1. ಸುದ್ದಿಗಳು

ಅಲ್ಲಮಪ್ರಭು ಜನ್ಮ ಸ್ಥಳ ಅಭಿವೃದ್ಧಿಗೆ 5 ಕೋಟಿ ಬಿಡುಗಡೆ: ಸಿಎಂ ಬೊಮ್ಮಾಯಿ

Kalmesh T
Kalmesh T
5 crore released for Allama Prabhu birth place development: CM Bommai

ಅಲ್ಲಮಪ್ರಭು ಜನ್ಮ ಸ್ಥಳದ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ದೇಶದಾದ್ಯಂತ 24 ಕೋಟಿ ದನ ಮತ್ತು ಎಮ್ಮೆಗಳಿಗೆ ಕಾಲು ಮತ್ತು ಬಾಯಿ ರೋಗದ ವಿರುದ್ಧ ಲಸಿಕೆ

ಉಡುತಡಿಯಲ್ಲಿ  “ಶಿವಶರಣೆ ಅಕ್ಕಮಹಾದೇವಿಯ 51 ಅಡಿ ಎತ್ತರದ  ಪುತ್ಥಳಿ ಅನಾವರಣ, ಅಕ್ಷರಧಾಮ ಮಾದರಿಯ ಯಾತ್ರಾ ಸ್ಥಳದ ಉದ್ಘಾಟನೆ ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯವನ್ನು ನೇರವೇರಿಸಿ ಅವರು ಮಾತನಾಡಿದರು.

ಮಹಿಳಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕಟ್ಟಡಕ್ಕೆ 10 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರಲ್ಲದೇ ಶಿವನಪಾದವನ್ನು 10.ಕೋಟಿ ರೂ.ಗಳ  ವೆಚ್ಚದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಮಾಡಲಾಗುವುದು ಎಂದರು.

ಜನರಿಗೆ  ಅಗತ್ಯವಿರುವ ಕೆಲಸಗಳು ಆಗಿವೆ. ಶಿಕಾರಿಪುರ ದೇವರ ನಾಡು. ಇದನ್ನು  ಕೃಷಿ,  ಶಿಕ್ಷಣ ಮತ್ತು ಆಧ್ಯಾತ್ಮಿಕ ವಲಯದಲ್ಲಿ   ಮಾದರಿ ತಾಲ್ಲೂಕು ಆಗಿಸಬೇಕು ಎಂಬ ಚಿಂತನೆಯಿಂದ ಈ ಎಲ್ಲಾ ಕೆಲಸಗಳನ್ನು ಮಾಡಲಾಗುವುದು.

PM Kisan 14th Installment release: ಪಿಎಂ ಕಿಸಾನ್‌ 14ನೇ ಕಂತಿನ ಕುರಿತು ಮಹತ್ವದ ಮಾಹಿತಿ!

ಸವಾಲುಗಳನ್ನು ಎದುರಿಸಲು ಶಕ್ತಿ ತುಂಬಿಸವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು. ತಂದೆ ಮಕ್ಕಳ ಸಂಬಂಧ ನಿರಂತರವಾಗಿರುತ್ತದೆ.

ಪ್ರೀತಿ, ವಿಶ್ವಾಸ, ರಾಜಕೀಯ ಮೀರಿದ  ಸಂಬಂಧಗಳು ಇದು.. ಬಿ.ಎಸ್.ಯಡಿಯೂರಪ್ಪ ಅವರು ಈ ಕ್ಷೇತ್ರಕ್ಕೆ ಮಾಡಿರುವ ಕಾರ್ಯ ಚಿರಸ್ಮರಣೀಯ ಎಂದರು.

ಶರಣ ಕುಲಕ್ಕೆ ಜೀವ ಕೊಟ್ಟ ಅದ್ಭುತ ಶಕ್ತಿ ಈ ಮಣ್ಣಿಗಿದೆ. ಇಲ್ಲಿಂದ ಹೊರಟ ಶರಣರು, ಕರ್ನಾಟಕದಲ್ಲಿ ಶರಣ ಸಂಸ್ಕೃತಿ, ವಿಚಾರಗಳನ್ನು ಕಾಯಕ ಸಮುದಾಯಗಳ ಜಾಗೃತಿ ಮೂಡಿಸಿ ವಿಚಾರಗಳಿಗೆ ತತ್ವಾದರ್ಶ ನೀಡಿರುವ ಕೇಂದ್ರ ಬಸವ ಕಲ್ಯಾಣದ ಅನುಭವ ಮಂಟಪ.

ಶಿಕಾರಿಪುರದಿಂದ  ಬಸವ ಕಲ್ಯಾಣದವರೆಗೆ ನಡೆದು ಬಂದ ದಾರಿ ಇದು.12 ನೇ ಶತಮಾನದಲ್ಲಿ ಬದುಕಿನ ದಾರಿ ತೋರಿದವರು ಶಿವಶರಣರು.

21 ನೇ ಶತಮಾನದಲ್ಲಿ 9 ಶತಮಾನಗಳ ನಂತರ ಶಿಕಾರಿಪುರ ವನ್ನು ಬಸವಕಲ್ಯಾಣಕ್ಕೆ ಜೋಡಿಸಿರುವ ಕೆಲಸವನ್ನು ಬಿ.ಎಸ್.ಯಡಿಯೂರಪ್ಪ ಅವರು ಮಾಡಿದ್ದಾರೆ ಎಂದರು.

ರಬ್ಬರ್ ಪ್ಲಾಂಟೇಶನ್ ಟ್ಯಾಪರ್‌ಗಳಿಗೆ ಶೇ.12 ರಷ್ಟು ಬೋನಸ್ ಹೆಚ್ಚಳ: ಸಿಎಂ ಬೊಮ್ಮಾಯಿ ಘೋಷಣೆ

ಅನ್ಯಾಯದ ವಿರುದ್ಧ ಹೋರಾಟ ಮಾಡಿದ ಅವರು ಎಂದೂ ಮುಖ್ಯ ಮಂತ್ರಿಯಾಗಬೇಕೆಂದು ಕನಸನ್ನು ಕಂಡವರಲ್ಲ.  ಶಿಕಾರಿಪುರದಲ್ಲಿ ನಿರಂತರವಾಗಿ ದಣಿವರಿಯದೆ ಕೆಲಸ ಮಾಡಿ ಜನರ ಪ್ರೀತಿ ವಿಶ್ವಾಸ  ಗಳಿಸಿದವರು.

ಅದಮ್ಯ ಆತ್ಮವಿಶ್ವಾಸ ಮತ್ತು ಧೈರ್ಯ ಅವರ ಮೂಲ ಮಂತ್ರ ಜಗತ್ತನ್ನೇ ಎದುರು ಹಾಕಿಕೊಳ್ಳಬಲ್ಲ ಕನ್ನಡದ ನಾಯಕ ಅವರು. ಕರ್ನಾಟಕ ಕಟ್ಟುವ ಕೆಲಸ ಮಾಡಿದ್ದು, ಉಡುತಡಿಯಿಂದ ಅಕ್ಕಮಹಾದೇವಿ ಶ್ರೀ ಶೈಲದ ಮಲ್ಲಿಕಾರ್ಜುನ ನವರೆಗೆ ಸಾರಿದ್ದ ಸಂದೇಶವನ್ನು ಮುಂದಿನ ಜನಾಂಗಕ್ಕೆ ತಿಳಿಹೇಳುವ ಪುಣ್ಯಾತ್ಮರಾಗಿ ಯಡಿಯೂರಪ್ಪ ಇದ್ದಾರೆ.

ಬಸವ ಕಲ್ಯಾಣ ಕ್ಕೆ 600 ಕೋಟಿ ರೂ.ಗಳನ್ನು ಒದಗಿಸಿದರು. ಮುಂದಿನ 10 ಪೀಳಿಗೆ ಅವರನ್ನು ಸ್ಮರಿಸುತ್ತಾರೆ. 12 ನೇ ಶತಮಾನದ ಕ್ರಾಂತಿಯನ್ನು ಮುಂದುವರೆಸಿಕೊಂಡು ಹೋಗುವ ಪುಣ್ಯದ ಕೆಲಸವನ್ನು ಕ್ರಾಂತಿ ರೂಪದಲ್ಲಿ ಮಾಡಿದ್ದು ಯಡಿಯೂರಪ್ಪ ಅವರು.

Published On: 18 March 2023, 01:12 PM English Summary: 5 crore released for Allama Prabhu birth place development: CM Bommai

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.