1. ಸುದ್ದಿಗಳು

ಗುಡ್‌ನ್ಯೂಸ್‌: ಹಿಂಬಾಕಿ ಇದ್ದರೂ ಸಿಗುತ್ತೆ  200 ಯುನಿಟ್‌ ಫ್ರೀ ವಿದ್ಯುತ್‌!

Maltesh
Maltesh
200 Unit Free electricity Big update for customers

ಹಿಂಬಾಕಿ ಇದ್ದರೂ ಕೂಡ ಫಲಾನುಭವಿಗಳಿಗೆ ಗೃಹಜ್ಯೀತಿಯ ಪ್ರಯೋಜನ ದೊರಕಲಿದೆ ಎಂದು ಇಂಧನ ಇಲಾಖೆ ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ. ಹೌದು, ಗ್ರಾಹಕರು ವಿದ್ಯುತ್ ಬಿಲ್‌ನ ಹಿಂಬಾಕಿ ಉಳಿಸಿಕೊಂಡಿದ್ದರೂ ಅವರಿಗೆ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಸಿಗಲಿದೆ.

ಹಿಂಬಾಕಿಯನ್ನು ಸೆಪ್ಟೆಂಬರ್‌30 ರೊಳಗೆ ಪಾವತಿಸಬೇಕು ಇದಕ್ಕಾಗಿ ಬರೋಬ್ಬರಿ ಮೂರು ತಿಂಗಳು ಕಾಲಾವಕಾಶವನ್ನು ನೀಡಲಾಗಿದೆ. ಸದ್ಯ ಗ್ರಾಹಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದು.

ವಿಶೇಷ ಪ್ರಕಟಣೆಯಲ್ಲೇನಿದೆ..?

ಗ್ರಾಹಕರು ವಿದ್ಯುತ್ ಬಿಲ್‌ನ ಹಿಂಬಾಕಿ ಉಳಿಸಿಕೊಂಡಿದ್ದರೂ ಅವರಿಗೆ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಸಿಗಲಿದೆ. ಹಿಂಬಾಕಿಯನ್ನು ಸೆ.30 ರೊಳಗೆ ಪಾವತಿಸಬೇಕು (ಮೂರು ತಿಂಗಳು ಕಾಲಾವಕಾಶ ಇದೆ).

ನೀವು ಜುಲೈ 25 ರೊಳಗೆ ಯೋಜನೆಗೆ ನೋಂದಾಯಿಸಿಕೊಂಡಲ್ಲಿ, ಆಗಸ್ಟ್ ತಿಂಗಳ ಬಿಲ್'ನಲ್ಲಿ ಯೋಜನೆಯ ಪ್ರಯೋಜನ ದೊರಕಲಿದೆ. ಹಾಗೆಯೇ, ಜುಲೈ 25 ರಿಂದ ಆಗಸ್ಟ್ 25 ರೊಳಗೆ ನೋಂದಾಯಿಸಿಕೊಂಡಲ್ಲಿ, ಸೆಪ್ಟೆಂಬರ್ ತಿಂಗಳ ಬಿಲ್'ನಲ್ಲಿ ಯೋಜನೆಯ ಪ್ರಯೋಜನ ದೊರೆಯಲಿದೆ (ಬಿಲ್ಲಿಂಗ್ ಅವಧಿ ಪ್ರತಿ ತಿಂಗಳ 25 ನೇ ತಾರೀಖಿನಿಂದ ಮುಂದಿನ ತಿಂಗಳ 25 ತಾರೀಖಿನವರೆಗೆ).

ಈ ಪ್ರಯೋಜನ ಪಡೆಯಲು ನಿಮ್ಮ ವಿದ್ಯುತ್ ಬಳಕೆಯ ಸರಾಸರಿ 200 ಯೂನಿಟ್ ಮೀರಿರಬಾರದು.

ಗೃಹ ಜ್ಯೋತಿ ಯೋಜನೆಗೆ ಗ್ರಾಹಕರು ಜುಲೈ 25 ರ ನಂತರ ಅರ್ಜಿ ಸಲ್ಲಿಸಿದರೆ ಅವರಿಗೆ ಆಗಸ್ಟ್ ತಿಂಗಳಲ್ಲಿ ಬರುವ ಬಿಲ್'ನಲ್ಲಿ ಪ್ರಯೋಜನ ಸಿಗುವುದಿಲ್ಲ. ಆದರೆ ಯೋಜನೆಯ ಪ್ರಯೋಜನವನ್ನು ಅವರು ಸೆಪ್ಟೆಂಬರ್ ತಿಂಗಳಲ್ಲಿ ಪಡೆಯಲಿದ್ದಾರೆ.

ಯೋಜನೆಯ ನೋಂದಣಿಗೆ ವಿಳಂಬ ಬೇಡ. ಪ್ರಯೋಜನ ಪಡೆಯಲು ಇಂದೇ ನೋಂದಾಯಿಸಿಕೊಳ್ಳಿ.

ದಾಖಲೆಯ 70 ಲಕ್ಷ ಅರ್ಜಿ ಸಲ್ಲಿಕೆ

ಗೃಹ ಜ್ಯೋತಿ ಅರ್ಜಿಗೆ ನೋಂದಣಿ ಆರಂಭ ಮಾಡಿದಾಗಿನಿಂದ ದಾಖಲೆಯ ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆಗಳು ಆರಂಭವಾಗಿದೆ. ಸಾರ್ವಜನಿಕರು ಗ್ರಾಮಾಒನ್‌, ಬೆಂಗಳುರು ಒನ್‌ ಸೇರಿದಂತೆ ಹತ್ತಿರದ CSC ಕೇಂದ್ರಗಳಿಗೆ ತೆರಳಿ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕಳೆದ  ದಿನಗಳಲ್ಲಿ ಗೃಹಜ್ಯೋತಿ ಯೋಜನೆಗೆ ಬರೋಬ್ಬರಿ 70 ಲಕ್ಷ ಜನ ನೋಂದಣಿ ಮಾಡಿಕೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ.  ಇದರಲಗಲಿ ಬೆಸ್ಕಾಂ ವ್ಯಾಪ್ತಿಯಲ್ಲಷ್ಟೇ 25 ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ.

ಇನ್ನು ನೀವು ಈ ಮೊದಲು ಸರ್ಕಾರದ ಇನ್ನಿತರ ಯೋಜನೆಗಳಾದ ʻʻಕುಟೀರ ಜ್ಯೋತಿʻʻ, ʻʻಭಾಗ್ಯ ಜ್ಯೋತಿʻʻ, ʻʻಅಮೃತ ಜ್ಯೋತಿʻʻ, ಅಡಿಯಲ್ಲಿ ನೋಂದಾಯಿಸಿಕೊಂಡಿದ್ದರೆ ಅವರ ಕೂಡ ಹೊಸದಾಗಿ ಮತ್ತೇ ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

ಸೇವಾ ಸಿಂಧು ಹೆಸರಿನ ನಕಲಿ ಆ್ಯಪ್‌ಗಳ ಬಗ್ಗೆ ಎಚ್ಚರ ವಹಿಸಿ.

ಗ್ರಾಹಕರೇ, ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಇ- ಗವರ್ನೆನ್ಸ್ ಇಲಾಖೆ, ಸೇವಾ ಸಿಂಧು ಹೆಸರಿನಲ್ಲಿ ಯಾವುದೇ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿರುವುದಿಲ್ಲ. ನಕಲಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳದೇ ಸೇವಾ ಸಿಂಧುವಿನ ಅಧಿಕೃತ ಪೋರ್ಟಲ್‌ನ ಮೂಲಕ ನೋಂದಣಿ ಮಾಡಿಕೊಳ್ಳಿ.

Published On: 03 July 2023, 10:53 AM English Summary: 200 Unit Free electricity Big update for customers

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.