1. ತೋಟಗಾರಿಕೆ

ಮಾವಿನ ಹಣ್ಣಿನ ಪ್ರಮುಖ ತಳಿಗಳ ಬಗ್ಗೆ ಇಲ್ಲಿದೆ ಮಾಹಿತಿ

Kalmesh T
Kalmesh T
Important varieties of mango fruit

ಮಾವು ನಮ್ಮ ರಾಷ್ಟ್ರದ ಪ್ರಮುಖ ಹಣ್ಣಿನ ಬೆಳೆಯಾಗಿದೆ ಹಣ್ಣುಗಳ, ರುಚಿಕರವಾಗಿದ್ದು ''ಎ' ಮತ್ತು 'ಸಿ' ಜೀವಸತ್ವಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ.

ಮಾವಿನ ಹಣ್ಣುಗಳನ್ನು ತಾಜಾರೂಪದಲ್ಲಿ ಮತ್ತು ಸಂಸ್ಕರಿಸಿದ ಪದಾರ್ಥಗಳ ರೂಪದಲ್ಲಿ ಉಪಯೋಗಿಸುತ್ತಾರೆ. ವಿದೇಶಗಳಲ್ಲಿ ಈ ಹಣ್ಣಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಹಣ್ಣು ಹಾಗೂ ಸಂಸ್ಕರಿಸಿದ ಪದಾರ್ಥಗಳನ್ನು ರಫ್ತು ಮಾಡಲಾಗುತ್ತಿದೆ.

ಮಣ್ಣು: ಮಾವಿನ ಬೆಳೆಯನ್ನುಎಲ್ಲಾವಿಧವಾದ, ಆಳವಾದ, ಚೆನ್ನಾಗಿ ನೀರು ಬಸಿದುಹೋಗುವಂತಹ ಮಣ್ಣಿನಲ್ಲಿ ಬೆಳೆಯಬಹುದು.

ಕೆಂಪುಗೋಡು ಮಣ್ಣು ಅತೀ ಸೂಕ್ತ ಸವಳು, ಚೌಗು ಮತ್ತು ಬಿರುಸಾದ ಒಳಪದರಗಳನ್ನು ಹೊಂದಿದ ಭೂಮಿ ಮಾವು ಕೃಷಿಗೆ ಸೂಕ್ತವಲ್ಲ. ಧಾರವಾಡ ಹಾಗೂ ಬೆಳಗಾವಿ ಪ್ರದೇಶಗಳಲ್ಲಿರುವ ಕೆಂಪು ಮಣ್ಣು ವಿಶೇಷವಾಗಿ ಸೂಕ್ತವಾಗಿದೆ.

ನಾಟಿ ಕಾಲ : ಜೂನ್ - ಜುಲೈ ತಿಂಗಳಿನಲ್ಲಿ ನಾಟಿ ಮಾಡಲು ಅತೀ ಸೂಕ್ತ

ಮಾವಿನ ತಳಿಗಳು

1 ಆಲ್ಫಾನ್ಸ್ (Alphanso Mango): ಇದು ಅತಿ ಜನಪ್ರಿಯವಾದ ಸಾಮಾನ್ಯ ಗಾತ್ರದ ಉತ್ಕೃಷ್ಟ ಗುಣಮಟ್ಟದ ಹಣ್ಣು ಕೊಡುವ ತಳಿಯಾಗಿದ್ದು, ತಾಜಾ ಇಲ್ಲವೇ ಸರಣೆಯಾಗಿ ಉಪಯೋಗಿಸಬಹುದು. 

ಈ ತಳಿಯು ಹೆಚ್ಚು ಮಳೆ ಮತ್ತು ತೇವಾಂಶಗಳಿಂದ ಕೂಡಿದ ಅರೆಮಲೆನಾಡು ಪ್ರದೇಶಗಳಲ್ಲಿ ಬಹಳ ಚೆನ್ನಾಗಿ ಬೆಳೆಯುತ್ತದೆ.

2. ಪೈರಿ (Payari Mango): ಇದು ಬೇಗ ಮಾಗುವ ತಳಿಯಾಗಿದ್ದು, ಮಧ್ಯಮ ಗಾತ್ರದ ಹಣ್ಣುಗಳನ್ನು ಕೊಡುತ್ತದೆ. ಹಣ್ಣುಗಳು ರುಚಿಕರ ಹಾಗೂ ರಸಭರಿತವಾಗಿದ್ದು ನಾರುರಹಿತ ತಿರುಳಿನಿಂದ ಕೂಡಿದೆ. 

3. ತೋತಾಪುರಿ (Totapuri Mango): ಇದು ಪ್ರತಿ ವರ್ಷ ತಡವಾಗಿ ಇಳುವರಿ ಕೊಡುವ ತಳಿಯಾಗಿದ್ದು, ದೊಡ್ಡ ಗಾತ್ರದ ಹಣ್ಣುಗಳನ್ನು ಕೊಡುತ್ತದೆ. ಆದರೆ ಹಣ್ಣಿನ ರುಚಿ ಇತರ ತಳಿಗಳಷ್ಟು ಉತ್ತಮವಾಗಿಲ್ಲ. ಹಣ್ಣನ್ನು ಹೆಚ್ಚು ಕಾಲ ಕೆಡದಂತೆ ಇಡಬಹುದು. ಒಣ ಪ್ರದೇಶಗಳಲ್ಲೂ ಚೆನ್ನಾಗಿ ಬೆಳೆಯಬಹುದು

Important varieties of mango fruit

4. ಮಲ್ಲೋವ (Malgoa Mango): ಇದು ಕಡಿಮೆ ಸಂಖ್ಯೆಯ ಹಣ್ಣು ಕೊಡುವ ತಳಿಯಾಗಿದ್ದು ದೊಡ್ಡ ಗಾತ್ರದ ಉತ್ತಮ ಗುಣಮಟ್ಟದ ರುಚಿಕರವಾದ ಹಣ್ಣುಗಳನ್ನು ಕೊಡುತ್ತದೆ. 

5. ನೀಲಂ (Neelam Mango): ಇದು ತಡವಾಗಿ ಬರುವ ತಳಿಯಾದರೂ ಪ್ರತಿ ವರ್ಷ ನಿಯಮಿತವಾಗಿ ಇಳುವರಿ ಕೊಡುತ್ತದೆ ತಡವಾಗಿ ಮಾಗುವ ತಳಿಯಾದುದರಿಂದ ಓಟಿಕೊರಕ ಕೀಟದ ಬಾಧೆಗೆ ತುತ್ತಾಗುತ್ತನೆ. ಒಣ ಪ್ರದೇಶಗಳಲ್ಲಿ ಬೆಳೆಯಲು ಸೂಕ್ತವಾಗಿದೆ.

6. ಬೆನೆಶಾನ್ ಬ0ಗನಪಲ್ಲಿ (Banganapalle mango): ಒಣ ಪ್ರದೇಶಗಳಲ್ಲಿ ಬೆಳೆ ಏಲು ಸೂಕ್ತ ತಳಿಯಾಗಿದ್ದು, ಹಣ್ಣಿನ ಗಾತ್ರ ಗುಣಮಟ್ಟ ಉತ್ತಮವಾಗಿದೆ. 

Important varieties of mango fruit

7. ಖಾದರ್ (khadar mango): ಇದು ಅಲ್ಲಾನ್ನೋ ಮಾವಿನ ತಳಿಯ ಆಯ್ಕೆಯಾಗಿದ್ದು, ಒಣ ಪ್ರದೇಶಕ್ಕೆ ಹೆಚ್ಚು ಸೂಕ್ತವಾಗಿದೆ. 

8. ಪಂಚಧಾರಾ ಕಳಸ (Panchadara Kalasa): ಇದು ರಸಭರಿತ ತಳಿಯಾಗಿದ್ದು ಪೈರಿ ತಳಿಯ ಬದಲಾಗಿ ಬೆಳೆಯಬಹುದು. ಇದು ವೈರಿ ಚಳಿಗಿಂತ ಹೆಚ್ಚು ಇಳುವರಿ ಕೊಡುತ್ತದೆ. 

9. ದಶಹರಿ (Dasheri Mango): ಈ ತಳಿ ಉತ್ತರ ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ಹಣ್ಣಿನ ತಿರುಳು ನಾರಿನಿಂದ ಮುಕ್ತವಾಗಿದ್ದು, ರುಚಿಕರವಾಗಿದೆಯಲ್ಲದೇ, ಸುವಾಸನೆಯಿಂದ ಕೂಡಿದೆ. ಹಣ್ಣಿಗೆ ಉತ್ತಮ ಬಾಳಿಕೆ ಕೂಡ ಇದೆ. 

10. ಮಲ್ಲಿಕಾ (Mallika mango) : ಇದು ಸಾಧಾರಣದಿಂದ ಉತ್ತಮ ಇಳುವರಿ ಕೊಡುವ ತಳಿಯಾಗಿದ್ದು, ಹೆಚ್ಚು-ಕಡಿಮೆ ಪ್ರತಿವರ್ಷ ಇಳುವ ಕೊಡವ ಗುಣಧರ್ಮವನ್ನು ಹೊಂದಿದೆ.

ಹಣ್ಣು ಹೆಚ್ಚು ರುಚಿಯಾಗಿದ್ದು, ಗಾತ್ರ ದೊಡ್ಡವಾಗಿದ್ದು, ನಾರುರಹಿತ ಗಟ್ಟಿಯಾದ ತಿರುಳನ್ನು ಮತ್ತು ಚಿಕ್ಕ ಓಟೆಯನ್ನು ಹೊಂದಿರುತ್ತದೆ. ಹಣ್ಣನ್ನು ಹೆಚ್ಚು ಕಾಲ ಕೆಡದಂತೆ ಇಡಬಹುದು.

Azolla: ಜಾನುವಾರುಗಳಿಗೆ ಸೂಕ್ತ ಪೌಷ್ಟಿಕ ಆಹಾರ ಅಜೋಲಾ! ಬೆಳೆಯುವುದು ಹೇಗೆ?

Published On: 24 April 2023, 03:36 PM English Summary: Important varieties of mango fruit

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.