1. ಸುದ್ದಿಗಳು

75 ಯುನಿಟ್‌ ಉಚಿತ ವಿದ್ಯುತ್‌ ಯೋಜನೆಗೆ ಸಿಎಂ ಬೊಮ್ಮಾಯಿ ಇಂದು ಚಾಲನೆ ನೀಡಲಿದ್ದಾರೆ

Maltesh
Maltesh
75 units of free electricity for SC and ST households

ರಾಜ್ಯದಲ್ಲಿನ 3 ಲಕ್ಷಕ್ಕೂ ಹೆಚ್ಚು SC ಹಾಗೂ ST ಕುಟುಂಬಗಳಿಗೆ 75 ಯುನಿಟ್‌ವರೆಗೆ ಫ್ರೀ ವಿದ್ಯುತ್‌ ನೀಡುವ ಹೊಸ ಯೋಜನೆಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಬಿಪಿಎಲ್ ಕಾರ್ಡ ಹೊಂದಿರುವ   ರಾಜ್ಯದ ಎಲ್ಲ ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬಗಳಿಗೆ 75 ಯುನಿಟ್‌ ಉಚಿತ ವಿದ್ಯುತ್‌ ನೀಡುವ ಸ್ಕೀಂ ಇದಾಗಿದೆ.

BESCOM, CHESCOM, GESCOM, HESCOM, MESCOM ಗಳು ಈಗಾಗಲೇ ಈ ಯೋಜನೆ ಕುರಿತಂತೆ ಎಲ್ಲರಿಗೂ ಅರಿವು ಮೂಡಿಸುವ ಕಾರ್ಯದಲ್ಲಿ ನಿರತವಾಗಿವೆ. ಅಷ್ಟೇ ಅಲ್ಲದೆ ಇದರ ಪ್ರಯೋಜನವನ್ನು ಪಡೆಯಲು ಫಲಾನುಭವಿಗಳು ಕೂಡ ಅಷ್ಟೇ ಕಾತುರದಿಂದ ಕಾಯುತ್ತಿದ್ದಾರೆ. ಈ ಯೋಜನೆ ಜುಲೈ ತಿಂಗಳಿಂದ ಬೆಸ್ಕಾಂನ 8 ಜಿಲ್ಲೆಯಲ್ಲಿ ಕಾರ್ಯಗತಗೊಂಡಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಟುಂಬಗಳು ತಾವು ಬಳಸುವ ವಿದ್ಯುತ್ ಪ್ರಮಾಣದಲ್ಲಿ 75 ಯೂನಿಟ್ ನವರೆಗೆ ಉಚಿತವಾಗಿ ಪಡೆಯಲಿದೆ.

ಈ ಸ್ಕೀಂ  ಕುರಿತು ರಾಜ್ಯದ ಎಲ್ಲಾ ESCOMಗಳು ಎಸ್ ಸಿ-ಎಸ್ ಟಿ ಗ್ರಾಹಕರಿಗೆ  ಮಾಹಿತಿ ತಿಳಿಸುತ್ತಿದ್ದು ವಿದ್ಯುತ್ ಮೀಟರ್ ಮಾಪಕರು ಮತ್ತು ಗ್ರಾಮ ವಿದ್ಯುತ್ ಪ್ರತಿನಿಧಿಗಳು ಮನೆ ಮನೆಗೆ ತೆರಳಿ ಈ ಯೋಜನೆಯ ಕುರಿತು ಹ್ಯಾಂಡ್‌ಬಿಲ್‌ಗಳನ್ನು ಹಂಚಿದ್ದಾರೆ.

ಇನ್ನು ಈ ಯೋಜನೆಯ ಲಾಭ ಫಲಾನುಭವಿಗಳಿಗೆ ಮೇ ತಿಂಗಳಿನಿಂದಲೇ ಲಭ್ಯವಾಗಲಿದೆ. ಇದಕ್ಕೆ ಸಂಬಂಧಟ್ಟ ಕಡತ ಇಂಧನ ಇಲಾಖೆಯಿಂದ ಹಣಕಾಸು ಇಲಾಖೆ(Finance Department)ಗೆ ರವಾನೆಯಾಗಿದೆ.

Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…

ಕಳೆದ ತಿಂಗಳು ಬಾಬು ಜಗಜೀವನ್ ರಾಂ ಅವರ 115 ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಂಗಳಿಗೆ 40 ಯುನಿಟ್‌ಗಳ ಉಚಿತ ವಿದ್ಯುತ್ ಅನ್ನು ತಿಂಗಳಿಗೆ 75 ಯೂನಿಟ್‌ಗಳಿಗೆ ಹೆಚ್ಚಿಸುವುದಾಗಿ ಘೋಷಿಸಿದ್ದರು.

ಘೋಷಣೆಯಾದ ಒಂದು ತಿಂಗಳೊಳಗೆ ಇಂಧನ ಇಲಾಖೆ ಪ್ರಸ್ತಾವನೆಯನ್ನು ತೆರವುಗೊಳಿಸಿ ಅಂತಿಮ ಅನುಮೋದನೆಗಾಗಿ ಹಣಕಾಸು ಇಲಾಖೆಗೆ ಕಳುಹಿಸಿದ್ದು, ಸಿಎಂ ಅವರೇ ನೇತೃತ್ವ ವಹಿಸಿದ್ದಾರೆ. ಇಂಧನ ಇಲಾಖೆಯ ಹಿರಿಯ ಮೂಲಗಳ ಪ್ರಕಾರ, ಈ ನಿರ್ಧಾರವು ಮೇ 2022 ರಿಂದ ಜಾರಿಗೆ ಬರಲಿದೆ.

ಇತ್ತೀಚಿನ ನಿರ್ಧಾರವು ಕುಟೀರ ಜ್ಯೋತಿ ಮತ್ತು ಭಾಗ್ಯಜ್ಯೋತಿ ಯೋಜನೆಗಳ ವ್ಯಾಪ್ತಿಗೆ ಬರುವ ಎಸ್‌ಸಿ ಮತ್ತು ಎಸ್‌ಟಿ ಕುಟುಂಬಗಳಿಗೆ 'ತಡೆರಹಿತ ವಿದ್ಯುತ್' ಒದಗಿಸುವ ಸಾಧ್ಯತೆಯಿದೆ.

Published On: 28 July 2022, 02:25 PM English Summary: 75 units of free electricity for SC and ST households

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.