1. ಸುದ್ದಿಗಳು

ಜೂನ್‌ನಲ್ಲಿ ಚಿಕ್ಕನಾಯಕನಹಳ್ಳಿಗೆ ಹಾಗೂ ತಿಪಟೂರು ಕ್ಷೇತ್ರಗಳಿಗೆ ಎತ್ತಿನಹೊಳೆ ನೀರು: ಸಿಎಂ ಬೊಮ್ಮಾಯಿ

Kalmesh T
Kalmesh T
Ettinhola water for Chikkanayakanahalli and Tipatur constituencies in June: CM Bommai

ಎತ್ತಿನಹೊಳೆ ಯೋಜನೆಯ ಮೊದಲ ಹಂತದ ನೀರು  ಬರುವ ಜೂನ್ ತಿಂಗಳಿನಲ್ಲಿ  ಚಿಕ್ಕನಾಯಕನಹಳ್ಳಿಗೆ  ಹಾಗೂ ತಿಪಟೂರು ಕ್ಷೇತ್ರಗಳಿಗೆ  ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಬ್ಬರ್ ಪ್ಲಾಂಟೇಶನ್ ಟ್ಯಾಪರ್‌ಗಳಿಗೆ ಶೇ.12 ರಷ್ಟು ಬೋನಸ್ ಹೆಚ್ಚಳ: ಸಿಎಂ ಬೊಮ್ಮಾಯಿ ಘೋಷಣೆ

ಚಿಕ್ಕನಾಯಕನಹಳ್ಳಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ನಮ್ಮ ಸರ್ಕಾರ ಮೂರು ವರ್ಷಗಳಲ್ಲಿ ಹಲವಾರುವ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ.

ಚಿಕ್ಕನಾಯಕನಹಳ್ಳಿಯಲ್ಲಿ 31500 ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ '53 ಲಕ್ಷ ರೈತರಿಗೆ 16000 ಕೋಟಿ ರೂ. ನೀಡಲಾಗಿದೆ. ಚಿಕ್ಕನಾಯಕನಹಳ್ಳಿಯಲ್ಲಿ 31500 ರೈತರಿಗೆ ಇಂದು ಕಿಸಾನ್ ಸಮ್ಮಾನ್ ಯೋಜನೆಯಡಿ 89 ಕೋಟಿ ರೂ. ದೊರೆತಿದೆ.

ಪ್ರಧಾನ ಮಂತ್ರಿಕೃಷಿ ಸಿಂಚಯಿ ಯೋಜನೆಯಡಿ 3646 ರೈತರಿಗೆ ಲಾಭ ದೊರೆತಿದೆ. ನಗರಾಭಿವೃದ್ಧಿಯಡಿ  ಹುಳಿಯಾರು,  ಚಿಕ್ಕನಾಯಕನಹಳ್ಳಿ, ಹುಳಿಯಾರು ಪಟ್ಟಣಕ್ಕೆ ಅಮೃತ ಯೋಜನೆಯಡಿ  15 ಕೋಟಿ ರೂವೆಚ್ಚದಲ್ಲಿ 38 ಕಾಮಗಾರಿ ಕೈಗೊಂಡಿದೆ. 176 ಮಹಿಳಾ ಸ್ವಸಹಾಯ ಸಂಘಕ್ಕೆ  ರಾಜ್ಯದಲ್ಲಿ 17  ಲಕ್ಷ ರೂ.ಬಿಡುಗಡೆಯಾಗಿದೆ. 

ಜಲ್ ಜೀವನ್ ಮಿಷನ್ ಅಡಿಯಲ್ಲಿ 40 ಲಕ್ಷ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗಿದೆ. ಚಿಕ್ಕನಾಯಕನಹಳ್ಳಿಯ ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. 534 ಜನವಸರಿಯಲ್ಲಿ 50 ಸಾವಿರ  ಮನೆಗಳಿಗೆ ನೀರು ಒದಗಿಸಲಾಗಿದೆ. ಇದರಿಂದ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದರು.

ಇಂದಿನಿಂದ 4 ದಿನಗಳ ಕಾಲ ಕೃಷಿ ಮತ್ತು ತೋಟಗಾರಿಕೆ ಮೇಳ ಆರಂಭ!

ಮಾಧುಸ್ವಾಮಿ ಅವರೊಂದಿಗೆ ನಮ್ಮದು  ಮೂವತೈದು ವರ್ಷದ ಸ್ನೇಹ.  ಮಾಧುಸ್ವಾಮಿ ಅವರು ಜನರ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಜನಪರ ನಿಲುವು ತೆಗೆದುಕೊಂಡವರು. ಅಧಿಕಾರ ಇದ್ದಾಗ ತಾವು ಯಾವುದಕ್ಕಾಗಿ ಹೋರಾಟ ಮಾಡಿದ್ದರೊ ಅದರ ಅನುಷ್ಠಾನಕ್ಕೆ ತರಲು  ಕೆಲಸ ಮಾಡುತ್ತಾರೆ‌ ಎಂದರು.

ದೊಡ್ಡ ಆಸ್ತಿ

ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಸಾಕಷ್ಟು ನೀರಾವರಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. 4.50 ಟಿ. ಎಂ.ಸಿ ನೀರನ್ನು ಈ ಕ್ಷೇತ್ರದ 155 ಕೆರೆಗಳನ್ನು ತುಂಬಿಸಲಾಗುವುದು.  ಬರಗಾಲ ಪೀಡಿತವಾದ ಪ್ರದೇಶದಲ್ಲಿ ಹೇಮಾವತಿ ಹತ್ತಿರವಿದ್ದರೂ ಕೂಡ  ಎತ್ತರದ ಸ್ಥಳದ ಕಾರಣ  ಏತ ನೀರಾವರಿ ಇಂದ ಮಾತ್ರ ನೀರು ನೀಡಬಹುದು.  ಕೆಲವರು ಚುನಾವಣೆಗಾಗಿ ಕೆಲಸ ಮಾಡುತ್ತಾರೆ.

ಮುತ್ಸದ್ದಿಗಳು ಮುಂದಿನ ಜನಾಂಗದ ಬಗ್ಗೆ ಯೋಚನೆ ಮಾಡುತ್ತಾರೆ‌. ಮಾಧುಸ್ವಾಮಿ ಅವರು ಮುತ್ಸದ್ದಿ ನಾಯಕ, ಅವರು ಜನೋಪಯೋಗಿ ಶಾಸಕರು. ಮಾಧುಸ್ವಾಮಿ ಅವರು ಹತ್ತು ಹಲವಾರು ವರ್ಷಗಳ ಕಾಲ ಭೂಮಿ ತಾಯಿಗೆ ನೀರುಣಿಸುವ ಕೆಲಸ ಮಾಡಿದ್ದಾರೆ.

ಎಸ್.ಸಿ.ಎಸ್.ಟಿ ಮಕ್ಕಳಿಗೆ , ಹಿಂದುಳಿದವರಿಗೆ ಶಿಕ್ಷಣಕ್ಕೆ ಮಹತ್ವ ನೀಡಿದ್ದಾರೆ.   ರೈತರು, ಕುಡಿಯುವ ನೀರಿಗೆ ಇದರಿಂದ ಅನುಕೂಲವಾಗುತ್ತದೆ. ಮಾಧುಸ್ವಾಮಿ ಅವರು ಕಾನೂನು ಹಾಗೂ  ಸಂಸದೀಯ ವ್ಯವಹಾರಗಳ ಸಚಿವರಾಗಿ ನಮ್ಮ ಸರ್ಕಾರಕ್ಕೆ ದೊಡ್ಡ ಆಸ್ತಿ ಎಂದರು.

ಪ್ರಗತಿಯನ್ನು ಬಿಂಬಿಸುವ ಜಿಲ್ಲೆ

ಹೇಮಾವತಿ ಯೋಜನೆ  ಬ್ರಾಂಚ್ ಯಾದಾದರೂ ಹಲವಾರು ಗ್ರಾಮಗಳಿಗೆ ನೀರಿನ ಕೊರತೆಯಿದೆ. ಈ ಭಾಗದ ನೀರಾವರಿಗೆ ಅನುಮೋದನೆ ನೀಡಲಾಗಿದೆ.

ತುಮಕೂರು ಒಂದು ಕಲ್ಪವೃಕ್ಷ ನಾಡು

ಕೃಷಿ, ಕೈಗಾರಿಕೆಯಲ್ಲಿ ಅಭಿವೃದ್ಧಿ ಯಾದರೆ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗುತ್ತದೆ.  ತುಮಕೂರಿನಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ‌. ಬೆಂಗಳೂರು ನಂತರ ಅತ್ಯಂತ ಪ್ರಮುಖ ನಗರ ತುಮಕೂರು. ಕರ್ನಾಟಕದ ಪ್ರಗತಿಯನ್ನು ಬಿಂಬಿಸುವ ಜಿಲ್ಲೆಯಾಗಿದೆ ಎಂದರು.

ರೈತರಿಗೆ ಜೀವವಿಮೆ ಸೌಲಭ್ಯ ಜಾರಿ: ಸರ್ಕಾರವೇ ಭರಿಸಲಿದೆ ಬರೋಬ್ಬರಿ 180 ಕೋಟಿ ಪ್ರೀಮಿಯಂ!

ಕರ್ನಾಟಕದ ಭವಿಷ್ಯದ ಮುನ್ನುಡಿಯನ್ನು ತುಮಕೂರು ಬರೆಯಲಿದೆ

ದುಡಿಯುವ ಕೈಗೆ ಕೆಲಸ ಕೊಡುವ ಕೆಲಸವಾಗಿದೆ. ವಿಶೇಷ ಹೂಡಿಕೆ ಪ್ರದೇಶವನ್ನು ಮಾಡಲಾಗಿದೆ. ಕೈಗಾರಿಕಾ ಅಭಿವೃದ್ಧಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಕಾನೂನು ಪೂರಕವಾಗಿದೆ. 

ಕರ್ನಾಟಕದ ಭವಿಷ್ಯದ ಮುನ್ನುಡಿಯನ್ನು  ತುಮಕೂರು ಬರೆಯಲಿದೆ ಎಂದರು. ಸಚಿವರಾದ ಜೆ.ಸಿ.ಮಾಧುಸ್ವಾಮಿ, ಕೋಟ ಶ್ರೀನಿವಾಸ  ಪೂಜಾರಿ,  ಬಿ.ಸಿ.ನಾಗೇಶ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Published On: 17 March 2023, 04:39 PM English Summary: Ettinhola water for Chikkanayakanahalli and Tipatur constituencies in June: CM Bommai

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.