1. ಸುದ್ದಿಗಳು

16 Gold ರೈತ ಕುಟುಂಬದ ರಾಘವೇಶ್‌ಗೆ ಒಲಿದ 16 ಚಿನ್ನದ ಪದಕ!

Hitesh
Hitesh
16 gold medals won by "Raghvesh" of the "farmer" family!

ರೈತ ಕುಟುಂಬದ (Farmer Family) ರಾಘವೇಶ್‌ ಎ.ಎನ್ ಎಂಬವರು 16 ಚಿನ್ನದ ಪದಕಗಳಿಗೆ ಭಾಜನರಾಗಿದ್ದು, ಇತಿಹಾಸ ನಿರ್ಮಿಸಿದ್ದಾರೆ.

ದಕ್ಷಿಣ ಕರ್ನಾಟಕದ ಪ್ರತಿಭೆಯೊಂದು ಉತ್ತರ ಕರ್ನಾಟಕದಲ್ಲಿ ಅರಳಿದೆ. ಈ ಮೂಲಕ ಇವರ ಸಾಧನೆ ಸಮಗ್ರ ಕರ್ನಾಟಕದ್ದು ಎಂದೇ ಹೇಳಬಹುದು!.  

ರೈತ ಕುಟುಂಬದ ಹಿನ್ನೆಲೆಯಿಂದ ಬಂದ ರಾಘವೇಶ್‌ ಎ.ಎನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಅವಸರದಹಳ್ಳಿಯವರು.    

ಗದಗ ಪಶುವೈದ್ಯಕೀಯ ಕಾಲೇಜಿನಲ್ಲಿ 2021-22ನೇ ಸಾಲಿನಲ್ಲಿ ಬಿವಿಎಸ್ಸಿ ಮತ್ತು ಎ.ಎಚ್. ಕೋರ್ಸ್ ಮುಗಿಸಿದ್ದು, 16 ವಿವಿಧ

ವಿಷಯಗಳಲ್ಲಿ ತಲಾ ಒಂದು ಚಿನ್ನದ ಪದಕಗಳಿಗೆ ಕೊರಳೊಡಿದ್ದಾರೆ. 

ದುಡ್ಡು ದುಡ್ಡು!ಸರ್ಕಾರದಿಂದ ಹೊಸ ಸ್ಕೀಮ್! ಸಂಬಳ ಕಡಿಮೆ ಇದ್ದರೆ ಸಾಕು! ನಿಮಗೆ ದುಡ್ಡು ಸಿಗುತ್ತೆ!

ರಾಘವೇಶ್‌, ಬ್ಯಾಚುಲರ್ ಆಫ್ ವೆಟರ್ನರಿ ಸೈನ್ಸ್ & ಅನಿಮಲ್ ಹಸ್ಪಂಡರಿ (Bvsc & Ah) ಕೋರ್ಸ್‌ನಲ್ಲಿ ಒಟ್ಟು 16 ಚಿನ್ನದ ಪದಕಗಳ ಸಾಧನೆಗೆ ಪಾತ್ರರಾಗಿದ್ದಾರೆ.   

ರೈತನ ಮಗನಿಗೆ 16 ಚಿನ್ನದ ಪದಕ…

ರಾಘವೇಶ್‌ ಅವರು ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಗೆ

ಒಳಪಡುವ ಗದಗ ಪಶುವೈದ್ಯಕೀಯ ಕಾಲೇಜಿನಲ್ಲಿ 2021-22ನೇ ಸಾಲಿನಲ್ಲಿ ಬಿವಿಎಸ್ಸಿ ಮತ್ತು ಎ.ಎಚ್. ಕೋರ್ಸ್ ಮಾಡಿದ್ದಾರೆ.  

ವಿವಿಧ 16 ವಿಷಯಗಳಲ್ಲಿ ತಲಾ ಒಂದು ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿದ್ದಾರೆ.

2023ರ ಅಕ್ಟೋಬರ್‌ 16ರಂದು ವಿಶ್ವವಿದ್ಯಾಲಯದಲ್ಲಿ ನಡೆದ 13ನೇ ಘಟಿಕೋತ್ಸವ ಸಮಾರಂಭದಲ್ಲಿ

ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅವರು ಚಿನ್ನದ ಪದಕಗಳನ್ನು ಪ್ರದಾನ ಮಾಡಿದ್ದಾರೆ.

ತಂದೆ- ತಾಯಿಗೆ ಭಾವನಾತ್ಮಕ ಕ್ಷಣ

ರಾಘವೇಶ್‌ ಅವರು ಬರೋಬ್ಬರಿ 16 ಚಿನ್ನದ ಪದಕಗಳಿಗೆ ಭಾಜನರಾಗಿರುವುದು ಅವರ ತಂದೆ- ತಾಯಿಗೆ ಭಾವನಾತ್ಮಕ ಕ್ಷಣವಾಗಿತ್ತು.

ದೂರದ ಊರಿಗೆ ಬಂದು ಹಿರಿದಾದ ಸಾಧನೆ ಮಾಡಿರುವುದಕ್ಕೆ ಅವರ ಪೋಷಕರು ಘಟಿಕೋತ್ಸವ ಸಮಾರಂಭದಲ್ಲಿ ಭಾವುಕರಾಗಿದ್ದರು. 

POST OFFICE BEST SCHEME! For Farmers! 10 ವರ್ಷಗಳಲ್ಲಿ ದುಡ್ಡು DOUBLE!

ಗದಗ ಉಪನ್ಯಾಸಕರಿಂದ ನೆರವು

ಗದಗದಲ್ಲಿ ವಿದ್ಯಾಭ್ಯಾಸ ಮಾಡುವ ಸಂದರ್ಭ ಬಂದಾಗ ಮನೆಯಲ್ಲಿ ಸಣ್ಣ ಆತಂಕವಿತ್ತು ಎನ್ನುತ್ತಾರೆ ರಾಘವೇಶ್‌.

ಅಷ್ಟು ದೂರ ಕಳುಹಿಸುವುದು ಹೇಗೆ ಎನ್ನುವ ಚಿಂತೆ ಅವರಲ್ಲಿ ಮೂಡಿತ್ತು. ಅಲ್ಲದೇ ಉತ್ತರ ಕರ್ನಾಟಕದ ಹವಾಮಾನ ಹಾಗೂ ಆಹಾರ ಪದ್ಧತಿ

ಹೊಂದಾಣಿಕೆಯಾಗುತ್ತದೆಯೇ ಎನ್ನುವ ಚಿಂತೆಯೂ ಪೋಷಕರಲ್ಲಿ ಇತ್ತು. ಮೊದಲು ಎರಡರಿಂದ ಮೂರು ತಿಂಗಳು ಅಲ್ಪ ಪ್ರಮಾಣದಲ್ಲಿ ಕಷ್ಟವಾಯ್ತು.

ಆದರೆ, ಇಲ್ಲಿನ ಉಪನ್ಯಾಸಕರು ಅತ್ಯುತ್ತಮ ಸಹಕಾರ ನೀಡಿದರು. ಪೋಷಕರು, ಉಪನ್ಯಾಸಕರು ಹಾಗೂ ಸ್ನೇಹಿತರ ಪೂರ್ಣ

ಬೆಂಬಲ ದೊರೆತದ್ದರಿಂದ ವಿದ್ಯಾಭ್ಯಾಸ ಮಾಡುವುದು ಕಷ್ಟವಾಗಲಿಲ್ಲ ಎಂದು ಸಂತಸ ಹಂಚಿಕೊಂಡರು. 

ರೈತ ವಿಜ್ಞಾನಿಯಾಗುವ ಕನಸು

ಅಪ್ಪ- ಅಮ್ಮನ ಕಣ್ಣಿನಲ್ಲಿ ಖುಷಿ ನೋಡುವುದಕ್ಕಿಂತ ಮತ್ತೊಂದು ಸಾರ್ಥಕತೆ ಎನ್ನುವುದು ಇಲ್ಲ ಎನ್ನುತ್ತಾರೆ ರಾಘವೇಶ್‌ ಎ.ಎನ್.

ನನಗೆ ಒಂದೆರಡು ಚಿನ್ನದ ಪದಕಗಳು ಬರಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, 16 ಚಿನ್ನದ ಪದಕಗಳು ಬಂದಿದ್ದು, ಖುಷಿಯನ್ನು ನೂರ್ಮಡಿಗೊಳಿಸಿದೆ.

ಮುಂದೆ ಕೃಷಿ ವಿಜ್ಞಾನಿಯಾಗಿ ಇನ್ನಷ್ಟು ಸಾಧನೆ ಮಾಡಬೇಕು ಎನ್ನುವುದು ನನ್ನ ಕನಸು.

ಭವಿಷ್ಯದಲ್ಲಿ ರೈತರಿಗೆ ಹಾಗೂ ಕೃಷಿ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುವ ಕೆಲಸವನ್ನು ಖಂಡಿತ ಮಾಡುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ರಾಘವೇಶ್‌!   

ರಾಘವೇಶ್‌ ವಿದ್ಯಾಭ್ಯಾಸ

ರಾಘವೇಶ್‌ ಅವರು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ, ಕೆ.ಎಂ.ದೊಡ್ಡಿಯ ಭಾರತಿ ಕಾಲೇಜಿನಲ್ಲಿ ಪಿ.ಯ ಪೂರ್ಣಗೊಳಿಸಿದ್ದಾರೆ.

ನಂತರ ಗದಗ ಪಶು ವೈದ್ಯಕೀಯ ಕಾಲೇಜಿನಲ್ಲಿ ಕೋರ್ಸ್‌ ಮುಗಿಸಿದ್ದಾರೆ. ಇದೀಗ ಉತ್ತರ ಪ್ರದೇಶದ ಬರೇಲಿ ಇಂಡಿಯನ್

ವೆಟರ್ನರಿ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಸ್ನಾತಕೋತ್ತರ ವೈರಾಣುಶಾಸ್ತ್ರ ಕೋರ್ಸ್ ವ್ಯಾಸಂಗದಲ್ಲಿ ತೊಡಗಿಸಿಕೊಂಡಿದ್ದಾರೆ.     

ವೈದ್ಯನಾಗುವ ಕನಸಿತ್ತು!

ರಾಘವೇಶ್‌ ಅವರಿಗೆ ಮೊದಲಿನಿಂದಲೂ ಎಂಬಿಬಿಎಸ್ ಮಾಡಬೇಕು ವೈದ್ಯನಾಗಬೇಕು ಎನ್ನುವ ಕನಸಿತ್ತು.

ಆದರೆ, ಎಂಬಿಬಿಎಸ್ ಸೀಟು ಸಿಗದೆ ಇರುವುದರಿಂದ ಬಿವಿಎಸ್ಸಿ ಮತ್ತು ಎಎಚ್ ಆಯ್ಕೆ ಮಾಡಿಕೊಳ್ಳಬೇಕಾಯಿತು.

ಈ ಆಯ್ಕೆ ಬಂದ ಸಂದರ್ಭದವನ್ನು ರಾಘವೇಶ್‌ ವಿವರಿಸುವುದು ಹೀಗೆ, ನನಗೆ ಮೊದಲಿನಿಂದಲೂ ವೈದ್ಯನಾಗುವ ಕನಸಿತ್ತು.

16 gold medals won by "Raghvesh" of the "farmer" family!

ಆದರೆ, ಅದು ಸಾಧ್ಯವಾಗಲಿಲ್ಲ. ಕೃಷಿ ಕುಟುಂಬದಿಂದ ಬಂದ ನನಗೆ ಹಾಗೂ ನಮ್ಮ ಮನೆಯವರಿಗೆ ಪಶುಗಳೊಂದಿಗೆ ಭಾವನಾತ್ಮಕ ಸಂಬಂಧವಿದೆ.

ತಂದೆಗೂ ನಾನು ಕೃಷಿ ವಿಜ್ಞಾನಿಯಾಗಬೇಕು ಎನ್ನುವ ಕನಸಿತ್ತು ಎನ್ನುತ್ತಾರೆ ರಾಘವೇಶ್.‌   

Published On: 25 October 2023, 04:18 PM English Summary: 16 gold medals won by "Raghvesh" of the "farmer" family!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.