1. ತೋಟಗಾರಿಕೆ

ಮಾವಿನ ಬೆಳೆ: ರೈತರು ಕೈಗೊಳ್ಳಬೇಕಾದ ನಿರ್ವಹಣಾ ಕ್ರಮಗಳು

ಕಲಬುರಗಿ ಜಿಲ್ಲೆಯಲ್ಲಿ ಮಾವು ಬೆಳೆದ ರೈತರು ಡಿಸೆಂಬರ್ ತಿಂಗಳಿನಲ್ಲಿ ಈ  ಕೆಳಕಂಡ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಲಬುರಗಿ (ರಾ.ವ.) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ರೈತರು ಮಾವಿನ ಗಿಡಗಳಿಗೆ ನೀರು ಹಾಯಿಸುವುದನ್ನು ನಿಲ್ಲಿಸಬೇಕು. ವಿಕೃತಗೊಂಡಿರುವ ಹೂ ಗೊಂಚಲು ಮತ್ತು ರೆಂಬೆಗಳನ್ನು ಕತ್ತರಿಸಿ, ಕತ್ತರಿಸಿದ ಭಾಗಕ್ಕೆ ತಾಮ್ರದ ಆಕ್ಸಿಕ್ಲೋರೈಡ್ ಮುಲಾಮನ್ನು ಹಚ್ಚಬೇಕು. ನಂತರ ನ್ಯಾಪ್ತಾಲ್ ಆಸಿಟಿಕ್ ಆಸಿಡ್ (ಫ್ಲಾನೋಪಿಕ್ಸ್) 0.25 ಮಿ.ಲೀ./ಲೀ ದ್ರಾವಣದಿಂದ ಸಿಂಪಡಣೆ ಮಾಡಬೇಕು. 

ಮಾವಿನ ಜಿಗಿಹುಳು ಹತೋಟಿಗೆ ಮೊದಲನೆಯದಾಗಿ ಹೂ-ಗೊಂಚಲು ಅರಳುವ ಮುಂಚೆ / ಹೂವಿನ ಮೊಗ್ಗು ಒಡೆಯುವ ಸಂದರ್ಭದಲ್ಲಿ ಇಮಿಡಾಕ್ಲೋಪ್ರಿಡ್ 17.8 (ಕಾನ್ಫಿಡಾರ್, ಇಮಿಡಾಗೋಲ್ಡ್, ಟಾಟಾಮಿಡಾ) (0.3 ಮಿ.ಲೀ./ಲೀ.) ನ್ನು ಸಿಂಪಡಣೆ ಮಾಡಬೇಕು.

ಇದನ್ನೂ ಓದಿ:ಬಾಳೆಹಣ್ಣಿನ ಭ್ರೂಣದಿಂದ ಸಸ್ಯೋತ್ಪಾದನೆ ಕುರಿತು ಒಂದು ತಿಂಗಳ ತರಬೇತಿ

ರೈತರು ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಐವಾನ್ ಶಾಹಿ ರಸ್ತೆಯಲ್ಲಿರುವ ತೋಟಗಾರಿಕೆ  ಇಲಾಖೆಯ (ಹಾರ್ಟಿ ಕ್ಲಿನಿಕ್) ವಿಷಯ ತಜ್ಞರಾದ  ಮಂಜುನಾಥ್ ಇವರ ಮೊಬೈಲ್ ಸಂಖ್ಯೆ 7259984026ಗೆ ಸಂಪರ್ಕಿಸಲು ಕೋರಲಾಗಿದೆ.

Published On: 10 December 2020, 05:09 PM English Summary: Mango pest management

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.