ರಬ್ಬರ್ ಪ್ಲಾಂಟೇಶನ್ ಟ್ಯಾಪರ್‌ಗಳಿಗೆ ಕೋವಿಡ್ ನಂತರ ಬೋನಸ್ ನೀಡದೇ ಇದ್ದು, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಿಂದ ಈಗಿನ ಶೇ. 8 ರಷ್ಟು ಬೋನಸ್ ಗೆ ಶೇ.12 ರಷ್ಟು ಬೋನಸ್ ಸೇರಿಸಿ ಒಟ್ಟು 20 ರಷ್ಟು ಬೋನಸ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಇಂದಿನಿಂದ 4 ದಿನಗಳ ಕಾಲ ಕೃಷಿ ಮತ್ತು ತೋಟಗಾರಿಕೆ ಮೇಳ ಆರಂಭ!
ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿನ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಹಾಗೂ ಸಾರ್ವಜನಿಕ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೂರು ದ್ವಿಚಕ್ರ ವಾಹನ
ಎಸ್.ಸಿ, ಎಸ್.ಟಿ ಜನಾಂಗಕ್ಕೆ ಪ್ರತಿ ಕ್ಷೇತ್ರದಲ್ಲಿ ನೂರು ವಾಹನ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. 4000 ಅಂಗನವಾಡಿ, ಸರ್ಕಾರಿ ಶೌಚಾಲಯ ನಿರ್ಮಾಣ ಮಾಡಲು ಆದೇಶ ಹೊರಡಿಸಿದೆ. ಸ್ಪಂದನಾಶೀಲ ಸರ್ಕಾರ ನಮ್ಮದು ಎಂದರು.
Tamarind : ಹುಣಸೆ ಹಣ್ಣಿನಲ್ಲಿರುವ ಪೌಷ್ಠಿಕ ಮತ್ತು ಔಷಧೀಯ ಗುಣಗಳು
ಸಮೃದ್ದ ಕರ್ನಾಟಕ ನಿರ್ಮಾಣ
ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ಧಿಯಾಗುತ್ತಿದೆ. ಶಾಂತಿ ಸುವ್ಯವಸ್ಥೆ ಇದೆ. ಕರಾವಳಿಯಲ್ಲಿ ಸಂಸ್ಯೆಯಾಗಿದ್ದ ಪಿ.ಎಫ್.ಐ ನಿಷೇಧ ಮಾಡಿದೆ.
ರಾಷ್ಟ್ರ ದ್ರೋಹಿಗಳನ್ನು ಮಟ್ಟ ಹಾಕಿ, ದೇಶ, ರಾಜ್ಯ, ಜನರ ಭವಿಷ್ಯ , ಬದುಕು ಉತ್ತಮಗೊಳ್ಳಬೇಕು. 3.47 ಲಕ್ಷ ತಲವಾರು ಆದಾಯವಿರುವ ರಾಜ್ಯ ಕರ್ನಾಟಕ. ಆರ್ಥಿಕ ಸಬಲತೆ ಮೂಲಕ ಸಾಮಾಜಿಕ ಆರ್ಥಿಕ ಕಾರ್ಯಕ್ರಮ, ಶಿಕ್ಷಣಕ್ಕೆ ಒತ್ತು ನೀಡುತ್ತಿದೆ.
ವಿವೇಕ ಯೋಜನೆ, 438 ನಮ್ಮಕ್ಲಿನಿಕ್ , 100 ಸಿ.ಹೆಚ್ ಸಿ ಕೇಂದ್ರಗಳು, ಆಸ್ಪತ್ರೆ ಸೌಲಭ್ಯಗಳು ಕಾಕ್ಲಿಯರ್ ಇಂಪ್ಲಾಂಟ್ ಗೆ 500 ಕೋಟಿ, ಡಯಾಲಿಸಿಸ್ ಸೈಕಲ್ ಹೆಚ್ಚಳ ಮಾಡಿದೆ. ಸಮೃದ್ದ ಕರ್ನಾಟಕ ಕಟ್ಟಿ ನವ ಕರ್ನಾಟಕದ ನಿರ್ಮಾಣ ಮಾಡಿ ನವ ಭಾರತಕ್ಕೆ ಕಾಣಿಕೆ ನೀಡೋಣ ಎಂದರು.
PM Kisan: ಪಿಎಂ ಕಿಸಾನ್ ಯೋಜನೆಯಡಿ 5.61 ಲಕ್ಷ ರೈತರಿಗೆ ಸುಮಾರು 1130 ಕೋಟಿ!
ಕರಾವಳಿಯ ಅಭಿವೃದ್ಧಿಯಲ್ಲಿ ಕನ್ನಡ ನಾಡಿನ ಅಭಿವೃದ್ಧಿಯೂ ಇದೆ
ಡೀಸೆಲ್ ಕೋಟಾ 2 ಲಕ್ಷಕ್ಕೆ ಹೆಚ್ಚಳ, ಬೋಟುಗಳನ್ನು ಡೀಸೆಲ್ ಗೆ ಪರಿವರ್ತಿಸಲು ಶೇ 50 ರಷ್ಟು ವೆಚ್ಚವನ್ನು ಸರ್ಕಾರವೇ ಭರಿಸುವ ತೀರ್ಮಾನ ಮಾಡಲಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ನಾವು ಮಾಡುತ್ತಿದ್ದೇವೆ.
ಲಕ್ಷ ದ್ವೀಪ ಮತ್ತು ಮಂಗಳೂರು ನಡುವೆ 65 ಕೋಟಿ ರೂ.ಗಳ ಜೆಟ್ಟಿ ಬೋಟುಗಳನ್ನು ಪ್ರವಾಸೋದ್ಯಮ ಕ್ಕೆ ಅನುಕೂಲವಾಗುವ ರೀತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಮಂಗಳೂರು, ಕಾರವಾರ, ಗೋವಾ ಮತ್ತು .ಮುಂಬೈಗೆ ವಾಟರ್ ವೇ ಸೌಲಭ್ಯ ವಿಶೇಷವಾಗಿ ಜನಸಾಮಾನ್ಯರಿಗೆ ಸಂಚಾರ ಮಾಡಲು ಕಲ್ಪಿಸಲಾಗುತ್ತಿದೆ. ಕರಾವಳಿ ಬಹಳಷ್ಟು ಅಭಿವೃದ್ಧಿ ಯಾಗಬೇಕು. ಆಗ ಜಿಡಿಪಿ ಹೆಚ್ಚಾಗುತ್ತದೆ.
ಯುವಕರಿಗೆ ಕೆಲಸಕ್ಕೆ ಅವಕಾಶಗಳು ಕಲ್ಪಿಸುವ ಸಾಧ್ಯತೆ ಹೆಚ್ಚಿದ್ದು, ಕರಾವಳಿಯ ಅಭಿವೃದ್ಧಿಯಲ್ಲಿ ಕನ್ನಡ ನಾಡಿನ ಅಭಿವೃದ್ಧಿಯೂ ಇದೆ ಎಂದರು.
Share your comments