1. ಸುದ್ದಿಗಳು

ATM ಹಣ ನಿರಾಕರಿಸಿದ HDFC ಬ್ಯಾಂಕ್‌ಗೆ 2. 24 ಲಕ್ಷ ಭಾರೀ ದಂಡ!

Hitesh
Hitesh
2. 24 lakh heavy fine for HDFC Bank for denying ATM money!

ATM ಹಣ ನಿರಾಕರಿಸಿದ ಕಾರಣಕ್ಕಾಗಿ HDFC ಬ್ಯಾಂಕ್‌ಗೆ ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚು ದಂಡವನ್ನು ವಿಧಿಸಲಾಗಿದೆ.

ಹುಬ್ಬಳ್ಳಿಯ ಅಂಚಟಗೇರಿ ನಿವಾಸಿ ಮಹ್ಮದರಫಕತ್ ಅನಸಾರಿ ಎಂಬವರು ಬಿಹಾರ ರಾಜ್ಯದ ಮುಝಫರಪುರ್‌ಗೆ ಪ್ರವಾಸಕ್ಕೆ ತೆರಳಿದಾಗ ಅಲ್ಲಿನ HDFC ಬ್ಯಾಂಕಿನ ATMನಲ್ಲಿ 10 ಸಾವಿರ ರೂಪಾಯಿಯಂತೆ ಎರಡು ಬಾರಿ ಹಣ ತೆಗೆಯಲು ತನ್ನ ATM  ಕಾರ್ಡ್‌ ಬಳಸಿದ್ದರು.ಆದರೆ ATMನಿಂದ ಹಣ ಬರದೇ ಇದ್ದರೂ ಅವರ ಉಳಿತಾಯ ಖಾತೆಯಿಂದ 20 ಸಾವಿರ ರೂಪಾಯಿ ಡೆಬಿಟ್ ಆಗಿತ್ತು. ಈ ಬಗ್ಗೆ ದೂರುದಾರ ತನ್ನ ಉಳಿತಾಯ ಖಾತೆ ಇರುವ ಹುಬ್ಬಳ್ಳಿಯ ಅಂಚಟಗೇರಿಯ ಯುನಿಯನ್ ಬ್ಯಾಂಕ್‍ಗೆ ದೂರು ನೀಡಿ ಎ.ಟಿ.ಎಮ್.ತಪ್ಪನ್ನು ಸರಿಪಡಿಸಲು ಕೋರಿದ್ದರು.

86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಸಿದ್ಧತೆ!

ಆ ದೂರಿನ ಆಧಾರದ ಮೇಲೆ ಯುನಿಯನ್ ಬ್ಯಾಂಕಿನವರು ಎ.ಟಿ.ಎಮ್. ದೋಷದಿಂದ ಬಾರದ 20 ಸಾವಿರ ರೂಪಾಯಿಗಳನ್ನು ತಕ್ಷಣ ದೂರುದಾರರ ಖಾತೆಗೆ ಜಮಾ ಮಾಡುವಂತೆ ಎಚ್.ಡಿ.ಎಫ್‌.ಸಿ. ಬ್ಯಾಂಕ್‍ಗೆ ಪತ್ರ ವ್ಯವಹಾರ ಮಾಡಿದ್ದರು. ಆದರೂ ಬ್ಯಾಂಕಿನವರು ರೂ.20 ಸಾವಿರ ಹಣ ತನ್ನ ಖಾತೆಗೆ ಜಮಾ ಮಾಡಿಲ್ಲವಾದ್ದರಿಂದ ತನಗೆ ತೊಂದರೆಯಾಗಿ ಆ ಬ್ಯಾಂಕುಗಳಿಂದ ತನಗೆ ಸೇವಾ ನ್ಯೂನ್ಯತೆ ಆಗಿದೆ ಅಂತಾ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ಸಲ್ಲಿಸಿದ್ದರು.  

Pm Kisan| ಪಿ.ಎಂ ಕಿಸಾನ್‌ ಅಪ್ಡೇಟ್‌: 13ನೇ ಕಂತಿಗಾಗಿ ಕಾಯುತ್ತಿರುವ ಕೋಟಿಗಟ್ಟಲೆ ರೈತರಿಗೆ ಮಹತ್ವದ ಮಾಹಿತಿ  

ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ   ಎಚ್.ಡಿ.ಎಫ್.ಸಿ. ಬ್ಯಾಂಕಿನಎ.ಟಿ.ಎಮ್.ಯಂತ್ರದ ದೋಷದಿಂದ ದೂರುದಾರನಿಗೆ ಹಣ ಬಂದಿಲ್ಲ. ಕಾರಣ ಆ ಹಣ ಸದರಿ ಬ್ಯಾಂಕಿನಲ್ಲಿಯೇ ಉಳಿದಿತ್ತು.

ಈ ಬಗ್ಗೆ ಯುನಿಯನ್ ಬ್ಯಾಂಕ್ ಶಾಖಾ ವ್ಯವಸ್ಥಾಪಕರು 2019ರಲ್ಲಿ ಎರಡು ಬಾರಿ ಎಪ್.ಟಿ.ಎಸ್. ಸೆಂಟರ್‌ನಿಂದ ಎಚ್.ಡಿ.ಎಫ್‌ .ಸಿ.ಬ್ಯಾಂಕ್‍ನವರನ್ನು ಸಂಪರ್ಕಿಸಿ ದೂರುದಾರನ ಹಣವನ್ನು ಅವನ ಖಾತೆಗೆ ಹಿಂದಿರುಗಿಸಲು ಕೋರಿದ್ದರು. ಆದರೂ ಎಚ್.ಡಿ.ಎಫ್.ಸಿ ಬ್ಯಾಂಕಿನವರು ಘಟನೆ ನಡೆದ ದಿ:17/01/2019 ರಿಂದ ಈ ವರೆಗೆ ಸುಮಾರು 4 ವರ್ಷ ದೂರುದಾರನ ಖಾತೆಗೆ ಹಣ ಜಮಾ ಮಾಡಿರಲಿಲ್ಲ.

ಈ ರೀತಿ ಎ.ಟಿ.ಎಂ ದೋಷದಿಂದ ಹಣ ಬಾರದ ಪ್ರಸಂಗಗಳಲ್ಲಿ 6 ದಿವಸದೊಳಗಾಗಿ ಸಂಬಂಧಿಸಿದ ಬ್ಯಾಂಕಿನವರು ಕ್ರಮ ಕೈಗೊಂಡು ಗ್ರಾಹಕನ ಖಾತೆಗೆ ತಕ್ಷಣ ಹಣ ಜಮಾ ಮಾಡಬೇಕು. ತಪ್ಪಿದ್ದಲ್ಲಿ 7ನೇ ದಿನದಿಂದ ಜಮಾ ಆಗುವವರೆಗೆ ಪ್ರತಿ ದಿವಸ ರೂ.100/-ಗಳ ಪೆನಾಲ್ಟಿ ಕೊಡಬೇಕು ಎಂದು ಆರ್.ಬಿ.ಐ ಸುತ್ತೋಲೆ ಇದ್ದರೂ ದಿ:17/01/2019 ರಿಂದ ಈವರೆಗೆ ಸುಮಾರು 4 ವರ್ಷಗಳ ಕಾಲ ಹಣ ದೂರುದಾರನ ಖಾತೆಗೆ ಜಮಾ ಮಾಡದೇ ಸದರಿ ಬ್ಯಾಂಕಿನ ಸಿಬ್ಬಂದಿ ಕರ್ತವ್ಯ ಲೋಪ ಎಸಗಿ ಸೇವಾ ನ್ಯೂನ್ಯತೆ ಮಾಡಿದ್ದಾರೆ.

ಕೋಲ್ಡ್‌ ಸ್ಟೋರೇಜ್‌ ಘಟಕದ ಕೊರತೆ: ಕರ್ನಾಟಕದ ಒಣದ್ರಾಕ್ಷಿಯಿಂದ ಮಹಾರಾಷ್ಟ್ರಕ್ಕೆ ಲಾಭ!

ತನ್ನ ತೀರ್ಪಿನಲ್ಲಿ ಜಿಲ್ಲಾ ಗ್ರಾಹಕರ ಆಯೋಗ ಅಭಿಪ್ರಾಯಪಟ್ಟಿದೆ. ದಿ:17/01/2019 ರಂದು ಈ ಘಟನೆ ನಡೆದಿದ್ದು ಅದು ಆದ 6 ದಿವಸದ ನಂತರ ದಿ:23/01/2019 ರಿಂದ ಈ ತೀರ್ಪು ನೀಡಿದ ದಿ:03/01/2023ರ ವರೆಗೆ 1441 ದಿವಸಕ್ಕೆ ಪ್ರತಿ ದಿವಸಕ್ಕೆ ರೂ.100/- ರೂಪಾಯಿಯಂತೆ ಲೆಕ್ಕಾ ಹಾಕಿ ಎಚ್.ಡಿ.ಎಪ್ ಸಿ ಬ್ಯಾಂಕಿನವರು ದೂರುದಾರನಿಗೆ ರೂ.1,44,100/-ಗಳ ಪೆನಾಲ್ಟಿ, ರೂ.20,000/-ಗಳ ಎ.ಟಿ.ಎಮ್. ಹಣ, ಮತ್ತು ದೂರುದಾರನಿಗೆ ಆಗಿರುವ ತೊಂದರೆ ಮತ್ತು ಮಾನಸಿಕ ಹಿಂಸೆಗೆ ರೂ.50,000/-ಗಳ ದಂಡ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ಸೇರಿ ಒಟ್ಟು ರೂ.2,24,100/- ಗಳನ್ನು ಶೇ8% ರಂತೆ ಬಡ್ಡಿ ಹಾಕಿ ನೀಡುವಂತೆ ಎಚ್.ಡಿ.ಎಫ್‌. ಸಿ ಬ್ಯಾಂಕಿಗೆ ಆಯೋಗ ಆದೇಶಿಸಿದೆ.

Nandini and Amul| ನಂದಿನಿ ಮತ್ತು ಅಮುಲ್‌ ಬ್ರ್ಯಾಂಡ್‌ ವಿಲೀನಕ್ಕೆ ವಿರೋಧ    

Published On: 05 January 2023, 03:25 PM English Summary: 2. 24 lakh heavy fine for HDFC Bank for denying ATM money!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.