1. ತೋಟಗಾರಿಕೆ

ವೈಜ್ಞಾನಿಕವಾಗಿ ದಾಳಿಂಬೆ ಬೆಳೆಯಲ್ಲಿ ಸೊರಗು ರೋಗ ನಿಯಂತ್ರಣ ಮಾಡುವುದು ಹೇಗೆ ಗೊತ್ತಾ?

KJ Staff
KJ Staff

ಸೊರಗು ರೋಗವು ದಾಳಿಂಬೆಯ ಒಂದು ಪ್ರಮುಖ ರೋಗವಾಗಿದ್ದು, ಸಾಮಾನ್ಯವಾಗಿ ದಾಳಿಂಬೆ ಬೆಳೆಯುವ ಎಲ್ಲ ಪ್ರದೇಶಗಳಲ್ಲಿ ಕಂಡು ಬರುತ್ತದೆ. ರೋಗದ ತೀವ್ರತೆ ಹೆಚ್ಚಾದರೆ  ಶೇ. 40-50 ಹಾನಿಯಾಗುವ ಸಾಧ್ಯತೆಯಿದೆ.. ಈ ರೋಗ ಬಂದ ಗಿಡಗಳು ತಕ್ಷ ಣ ಸಾಯುವುದರಿಂದ ಎಕರೆವಾರು ಉತ್ಪಾದನೆ ಪ್ರಮಾಣ ಇಳಿಮುಖವಾಗುತ್ತದೆ.

★ಸೊರಗು ರೋಗದ ಲಕ್ಷಣಗಳು :

ರೋಗ ತಗುಲಿದ ಗಿಡದಲ್ಲಿ ಒಂದು ಟೊಂಗೆ ಹಳದಿ ಬಣ್ಣಕ್ಕೆ ತಿರುಗಿ ಸುಮಾರು 15 ದಿವಸಗಳ ನಂತರ ಒಣಗಲು ಪ್ರಾರಂಭಿಸುತ್ತದೆ. ಈ ಟೊಂಗೆ ಒಣಗಿದ 15 ದಿನಗಳ ನಂತರ ಮತ್ತೊಂದು ಟೊಂಗೆ ಒಣಗುತ್ತಾ ಹೀಗೆ ಮುಂದುವರೆದು ಇಡಿ ಗಿಡವೂ ಒಣಗುತ್ತದೆ. ಕಾಯಿ ಕಟ್ಟುವ ಹಂತದಲ್ಲಿ ಈ ಲಕ್ಷಣಗಳು ಹೆಚ್ಚಿಗೆ ಕಂಡುಬರುತ್ತವೆ.

 ಒಣಗಿದ ಗಿಡದ ಕಾಂಡವನ್ನು ಕತ್ತರಿಸಿ ನೋಡಿದಾಗ ಕಂದು ಬಣ್ಣದ ಅಥವಾ ನೇರಳೆ ಬಣ್ಣದ ಮಚ್ಚೆಗಳು ಕಂಡು ಬರುವವು. ಗಿಡ ಸಾಯುವುದಕ್ಕೆ ಮುಂಚೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವವು,ಬುಡಭಾಗದ ಕಾಂಡವು ನೇರವಾಗಿ ಸೀಳುವ ಲಕ್ಷಣಗಳನ್ನು ಕಾಣಬಹುದು.

★ ನಿರ್ವಹಣಾ ಕ್ರಮಗಳು :

*ಒಣಗುತ್ತಿರುವ ದಾಳಿಂಬೆ ಗಿಡಗಳಲ್ಲಿ ಕಾಂಡದ ಗುಂಡು ರಂಧ್ರ ಕೊರಕಗಳು ( ಶಾಟ್ ಹೋಲ್ ಬೋರೆರ್ ) ಮತ್ತು ಸೊರಗು ರೋಗಕ್ಕೆ ಕಾರಣವಾಗುವ ಶಿಲೀಂದ್ರ ರೋಗಾಣು ( ಸೆರೆಟೊಸಿಸ್ಟಿಸ್  ಪಿಂಬ್ರಿಯೇಟ್ ) ಹಾಗೂ ಸಸ್ಯ ಜಂತುಗಳು ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು.

* ತೋಟದಲ್ಲಿನ ಎಲ್ಲಾ ದಾಳಿಂಬೆ ಗಿಡಗಳಿಗೆ ಪ್ರತಿ ಗಿಡಕ್ಕೆ ನೆಲದಿಂದ ಮೇಲೆ ಎರಡು ಅಡಿ ಎತ್ತರದ ಕಾಂಡದ ಸುತ್ತಲೂ 4 ಮಿ.ಲೀ    ಕ್ಲೋರೋಪೈರಿಫಾಸ್20 ಇ.ಸಿ. ಔಷಧದ ಜೊತೆಗೆ 2 ಗ್ರಾಂ ಕಾರ್ಬನ್‌ಡೈಜಿಮ್ 50 ಡಬ್ಲೂ.ಪಿ . ಅಥವಾ 1 ಮಿ.ಲೀ ಪ್ರೋಪಿಕೋನೋಜೋಲ  25 ಇ.ಸಿ,   ಬೆಳೆ  ಕಾಂಡ ಹೊಯ್ಯವಂತ ಹಾಗೂ ಬೇರುಗಂಟು  ಬುಡದ ಮಣ್ಣಿನಲ್ಲಿ ಸೇರುವಂತೆ ಚೆನ್ನಾಗಿ ಉಣಿಸಬೇಕು.

*ಇದೇ ಉಪಚಾರವನ್ನು ಒಂದು ತಿಂಗಳ ನಂತರ ಮತ್ತೊಮ್ಮೆ ಮಾಡಬೇಕು, ಮೂರು ವರ್ಷಕ್ಕೆ ಮೇಲ್ಪಟ್ಟ ವಯಸ್ಸಿನ ಪ್ರತಿ ಗಿಡಕ್ಕೆ ಸುಮಾರು 5-8 ಲೀಟರ್ ಸಿದ್ದಪಡಿಸಿದ ದ್ರಾವಣ ಬೇಕಾಗುತ್ತದೆ.

*ಉಪಚಾರದ ಪೂರ್ವದಲ್ಲಿ  ಕನಿಷ್ಠ ಒಂದು ವಾರ ಮುಂಚೆ  ಮತ್ತು ಉಪಚರಿಸಿದ ನಂತರ ಎರಡು ದಿನಗಳವರೆಗೆ ಗಿಡಗಳಿಗೆ ನೀರು ಉಣಿಸಬಾರದು, ಬಾಧಿತ ಪ್ರದೇಶದಲ್ಲಿ ಈ ಉಪಚಾರವನ್ನು ವರ್ಷದಲ್ಲಿ ಕನಿಷ್ಠ ಎರಡು ಸಲ ಅಂದರೆ ಮೇ -ಜೂನ್ ಹಾಗೂ ನವೆಂಬರ್- ಡಿಸೆಂಬರ್ ತಿಂಗಳುಗಳಲ್ಲಿ ತಪ್ಪದೇ ಅನುಸರಿಸಬೇಕು ಜೈವಿಕ ಮಿಶ್ರಣ ( ಟ್ರೈಕೊಡರ್ಮಾ ಹಾರ್ಜಿಯಾನಮ್, ಸೊಡೋಮೋನಾಸ್ ಫ್ಲೋರೆಸೆನ್ಸ್, ಪೆಸಿಲೊಮೈಸಿಸ್ ಲಿಲಾಸಿನಸ್ 50 ಗ್ರಾಂ, ನಂತ ಗಿಡಕ್ಕೆ ನಾಟಿ ಮಾಡುವ ಸಮಯದಲ್ಲಿ ಮಣ್ಣಿಗೆ ಹಾಕಬೇಕು ಹಾಗೂ 6 ತಿಂಗಳ ಅಂತರದಲ್ಲಿ ಪುನರಾವರ್ತಿಸಬೇಕು.

* ಚಾಟನಿಯಾದ ನಂತರ ಮಣ್ಣಿಗೆ ಪೆಸಿಲೋಮೈಸಿಸ್ ಲಿಲಾಸಿನಸ್ 50 ಗ್ರಾಂ , ಫೋರೇಟ್ 10 ಜಿ . 10-20 ಗ್ರಾಂ ಅಥವಾ ಕಾರ್ಬೋಫ್ಯೂರಾನ್ 3 ಜಿ. 20-40 ಗ್ರಾಂ  ನಂತೆ ಒಂದು ಗಿಡಕ್ಕೆ ಹಾಕಬೇಕು.

* ಅಂತರ ಬೆಳೆಯಾಗಿ ಆಫ್ರಿಕನ್ ಚಂಡು ಹೂವನ್ನು ಬೆಳೆಯುವುದು . ಅಜಾಡಿರಕ್ಟಿನ್  1 % 2 ಮಿ.ಲೀ / ಲೀ ದ್ರಾವಣವನ್ನು ಪ್ರತಿ ಗಿಡಕ್ಕೆ 5 ಲೀಟರ್ ನಂತೆ ಮಣ್ಣಿಗೆ ಸುರಿಯಬೇಕು.

ಲೇಖನ:ಮುತ್ತಣ್ಣ ಬ್ಯಾಗೆಳ್ಳಿ

Share your comments

Top Stories

View More

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.