ ನೇಮಕಾತಿ..69,000 ವರೆಗೆ ಸಂಬಳ

ಗುಡ್‌ ನ್ಯೂಸ್‌: ಹೈನುಗಾರರಿಗೆ ಕ್ರೆಡಿಟ್‌ ಕಾರ್ಡ್‌! ದೇಶದಲ್ಲೆ ಮೊದಲು