1. ಆರೋಗ್ಯ ಜೀವನ

ನೀವು ಅತಿಯಾಗಿ ನಿದ್ದೆ ಮಾಡ್ತೀರಾ? ಹಾಗಿದ್ರೆ ನಿಮಗೆ ಹೈಪರ್ಸೋಮ್ನಿಯಾ ಖಾಯಿಲೆ ಇರಬಹುದು ಗೊತ್ತೆ?

Kalmesh T
Kalmesh T
What is hypersomnia? How to fix hypersomnia? Here is the details Image Courtesy : Pexels

What is hypersomnia? : ನೀವು ರಾತ್ರಿ ಚೆನ್ನಾಗಿ ನಿದ್ದೆಯಾದ ಮೇಲೂ ಹಗಲಿನಲ್ಲಿ ಮತ್ತೆ ಮತ್ತೆ ನಿದ್ರೆ ಮಾಡುತ್ತೀರಾ? ಹಾಗಿದ್ದರೆ ಗಮನಿಸಿ ಈ ಕಾಯಿಲೆಯ ಕಾರಣದಿಂದ ನಿಮಗೆ ಹೆಚ್ಚು ನಿದ್ದೆಯ ಮಂಪರು ಬರುತ್ತಿರಬಹುದು.

What are the signs of hypersomnia? : ನಿಮಗೆ ಅತಿಯಾಗಿ ನಿದ್ರೆ (Over sleep) ಬರತ್ತಾ? ಹಾಗಿದ್ರೆ ಇದು ಒಳ್ಳೆಯ ಲಕ್ಷಣ ಅಲ್ಲ ಗೊತ್ತಾ! ಅತಿಯಾಗಿ ನಿದ್ದೆ ಮಾಡುವುದರಿಂದ ಆರೋಗ್ಯದ ಮೇಲೆ ಕೆಲವು ಪರಿಣಾಮಗಳು ಆಗಲಿವೆ. ಇಲ್ಲಿದೆ ಈ ಕುರಿತಾದ ಮಾಹಿತಿ

ನೀವು ಹಲವಾರು ಗಂಟೆಗಳ ಕಾಲ ನಿದ್ರಿಸುತ್ತಿದ್ದರೆ , ಇದು ಅಪಾಯಕಾರಿ ಕಾಯಿಲೆಯಾಗಿದೆಯಂತೆ. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವೆಂದು ಕೂಡ ಹೇಳುತ್ತಿವೆ ಸಂಶೋಧನೆಗಳು.

ಕೆಲವರು ಹೆಚ್ಚು ನಿದ್ದೆ ಮಾಡಲು ಇಷ್ಟಪಡುತ್ತಾರೆ ಮತ್ತು ಕೆಲವರು ಕಡಿಮೆ ನಿದ್ದೆ ಮಾಡಲು ಇಷ್ಟಪಡುತ್ತಾರೆ. ರಾತ್ರಿ 8-10 ಗಂಟೆಗಳ ಕಾಲ ಮಲಗಿದ ನಂತರವೂ ಅನೇಕರಿಗೆ ಹಗಲಿನಲ್ಲಿಯೂ ನಿದ್ರೆ ಬರುತ್ತದೆ.

ಆದರೆ, ಇಷ್ಟು ಹೊತ್ತು ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ನಿಮಗೆ ಗೊತ್ತೇ. ಅತಿಯಾದ ನಿದ್ರೆಯ ಸಮಸ್ಯೆಯು ಒಂದು ಕಾಯಿಲೆಯಾಗಿದೆ, ಇದು ಹೈಪರ್ಸೋಮ್ನಿಯಾದಿಂದ (hypersomnia) ಉಂಟಾಗುತ್ತದೆ.

ಈ ಕಾಯಿಲೆಯಿಂದಾಗಿ, ರಾತ್ರಿಯಿಡೀ ಮಲಗಿದ ನಂತರವೂ ಒಬ್ಬ ವ್ಯಕ್ತಿಯು ಹಗಲಿನಲ್ಲಿ ನಿದ್ರಿಸುತ್ತಾನೆ . ಇದರಿಂದ ನಿಮ್ಮ ಮನಸ್ಸು ಇಡೀ ದಿನ ಕೆಲಸದಲ್ಲಿ ತೊಡಗಿರುವುದಿಲ್ಲ.

ವೈದ್ಯರ ಪ್ರಕಾರ, ಈ ರೋಗದ ನಿಖರವಾದ ಕಾರಣದ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿಯಿಲ್ಲ, ಆದರೆ ಕೆಲವು ಸಂಶೋಧನೆಗಳು ಈ ರೋಗವು ಆನುವಂಶಿಕ ಕಾರಣಗಳಿಂದ ಉಂಟಾಗಬಹುದು ಎಂದು ತಿಳಿಸಿದ್ದಾರೆ.

ಸ್ಥೂಲಕಾಯತೆಯಿಂದ ಬಳಲುತ್ತಿರುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ . ಅನೇಕ ಸಂದರ್ಭಗಳಲ್ಲಿ ಇದು ಪಾರ್ಕಿನ್ಸನ್ ಕಾಯಿಲೆಯ ಕಾರಣದಿಂದಾಗಿರಬಹುದು.

ಮಾನಸಿಕ ಸ್ಥಿತಿಯಲ್ಲಿ ಅಸ್ಥಿರತೆ

ಎಐಐಎಂಎಸ್‌ನ (AIIMS) ಮಾಜಿ ಮನೋವೈದ್ಯ ಡಾ. ರಾಜ್‌ಕುಮಾರ್ ಅವರ ಪ್ರಕಾರ , ನಿಮ್ಮ ಮಾನಸಿಕ ಸ್ಥಿತಿ ಉತ್ತಮವಾಗಿರದಿದ್ದರೆ ಮತ್ತು ನೀವು ಖಿನ್ನತೆಗೆ ಒಳಗಾಗಿದ್ದರೆ, ಅದು ಸಹ ಪರಿಣಾಮ ಬೀರಬಹುದು ಎನ್ನುತ್ತಾರೆ.

ಅಂತಹ ಪರಿಸ್ಥಿತಿಯಲ್ಲಿ, ರೋಗಿಯು ಹೈಪರ್ಸೋಮ್ನಿಯಾಗೆ ಬಲಿಯಾಗಬಹುದು. ಈ ಸಮಸ್ಯೆಯು 30 ರಿಂದ 40 ವರ್ಷ ವಯಸ್ಸಿನವರಲ್ಲಿ ಹೆಚ್ಚು ಸಾಮಾನ್ಯವಾಗಿದ್ದರೂ ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು.

ರೋಗವನ್ನು ಗುಣಪಡಿಸುವುದು ಹೇಗೆ? | How do you fix hypersomnia?

ಹೈಪರ್ಸೋಮ್ನಿಯಾಕ್ಕೆ ಹಲವು ಸಂಭವನೀಯ ಕಾರಣಗಳಿವೆ. ಇತರ ಜನರಿಗಿಂತ ನಿಮಗೆ ಹೆಚ್ಚು ನಿದ್ರೆ ಬೇಕು ಎಂಬುದಕ್ಕೆ ಇದು ಸಂಕೇತವಾಗಿದೆ.

ಈ ರೋಗದ ಲಕ್ಷಣಗಳನ್ನು ನೀವು ಅನುಭವಿಸಿದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿ. ನಿಮ್ಮ ವೈದ್ಯಕೀಯ ಇತಿಹಾಸದ ಬಗ್ಗೆ ಮಾಹಿತಿ ಪಡೆದ ನಂತರ ವೈದ್ಯರು ಸಮಸ್ಯೆಗೆ ಚಿಕಿತ್ಸೆ ನೀಡುತ್ತಾರೆ.

ಪ್ರಸ್ತುತ ನೀವು ರಾತ್ರಿಯಲ್ಲಿ ಎಷ್ಟು ಹೊತ್ತು ಮಲಗುತ್ತೀರಿ ಮತ್ತು ನೀವು ಯಾವುದೇ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದೀರಾ ಎಂಬ ಸಂಪೂರ್ಣ ಮಾಹಿತಿಯನ್ನು ನೀವು ಹೊಂದಿರಬೇಕು.

ಈ ಸ್ಥಿತಿಗೆ ಚಿಕಿತ್ಸೆ ನೀಡಲು ವೈದ್ಯರು ಖಿನ್ನತೆ-ಶಮನಕಾರಿಗಳನ್ನು ಶಿಫಾರಸು ಮಾಡಬಹುದು. ಈ ಸ್ಥಿತಿಯ ಚಿಕಿತ್ಸೆಗಾಗಿ, ನೀವು ಮನೋವೈದ್ಯರ ಸಹಾಯವನ್ನು ತೆಗೆದುಕೊಳ್ಳಬೇಕು ಕೂಡ.

ನಿಮಗೆ ಸದಾ ಸುಸ್ತು, ನಿಶ್ಯಕ್ತಿ, ಯಾವುದರಲ್ಲೂ ಆಸಕ್ತಿ ಇಲ್ಲದಂತಾಗಿದೆಯೇ? ಹಾಗಿದ್ದರೆ ತಪ್ಪದೇ ಇದನ್ನು ಓದಿರಿ

Published On: 27 June 2023, 06:41 PM English Summary: What is hypersomnia? How to fix hypersomnia? Here is the details

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.